ಮಧುಕರ ವೃತ್ತಿ ಎನ್ನದು
ರಚನೆ : ಶ್ರೀ ಪುರಂದರ ದಾಸರು
ಮಧುಕರ ವೃತ್ತಿ ಎನ್ನದು ಅದು ಬಲು ಚೆನ್ನದು || ಪಲ್ಲವಿ ||ಪದುಮನಾಭನ ಪಾದಪದುಮ ಮಧುಪವೆಂಬ || ಅನು ಪಲ್ಲವಿ ||
ಕಾಲಿಗೆ ಗೆಜ್ಜೆ ಕಟ್ಟಿ ನೀಲ ವರ್ಣನ ಗುಣ
ಆಲಾಪಿಸುತ್ತ ಬಲು ಓಲಗ ಮಾಡುವಂಥ || ೧ ||
ರಂಗನಾಥನ ಗುಣ ಹಿಂಗದೆ ಪಾಡುತ್ತ
ಶೃಂಗಾರ ನೋಡುತ್ತಾ ಕಂಗಳಾನಂದವೆಂಬ || ೨ ||
ಇಂದಿರಾಪತಿ ಪುರಂದರವಿಠಲನಲ್ಲಿ
ಚೆಂದದ ಭಕ್ತಿಯಿಂದಾನಂದವ ಪಡುವಂಥ || ೩ ||
Madhukara vrutti ennadu
Composer: Sri Purandara Dasaru
Padumanabana padapaduma madhupavemba || anu pallavi ||
Kalige gejje katti nila varnana guna
Alapisutta balu olaga maduvantha || 1 ||
Ranganathana guna hingade padutta
Sringara nodutta kangalanandavemba || 2 ||
Indirapati purandaravithalanalli
chendada baktiyindanandava paduvantha || 3 ||
Listen to song by Shri Vidyabhushana
Listen to song by Shri Shankar Shanbhogue
No comments:
Post a Comment