Pages

Tuesday, September 29, 2020

ಬರುವುದೆಲ್ಲ ಬರಲಿ / Baruvudella barali

ಬರುವುದೆಲ್ಲ ಬರಲಿ




ರಚನೆ : ಶ್ರೀ ಗೋಪಾಲ ದಾಸರು 

ಬರುವುದೆಲ್ಲ ಬರಲಿ ಸಿರಿಹರಿಯ ಕರುಣವಿರಲಿ || ಪ ||
ಗುರುಗಳ ಚರಣ ಸರೋರುಹ ಮಧುರಸ ತರ ತರ ತಪದಿ ಮೈಮರೆತಿರಲಿ ||ಅ. ಪ ||

ಸತಿಯ ಮತಿಯು ಕೆಡಲಿ | ಸುತ ರತಿಪತಿತನಾಗಿ ಬರಲಿ |
ಜೊತೆಯೊಳಿದ್ದ ಹಿತ ಪ್ರತಿಕೂಲನಾಗಲಿ |
ವತನ ಕೆಡುವ ಪ್ರಯತ್ನವು ಬರಲಿ || 1 ||

ಅರಸು ಕರೆಸದಿರಲಿ ಸತಿ ಸರಸಸುರಿಸದಿರಲಿ |
ನರಸಖನಿಗೆ ಭಾರ ಸಮರ್ಪಿಸುತಲಿ |
ವಿರಸ ಮಾಡಿ ಮನೆ ಮುರಿಸುತ ಬರಲಿ || 2 ||

ಮಾನ ಮಾಡದಿರಲಿ ಜನರಪಮಾನ ಮಾಡಿ ನಗಲಿ |
ಜ್ಞಾನಹೀನನೆಂದೆನುತ ನಿಂದಿಸಲಿ |
ಶ್ರೀನಿಧಿ ಗೋಪಾಲವಿಠ್ಠಲನು ಬೆರಿಲಿ || 3 ||

Baruvudella barali 

Author : Shree Gopala Dasaru

Baruvudella barali sirihariya karunavirali || pa ||
Gurugala charana saroruha madhurasa tara tara tapadi maimaretirali ||

Satiya matiyu kedali | suta ratipatitanaagi barali |
Joteyolidda hita pratikoolanaagali |
Vatana keduva prayatnavu barali || 1 ||

Arasu karesadirali sathi sarasasurisadirali |
Narasakhanige bhaara samarpisutali |
Virasa maadi mane murisuta barali || 2 ||

Maana maadadirali janarapamaana maadi nagali |
Jaanaheenanendenuta nindisali |
Shreenidhi gopaalavittalanu berili || 3 ||


Listen to song by Shree HV Shruti Bhaskar




ಬಾರೋ ನಮ್ಮ ಮನೆಗೆ ಗೋಪಾಲಕೃಷ್ಣ/ BaarO Namma Manege GopaalakriShNa

ಬಾರೋ ನಮ್ಮ ಮನೆಗೆ ಗೋಪಾಲಕೃಷ್ಣ




ರಚನೆ : ಶ್ರೀಪಾದರಾಜರು 


ಬಾರೋ ನಮ್ಮ ಮನೆಗೆ ಗೋಪಾಲಕೃಷ್ಣ||ಪ||

ಗೊಲ್ಲ ಬಾಲಕರನು ನಿಲ್ಲಿಸಿ ಹೆಗಲೇರಿ
ಗುಲ್ಲು ಮಾಡದೆ ಮೊಸರೆಲ್ಲ ಸವಿದ ಕೃಷ್ಣ||೧||

ಕಸ್ತೂರಿ ತಿಲಕವ ಶಿಸ್ತಾಗಿ ಹಣೆಯಲಿಟ್ಟು
ಮಸ್ತಾಗಿ ಕುಣಿವ ಪರವಸ್ತು ಕಾಣೇನೆಂದು ಕೃಷ್ಣ ||೨||

ಮುಜ್ಜಗವನೆಲ್ಲ ಬೊಜ್ಜೆಯೊಳಗೆಯಿಟ್ಟು
ಗೆಜ್ಜೆಯ ಕಟ್ಟಿ ತಪ್ಪು ಹೆಜ್ಜೆಯನಿಕ್ಕುತ ಕೃಷ್ಣ||೩||

ನಾರಿಯರು ಬಿಚ್ಚಿಟ್ಟ ಸೀರೆಗಳನೊಯ್ದು
ಮೇರೆಯಿಲ್ಲದೆ ಕೈಯ ತೋರೆಂದ ಶ್ರೀ ಕೃಷ್ಣ||೪||

ಅಂಗನೆಯರ ವ್ರತ ಭಂಗವ ಮಾಡಿದ
ರಂಗ ವಿಟ್ಠಲ ಭವಭಂಗ ಪರಿಹರಿಸೋ ಕೃಷ್ಣ ||೫||

Baaro namma manage gopala krishna

Author : Shreepadarajaru


Baaro namma manage gopala krishna||

golla balakaranu nillisi pegaleri
gullu madadhe mosarella kudidha krishna||1||

kasturi tilakava shistaagi haNeyalittu
mastaagi kuniva paravastu kaaNenendu ||2||

murjaga vanella bujjeyolage ittu
gejjeya katti tappu hejjeyanikkuta Krishna ||3||

nariru bichitta siregalanne vaidu
myare illade karatorenda krishna ||4||

anganeyara vrata bangava madidha
ranga vittala bava bangava maadutha||5||

Listen to song by Shri Vidyabhushana






ಬಂದನೇನೆ ರಂಗ ಬಂದನೇನೆ / bandanEne ranga bandanEne

ಬಂದನೇನೆ ರಂಗ ಬಂದನೇನೆ 



ರಚನೆ : ಶ್ರೀ ಪುರಂದರ ದಾಸರು 

ಬಂದನೇನೆ ರಂಗ ಬಂದನೇನೆ ಎನ್ನ || ಪ ||
ತಂದೆ ಬಾಲಕೃಷ್ಣ ನವನೀತ ಚೋರ || ಅ. ಪ. ||

ಘಲು ಘಲು ಘಲುರೆಂಬ ಪೊನ್ನಂದುಗೆ ಗೆಜ್ಜೆ
ಹೊಳೆ ಹೊಳೆಯುವ ಪಾದವನೂರುತ
ನಲಿ ನಲಿದಾಡುವ ಉಂಗುರ ಅರಳೆಲೆ 
ಥಳ ಥಳ ಹೊಳೆಯುತ ಶ್ರೀಕೃಷ್ಣ || 1 ||

ಕಿಣಿಕಿಣಿ ಕಿಣಿರೆಂಬ ಕರದ ಕಂಕಣ ಬಳೆ 
ಝುಣ ಝುಣ ಝುಣುರೆಂಬ ನಡುವಿನ ಗಂಟೆ 
ಧನ ಧನ ಧನರೆಂಬ ಪಾದದ ತೊಡವಿನ 
ಮಿಣ ಮಿಣ ಕುಣಿದಾಡುತ ಶ್ರೀಕೃಷ್ಣ || 2 ||

ಹಿಡಿ ಹಿಡಿ ಹಿಡಿಯೆಂದು ಪುರಂದರವಿಠ್ಠಲನ 
ದುಡು ದುಡು ದುಡು ದುಡನೇ ಓಡುತ 
ನಡೆ ನಡೆ ನಡೆಯೆಂದು ಮೆಲ್ಲನೆ ಪಿಡಿಯಲು 
ಬಿಡಿ ಬಿಡಿ ದಮ್ಮಯ್ಯ ಎನ್ನುತ || 3 ||


Bandanene Ranga BandanEne

Author : Shree Purandara Dasaru

bandanEne ranga bandanEne enna ||p||
tande bAlakrishNa navanIta cOra ||a||

ghalu ghalu ghaluremba ponnandige gejje
hoLe hoLe hoLe yuva pAdavanUruta
nali nali nalidADuta ungura araLele
thaLa thaLa thaLa hoLeyuta shri krishNa ||1||

kiNi kiNi kiNI remba karada kankaNa
jhaNa jhaNa jhaNa remba naDuvina ghaNTe
dhaNa dhaNa dhaNa remba pAdada toDavina
miNa miNa miNa kuNidADuta shri krishNa ||2||

hiDi hiDi hiDi yendu purandara viTalana
duDu duDu duDu duDane ODuta
naDi naDi naDI yendu pellane piDiyalu
biDi biDi biDi dammayya ennuta shri krishNa ||3||

Listen to song by Raichur Seshagiridas




Listen to song by Shri Kurudi Venkannachar




ಬಂದಳ್ ನೋಡೆ ಮಂದಿರದೊಳು / Bandal node mandiradolu

ಬಂದಳ್ ನೋಡೆ ಮಂದಿರದೊಳು




ರಚನೆ : ಶ್ರೀ ಜಗನ್ನಾಥ ದಾಸರು 

ಬಂದಳ್ ನೋಡೆ ಮಂದಿರದೊಳು ಭಾಗ್ಯದಾ ಲಕ್ಷ್ಮೀ |
ಭಾಗ್ಯದ ಲಕ್ಷ್ಮಿ ಬಂದಾಳು ನೋಡೆ || ಪ ||

ಅಂದುಗೆ ಕಿರು ಗೆಜ್ಜೆ ಘಿಲ್ ಘಿಲ್ಲೆನುತ ||| ಅ ಪ ||

ಘಿಲ್ ಘಿಲ್ ಘಿಲ್ ಘಿಲ್ ಘಿಲ್ಲೆನುತಾ
ಮುದ್ದು ಪಾದದಿ ಹೆಜ್ಜೆಯನಿಕ್ಕುತಾ || 1 ||

ಎಡ ಬಲದಲ್ಲಿ ಗಜಗಳಿಂದ ಪೂಜೆಗೊಳ್ಳುತ 
ಬಿಡದೆ ತನ್ನ ಕರ ಕಮಲದಿ ಅಭಯ ಕೊಡುತಲಿ || 2 ||

ಅತಿ ಹರುಷದಿ ಹಿತದಿ ತನ್ನ ಪತಿಯ ಸಹಿತಾಗಿ 
ವಾರಿನೋಟದಿಂದ ಭಕ್ತರಿಗೆ ವರವ ಕೊಡುತಲಿ || 3 ||

ಸೃಷ್ಟಿಗೊಡೆಯ ತಂದೆ ಜಗನ್ನಾಥವಿಠ್ಠಲನ 
ಪಟ್ಟದರಸಿ ಅರ್ಥಿಯಿಂದಲಿ ಭಕ್ತರ ಮನೆಗೆ || 4 ||

Bandal node mandiradolu

Author : Shri Jagannatha Dasaru

bandaL nODe mandiradoLu bhaagyadaa lakShmI|
bhaagyada lakShmi bandaaLu nODe || pa ||

anduge kiru gejje ghil ghillenuta |

ghil ghil ghil ghil ghillenutaa
muddu paadadi hejjeyanikkutaa || 1 ||

eDa baladalli gajagaLinda poojegoLLuta |
biDade tanna kara kamaladi abhaya koDutali || 2 ||

ati haruShadi hitadi tanna patiya sahitaagi |
vaarinOTadinda bhaktarige varava koDutali || 3 ||

sRuShTigoDeya taMde jagannaathaviThThalana|
paTTadarasi arthiyindali bhaktara manege || 4 ||


Listen to song by Shri Puttur Narasimha Nayak




Sunday, September 13, 2020

ಕರುಣಿಸೋ ರಂಗಾ ಕರುಣಿಸೋ / KaruNisO Ranga KaruNisO

ಕರುಣಿಸೋ ರಂಗಾ ಕರುಣಿಸೋ

ರಚನೆ : ಶ್ರೀ ಪುರಂದರ ದಾಸರು 

ಕರುಣಿಸೋ ರಂಗಾ ಕರುಣಿಸೋ || ಪ ||
ಹಗಲು ಇರುಳು ನಿನ್ನ ಸ್ಮರಣೆ ಮರೆಯದಂತೆ || ಅ. ಪ. ||

ರುಕುಮಾಂಗದನಂತೆ ವೃತವ ನಾನರಿಯೆನೋ |
ಶುಕ ಮುನಿಯಂತೆ ಸ್ತುತಿಸಲು ಅರಿಯೆ |
ಬಕವೈರಿಯಂತೆ ಧ್ಯಾನವ ಮಾಡಲರಿಯೆ |
ದೇವಕಿಯಂತೆ ಮುದ್ದಿಸಲರಿಯೆನೊ || ೧ ||

ಗರುಡನಂದದಿ ಪೊತ್ತು ತಿರುಗಲು ಅರಿಯೆ |
ಕರೆಯಲು ಅರಿಯೆ ಕರಿ ರಾಜನಂತೆ |
ವರ ಕಪಿಯಂತೆ ದಾಸ್ಯವ ಮಾಡಲರಿಯೇ |
ಸಿರಿಯಂತೆ ಕರೆದು ಮೋಹಿಸಲರಿಯೆನೊ || ೨ ||

ಬಲಿಯಂತೆ ದಾನವ ಮಾಡಲು ಅರಿಯೆ |
ಭಕ್ತಿ ಛಲವನು ಅರಿಯೆ ಪ್ರಲ್ಹಾದನಂತೆ |
ಒಲಿಸಲು ಅರಿಯೆ ಅರ್ಜುನನಂತೆ ಸಖನಾಗಿ |
ಸಲಹೋ ದೇವರ ದೇವಾ ಪುರಂದರವಿಠ್ಠಲ || ೩ ||


KaruNisO Ranga KaruNisO

Author :Shri Purandara Dasaru

karuNisO rangaa karuNisO || pa ||
hagalu iruLu ninna smaraNe mareyadante || a. pa.||

rukumaangadanante vrutava naanariyenO |
shuka muniyante stutisalu ariye |
bakavairiyante dhyaanava maaDalariye |
dEvakiyante muddisalariyeno || 1 ||

garuDanandadi pottu tirugalu ariye |
kareyalu ariye kari raajanante |
vara kapiyante daasyava maaDalariyE |
siriyante karedu mOhisalariyeno || 2 ||

baliyante daanava maaDalu ariye |
bhakti chalavanu ariye pralhaadanante |
olisalu ariye arjunanante sakhanaagi |
salahO dEvara dEvaa purandaraviThThala || 3 ||


Listen to song by Shri Bhimsen Joshi



Listen to song by Shri Nandini Rao Gujar


Listen to song by Shri Ustaad Fayaz Khan


ಸುಳ್ಳು ನಮ್ಮಲ್ಲಿಲ್ಲವಯ್ಯ / SuLLu Nammallillavayya

ಸುಳ್ಳು ನಮ್ಮಲ್ಲಿಲ್ಲವಯ್ಯ



ರಚನೆ: ಶ್ರೀ ಪುರಂದರ ದಾಸರು 

ತಾಳ : ಆದಿ
ರಾಗ : ಪೂರ್ವಿ


ಸುಳ್ಳು ನಮ್ಮಲ್ಲಿಲ್ಲವಯ್ಯ
ಸುಳ್ಳು ನಮ್ಮಲ್ಲಿಲ್ಲ ( / ಸುಳ್ಳೇ ನಮ್ಮನಿ ದೇವರು) ||ಪ||

ಇಲಿಯು ಒಲೆಯ ಚಾಚ್ವದ ಕಂಡೆ
ಬೆಕ್ಕು ಭಕ್ಕರಿ ಮಾಡ್ವುದಕಂಡೆ
ಮೆಣಸಿನಕಾಯಿ ಕಂಡೆನಪ್ಪ ಒನಕೆ ಗಡತರ ||೧||

ಕಪ್ಪೆ ಪಾತರ ಕುಣಿವುದ ಕಂಡೆ
ಏಡಿ ಮದ್ದಳೆ ಬಡೆವುದ ಕಂಡೆ
ಮೆಕ್ಕಿ ತೆನೆಯ ಕಂಡೇನಪ್ಪ ಕೆಕ್ಕಿ ಗಡತರ ||೨||

ಅರಸಿನ ಬಿತ್ತುವುದ ಕಂಡೆ
ಕಸಕಸೆ ನೆನೆಸೋದು ಕಂಡೆ
ಪುರಂದರವಿಠಲನ ಪಾದವ ಕಂಡೆ ಪರ್ವತ ಗಡತರ ||೩||

SuLLu Nammallillavayya 

Author : Shree Purandara Dasaru

raaga : Poorvi
taaLa: Adi

suLLu nammallillavayya 
suLLu nammallilla (sulle nammani devaru) ||pa||

iliyu oleya chaachvada kanDe
bekku bhakkari mADvudakaNDe
meNasinakAi kaNDenappa oanake gaDatara ||1||

kappe paatara kuNIvuda kaNDe
Edi maddaLe oDevuda kaNDe
mekki teneya kaNDEnappa kekki gaDatara ||2||

arasina bittuvuda kaNDe
kasakase nenesOdu kaNDe
purandara viTTalana pAdava kaNDe parvata gaDatara ||3||

Listen to song by Shri Puttur Narasimha Nayak



Listen to song by Vidushi Sangeeta Katti



Saturday, September 12, 2020

ಬಂದಾನೋ ರಾಘವೇಂದ್ರ ಇಂದಿಲ್ಲಿಗೆ / Bandaano Raaghavendra Indillige

ಬಂದಾನೋ ರಾಘವೇಂದ್ರ ಇಂದಿಲ್ಲಿಗೆ


ರಚನೆ :ಶ್ರೀ ಮಧ್ವೆಶ ವಿಠ್ಠಲ 

ಬಂದಾನೋ ರಾಘವೇಂದ್ರ ಇಂದಿಲ್ಲಿಗೆ || ಪ ||
ಕಂದನ ಮೊರೆ ಕೇಳಿ ಜನನಿಯು ಬರುವಂತೆ || ಅ. ಪ. ||

ಗಜವೇರಿ ಬಂದಾ ಜಗದಿ ತಾ ನಿಂದಾ |
ಅಜಪಿತ ರಾಮನ ಪದಾಬ್ಜ ಸ್ಮರಿಸುತಲಿ || 1 ||

ಹರಿಯ ಕುಣಿಸುತ ಬಂದಾ ನರಹರಿ ಪ್ರಿಯ ಬಂದಾ
ಶರಣಾಗತರನು ಕರವ ಪಿಡಿವೆನೆಂದು || 2 ||

ಪ್ರಲ್ಹಾದ ವ್ಯಾಸ ಮುನೀಂದ್ರ ರಾಘವೇಂದ್ರ
ನಿಲಿಸುತ ಮನವ ಮಧ್ವೇಶವಿಠ್ಠಲನಲಿ ||3||

Bandaano Raaghavendra Indillige

Rachane : Shree Madhwesha Vittala

bandaanO raaghavendra indillige || pa ||
kaMndana more kELi jananiyu baruvante || a. pa. ||

gajavEri bandaa jagadi taa nindaa |
ajapita raamana padaabja smarisutali || 1 ||

hariya kuNisuta bandaa narahari priya bandaa
sharaNaagataranu karava piDivenendu || 2 ||

pralhaada vyaasa muneendra raaghavendra
nilisuta manava madhvEshaviThThalanali ||3||


Listen to song by Vidushi Sangeeta Katti


Listen to song by Shree Puttur Narasimha Nayak



ಬಂದ ಕೃಷ್ಣ ಚೆಂದದಿಂದ / Banda Krishna chendadinda

ಬಂದ ಕೃಷ್ಣ ಚೆಂದದಿಂದ ಬಂದ ನೋಡೆ ಗೋಪ 




ರಚನೆ : ಶ್ರೀ ವ್ಯಾಸತತ್ವಜ್ಞ ತೀರ್ಥರು

ಬಂದ ಕೃಷ್ಣ ಚೆಂದದಿಂದ ಬಂದ ನೋಡೆ ಗೋಪ |
ವೃಂದದಿಂದ ನಂದ ಸುತಾ ಬಂದ ನೋಡೆ || ಪ ||

ಗೋವ ಮೇವ ನೀವ ದೇವ | ಬಂದ ನೋಡೇ |
ಸ್ವಾಮಿ ದೇವತಾ ವಾದ್ಯಗಳಿಂದ ಬಂದ ನೋಡೆ || ೧ ||

ಪಾಪ ಪೋಪ ಗೋಪ ರೂಪ ಬಂದ ನೋಡೆ |
ಸ್ವಾಮಿ ತಾಪ ಲೋಪ ಲೇಪ ಲೋಪಾ ಬಂದ ನೋಡೆ || ೨ ||

ಭೂಸುರ ಸುಖ ಸೂಸುತ ತಾ ಬಂದ ನೋಡೆ |
ಸ್ವಾಮಿ ವಾಸುದೇವವಿಠ್ಠಲ ತಾ ಬಂದ ನೋಡೆ || ೩ ||

Banda Krishna Chendadinda Banda NoDa Gopa

Author : Sri Vyasatatvagna Theertharu

banda Krishna chendadinda banda noDa gopa |
vRundadinda nanda sutaa banda noDa || pa ||

gova mEva neeva dEva banda noDa |
swaami dEvataa vaadyagaLinda banda noDa || 1 ||

paapa popa gopa roopa banda noDa |
swaami taapa lopa lEpa lopaa banda noDa || 2 ||

bhoosura sukha soosuta taa banda noDa |
swaami vaasudEvaviThThala taa banda nODa || 3 ||

ಬಲು ರಮ್ಯವಾಗಿದೆ ಶ್ರೀಹರಿಯ ಮಂಚ / Balu Ramyavaagide Shreehariya Mancha


ಬಲು ರಮ್ಯವಾಗಿದೆ ಶ್ರೀಹರಿಯ ಮಂಚ

ರಚನೆ : ಶ್ರೀ ಜಗನ್ನಾಥ ದಾಸರು 

ರಾಗ : ನಾಟ
ತಾಳ : ಝಂಪೆ

ಬಲು ರಮ್ಯವಾಗಿದೆ ಶ್ರೀಹರಿಯ ಮಂಚ || ಪ ||
ಯಲರುಣಿ ಕುಲ ರಾಜ ರಾಜೇಶ್ವರನ ಮಂಚ || ಅ.ಪ ||

ಪವನ ತನಯನೆನಿಪ ಪಾವನತರ ಮಂಚ |
ಭುವನತ್ರಯವ ಪೊತ್ತ ಭಾರಿ ಮಂಚ |
ಕಿವಿಗಳಿಲ್ಲದ ಮಂಚ ಶ್ರೀನಿಕೇತನ ಮಂಚ |
ಶಿವರೂಪದಲಿ ಶ್ರೀಹರಿಯ ಒಲಿಸಿದ ಮಂಚ || 1 ||

ನೀಲಾಂಬರವನುಟ್ಟು ನಳನಳಿಸುವ ಮಂಚ |
ನಾಲಿಗೆ ಎರಡುಳ್ಳ ನೈಜ ಮಂಚ |
ನಾಲ್ವತ್ತು ಕಲ್ಪದಿ ತಪವ ಮಾಡಿದ ಮಂಚ |
ತಾಲ ಮುಸಲ ಹಲವ ಪಿಡಿದಿಹ ಮಂಚ || 2 ||

ರಾಮನನುಜನಾಗಿ ರಣವ ಜಯಿಸಿದ ಮಂಚ |
ತಾಮಸ ರುದ್ರನ ಪಡೆದ ಮಂಚ |
ಭೀಮನನುಜನೊಳು ಆವೇಶಿಸಿದ ಮಂಚ |
ಜೀಮೂತ ಮಲ್ಲರನು ಕುಟ್ಟಿದ ಮಂಚ || 3 ||

ಜೀವ ನಾಮಕನಾಗಿ ವ್ಯಾಪ್ತನಾದ ಹರಿಯ |
ಸೇವಿಸಿ ಸುಖಿಸುವ ದಿವ್ಯ ಮಂಚ |
ಸಾವಿರ ಮುಖದಿಂದ ಸ್ತುತಿಸಿ ಹಿಗ್ಗುವ ಮಂಚ |
ದೇವಕಿಯ ಜಠರದಲಿ ಜನಿಸಿದ ಮಂಚ || 4 ||

ವಾರುಣಿ ದೇವಿಗೆ ವರನೆನಿಸಿದ ಮಂಚ |
ಸಾರುವ ಭಕ್ತರ ಪೊರೆವ ಮಂಚ |
ಕಾರುಣ್ಯ ನಿಧಿ ಜಗನ್ನಾಥ ವಿಠ್ಠಲನ
ವಿಹಾರಕ್ಕೆ ಯೋಗ್ಯವಾದ ಶೇಷಮಂಚ || 5 ||

Balu Ramyavaagide Shreehariya Mancha

Author : Shree Jagannatha Dasaru

Raaga : Naata 
Taala: Jhampe

balu ramyavaagide shreehariya mancha || pa ||
yalaruNi kula raaja raajEshwarana mancha|| a.pa ||

pavana tanayanenipa paavanatara mancha|
bhuvanatrayava potta bhaari mancha|
kivigaLillada maMca shreenikEtana mancha|
shivaroopadali shreehariya olisida mancha|| 1 ||

neelaaMbaravanuTTu naLanaLisuva mancha|
naalige eraDuLLa naija mancha|
naalvattu kalpadi tapava maaDida mancha|
taala musala halava piDidiha mancha|| 2 ||

raamananujanaagi raNava jayisida mancha|
taamasa rudrana paDeda mancha|
bheemananujanoLu aavEshisida mancha|
jeemoota mallaranu kuTTida mancha|| 3 ||

jeeva naamakanaagi vyaaptanaada hariya |
sEvisi sukhisuva divya mancha|
saavira mukhadiMda stutisi higguva mancha|
dEvakiya jaTharadali janisida mancha|| 4 ||

vaaruNi dEvige varanenisida mancha|
saaruva bhaktara poreva mancha|
kaaruNya nidhi jagannaatha viThThalana
vihaarakke yOgyavaada mancha|| 5 ||


Listen to song here