Pages

Showing posts with label Lord Hanuman. Show all posts
Showing posts with label Lord Hanuman. Show all posts

Saturday, May 9, 2020

ಇದು ಏನೊ ಚರಿತ ಯಂತ್ರೋದ್ಧಾರ / Idu Eno charita yantroddhara


ಇದು ಏನೊ ಚರಿತ ಯಂತ್ರೋದ್ಧಾರ



ರಚನೆ : ಗೋಪಾಲ ದಾಸರು 


ಇದು ಏನೊ ಚರಿತ ಯಂತ್ರೋದ್ಧಾರ ||pa||

ಇದು ಏನೊ ಚರಿತ ಶ್ರೀಪದುಮನಾಭನ ದೂತ

ಸದಾ ಕಾಲದಲಿ ಸರ್ವರ ಹೃದಯಾಂತರ್ಗತ ||a.pa||

ವಾರಿಧಿ ಗೋಷ್ಪಾದನೀರಂತೆ ದಾಟಿದೆ

ಧೀರ ಯೋಗಾಸನಧಾರಿಯಾಗಿಪ್ಪೊದು ||

ದುರುಳ ಕೌರವರನ್ನು ವರಗದೆಯಲಿ ಕೊಂದ

ಕರದಲ್ಲಿ ಜಪಮಾಲೆ ಧರಿಸಿ ಎಣಿಸುವುದು||

ಹೀನ ಮತಗಳನ್ನು ವಾಣಿಲಿ ತರಿದಂಥ

ಜ್ಞಾನವಂತನೆ ಹೀಗೆ ಮೌನವ ಧರಿಸಿದ್ದು ||

ಸರ್ವವ್ಯಾಪಕ ನೀನು ಪೂರ್ವಿಕ ದೇವನೆ

ಶರ್ವನಪಿತ ಬಂದೀ ಪರ್ವತ ಸೇರಿದ್ದು ||

ಗೋಪಾಲವಿಠಲಗೆ ನೀ ಪ್ರೀತಿ ಮಂತ್ರಿಯು

ವ್ಯಾಪಾರ ಮಾಡದೆ ಈ ಪರಿ ಕುಳಿತದ್ದು ||


Monday, August 19, 2019

ಪವಮಾನ ಪವಮಾನ ಜಗದಾ ಪ್ರಾಣಾ / Pavamana Pavamana Jagadaprana Lyrics




ಹರಿ ಸರ್ವೋತ್ತಮ ವಾಯು ಜೀವೋತ್ತಮ - ಇದು ಮಧ್ವ ಮತಾನುಯಾಯಿಗಳಿಗೆ ತರ್ಕ ಮಂತ್ರ. ಪ್ರಾಣದೇವರಿಗೆ ಸಮರ್ಪಿತ ಈ ಭಕ್ತಿ ಗೀತೆಯ ರಚನೆ ವಿಜಯದಾಸರದು.

ಪವಮಾನ ಪವಮಾನ

ಪವಮಾನ ಪವಮಾನ ಜಗದಾ ಪ್ರಾಣಾ
ಸಂಕರುಷಣ ಭವಭಯಾರಣ್ಯ ದಹನ |ಪ|

ಶ್ರವಣವೆ ಮೊದಲಾದ ನವವಿಧ ಭಕುತಿಯ
ತವಕದಿಂದಲಿ ಕೊಡು ಕವಿಗಳ ಪ್ರಿಯ ||ಅ ಪ||

ಹೇಮ ಕಚ್ಚುಟ ಉಪವೀತ ಧರಿಪ ಮಾರುತ ಕಾಮಾದಿ ವರ್ಗ ರಹಿತ
ವ್ಯೋಮಾದಿ ಸರ್ವವ್ಯಾಪುತ ಸತತ ನಿರ್ಭೀತ ರಾಮಚಂದ್ರನ ನಿಜದೂತ
ಯಾಮ ಯಾಮಕೆ ನಿನ್ನಾರಾಧಿಪುದಕೆ
ಕಾಮಿಪೆ ಎನಗಿದು ನೇಮಿಸಿ ಪ್ರತಿದಿನ
ಈ ಮನಸಿಗೆ ಸುಖಸ್ತೋಮವ ತೋರುತ
ಪಾಮರ ಮತಿಯನು ನೀ ಮಾಣಿಪುದು |೧|

ವಜ್ರ ಶರೀರ ಗಂಭೀರ ಮುಕುಟಧರ ದುರ್ಜನವನ ಕುಠಾರ
ನಿರ್ಜರ ಮಣಿದಯಾ ಪಾರ ವಾರ ಉದಾರ ಸಜ್ಜನರಘವ ಪರಿಹಾರ
ಅರ್ಜುನಗೊಲಿದಂದು ಧ್ವಜವಾನಿಸಿ ನಿಂದು
ಮೂರ್ಜಗವರಿವಂತೆ ಗರ್ಜನೆ ಮಾಡಿದಿ
ಹೆಜ್ಜೆ ಹೆಜ್ಜೆಗೆ ನಿನ್ನ ಅಬ್ಜ ಪಾದದ ಧೂಳಿ
ಮಾರ್ಜನದಲಿ ಭವ ವರ್ಜಿತನೆನಿಸೊ |೨|

ಪ್ರಾಣ ಅಪಾನ ವ್ಯಾನೋದಾನ ಸಮಾನ ಆನಂದ ಭಾರತಿ ರಮಣ
ನೀನೆ ಶರ್ವಾದಿ ಗೀರ್ವಾಣಾದ್ಯಮರರಿಗೆ ಜ್ಞಾನಧನ ಪಾಲಿಪ ವರೇಣ್ಯ
ನಾನು ನಿರುತದಲಿ ಏನೇನೆಸಗಿದೆ
ಮಾನಸಾದಿ ಕರ್ಮ ನಿನಗೊಪ್ಪಿಸಿದೆನೊ
ಪ್ರಾಣನಾಥ ಸಿರಿವಿಜಯವಿಠಲನ
ಕಾಣಿಸಿ ಕೊಡುವದು ಭಾನು ಪ್ರಕಾಶ |೩|

Listen to audio here or here . 

Song Composed By : Shri Vijaya Dasaru
Music Composed By: Shri Upendra Kumar
Singer : Shrimati Sangeeta Katti