Pages

Sunday, October 18, 2020

ಬಾರಯ್ಯ ಬಾ ಭಕುತರ ಪ್ರಿಯ ​ / Barayya Ba Bhaktara Priya

 ಬಾರಯ್ಯ ಬಾ ಭಕುತರ ಪ್ರಿಯ


ರಚನೆ: ಶ್ರೀ ಗೋಪಾಲ ದಾಸರು

ವಾರಿಜಲಯಪತೆ ವಾರಿಜನಾಭನೆ

ವಾರಿಜಭವಪಿತ ವಾರಿಜನೇತ್ರನೆ
ವಾರಿಜಮಿತ್ರ ಅಪಾರಪ್ರಭಾವನೆ
ವಾರಿಜ ಝಾಂಡದ ಕಾರಣ ದೊರೆಯೆ
ಬಾರೈಯ್ಯ ಬಾ ಬಾ ಭಕುತರ ಪ್ರಿಯ ಶ್ರೀನಿವಾಸ ರಾಯ ||ಪ||
ಮಾರ ಜನಕ ಮುಕುತರೊಡೆಯ ದೇವೈಯ್ಯ ಜೀಯ ||ಅಪ||


ಸ್ಯಂದನವೇರಿಬಾಪ್ಪ ರಂಗ ದೇವೋತ್ತುಂಗ
ನಂದ ನಂದನ ಅರಿಮದಭಂಗ ಕರುಣಾಪಾಂಗ
ಸಿಂಧುಶಯನ ಸುಂದರಾಂಗ ಹೇ ನಾರಸಿಂಗ
ಕಂದ ವಿರಿಂಚಿಯು ನಂದಿವಾಹನ ಅಮರೇಂದ್ರ
ಸನಕ ಸನಂದನಾದಿ ಮುನಿ
ವೃಂದ ಬಂದು ನಿಂದು ಧಿಂ ಧಿಂ ಧಿಮಿಕೆಂದು
ನಿಂದಾಡಲು ಆನಂದದಿ ಮನಕೆ ||೧||

ಜಗತ್ ಜನ್ಮಾದಿ ಕರ್ತ ಗೋವಿಂದ
ಉದರದಿ ಲೋಕ ಲಘುವಾಗಿ ಧರಿಸಿದ ಮುಕುಂದ
ಭಕುತರ ಮನಕೆ ಝಗ ಝಗಿಸುತ ಪೊಳೆವಾನಂದ ನಿಗಮಾವಳಿಯಿಂದ
ಅಗಣಿತ ಮುನಿಗಣ ನಗ ಖಗ ಮೃಗ ಶಶಿ
ಗಗನ ಮಣ್ಯಾದ್ಯರು ಸೊಗಸಾಗಿ ಬಗೆ ಬಗೆ
ಪೊಗಳುತಲಿ ಬೇಗ ಜಿಗಿಜಿಗಿದಾಡಲು
ಮುಗುಳುನಗೆಯ ಮಹಾ ಉರಗಗಿರಿವಾಸ ||೨||

ತಡಮಾಡ ಬ್ಯಾಡವೊ ಹೇ ನಲ್ಲ
ವಾಕು ಲಾಲಿಸು ಎನ್ನೊಡೆಯ ಗೋಪಾಲ ವಿಠ್ಠಲ
ದೇವ ಪರಾಕು ಅಡಿ ಇಡು ಭಕ್ತವತ್ಸಲ ಶ್ರೀ ಲಕುಮಿನಲ್ಲ
ಮಡುವಿನೊಳಗೆ ಗಜ ಮೊರೆಯಿಡಲಾಕ್ಷಣ
ಮಡದಿಗೆ ಹೇಳದೆ ದುಡದುಡನೆ ಬಂದು
ಹಿಡಿದು ನಕ್ರನ ಬಾಯ ಕಡಿದು ಬಿಡಿಸಿದನೆ
ಸಡಗರದಲಿ ರಮೆಪೊಡವಿಯೊಡಗೂಡಿ ಬೇಗ ||೩||


Barayya Ba Bhaktara Priya

Author : Shri Gopala Dasaru


VARIJALAYAPATE VARIJANABANE​
VARIJABAVAPITA VARIJANETRANE​
VARIJAMITRA APARAPRABAVANE​
VARIJA JAMDADA KAARANA DOREYE​
BARAIYYA BA BA BAKUTARA PRIYA SRINIVASA RAYA ||PA||​
MARA JANAKA MUKUTARODEYA DEVAIYYA JIYA ||APA||


SYAMDANAVERIBAPPA RANGA DEVOTTUNGA​
NANDA NANDANA ARINADABHANGA KARUNAPANGA​
SINDHUSAYANA SUNDARANGA HE NARASINGA​
KANDA VIRINCHIYU NANDIVAHANA AMARENDRA​
SANAKA SANAMDANADI MUNI​
VRUNDA BANDU NINDU DHIM DHIM DHIMIKEMDU​
NINDADALU ANANDADI MANAKE ||1||​


JAGAT JANMADI KARTA GOVINDA​
UDARADI LOKA LAGUVAGI DHARISIDA MUKUNDA​
BAKUTARA MANAKE JAGA JAGISUTA POLEVANANDA NIGAMAVALIYINDA​
AGANITA MUNIGANA NAGA KAGA MRUGA SASI​
GAGANA MANYADYARU SOGASAGI BAGE BAGE​
POGALUTALI BEGA JIGIJIGIDADALU​
MUGULUNAGEYA MAHA URAGAGIRIVASA ||2||​
TADAMADA BYADAVO HE NALLA​
VAKU LALISU ENNODEYA GOPALA VITHTHALA​
DEVA PARAKU ADI IDU BAKTAVATSALA SRI LAKUMINALLA​
MADUVINOLAGE GAJA MOREYIDALAKSHANA​
MADADIGE HELADE DUDADUDANE BANDU​
HIDIDU NAKRANA BAAYA KADIDU BIDISIDANE​
SADAGARADALI RAMEPODAVIYODAGUDI BEGA ||3||​

Listen to song by Shri Mysore Ramachandrachar



Listen to song by Shri Puttur Narasimha Nayak



Sunday, October 11, 2020

ಮಧುಕರ ವೃತ್ತಿ ಎನ್ನದು / Madhukara vrutti ennadu

ಮಧುಕರ ವೃತ್ತಿ ಎನ್ನದು




ರಚನೆ : ಶ್ರೀ ಪುರಂದರ ದಾಸರು 

ಮಧುಕರ ವೃತ್ತಿ ಎನ್ನದು ಅದು ಬಲು ಚೆನ್ನದು || ಪಲ್ಲವಿ ||

ಪದುಮನಾಭನ ಪಾದಪದುಮ ಮಧುಪವೆಂಬ || ಅನು ಪಲ್ಲವಿ ||

ಕಾಲಿಗೆ ಗೆಜ್ಜೆ ಕಟ್ಟಿ ನೀಲ ವರ್ಣನ ಗುಣ
ಆಲಾಪಿಸುತ್ತ ಬಲು ಓಲಗ ಮಾಡುವಂಥ || ೧ ||

ರಂಗನಾಥನ ಗುಣ ಹಿಂಗದೆ ಪಾಡುತ್ತ
ಶೃಂಗಾರ ನೋಡುತ್ತಾ ಕಂಗಳಾನಂದವೆಂಬ || ೨ ||

ಇಂದಿರಾಪತಿ ಪುರಂದರವಿಠಲನಲ್ಲಿ
ಚೆಂದದ ಭಕ್ತಿಯಿಂದಾನಂದವ ಪಡುವಂಥ || ೩ ||


Madhukara vrutti ennadu

Composer: Sri Purandara Dasaru


Madhukara vrutti ennadu adu balu chennadu || pallavi ||

Padumanabana padapaduma madhupavemba || anu pallavi ||

Kalige gejje katti nila varnana guna
Alapisutta balu olaga maduvantha || 1 ||

Ranganathana guna hingade padutta
Sringara nodutta kangalanandavemba || 2 ||

Indirapati purandaravithalanalli
chendada baktiyindanandava paduvantha || 3 ||

Listen to song by Shri Vidyabhushana





Listen to song by Shri Shankar Shanbhogue



ಗುರು ಮಧ್ವ ರಾಯರಿಗೆ ನಮೋ ನಮೋ / Guru Madhva Rayarige Namo Namo

ಗುರು ಮಧ್ವ ರಾಯರಿಗೆ ನಮೋ ನಮೋ


ರಚನೆ : ಶ್ರೀ ಗುರು ಶ್ರೀಶ ವಿಠ್ಠಲ ದಾಸರು 

ಗುರು ಮಧ್ವ ರಾಯರಿಗೆ ನಮೋ ನಮೋ || ಪ ||
ಗುರು ಮಧ್ವ ಸಂತತಿಗೆ ನಮೋ ನಮೋ  || ಅ ಪ ||

ಶ್ರಿಪಾದರಜರಿಗೆ ಗುರು ವ್ಯಾಸರಾಜರಿಗೆ
ಗುರು ವಾದಿರಾಜರಿಗೆ ನಮೋ ನಮೋ ||೧||

ರಾಘವೇಂದ್ರ ರಾಯರಿಗೆ ವೈಕುಂಠ ದಾಸರಿಗೆ
ಪುರಂದರ ದಾಸರಿಗೆ ನಮೋ ನಮೋ ||೨||

ಗುರು ವಿಜಯ ದಾಸರಿಗೆ ಭಾಗಣ್ಣ ದಾಸರಿಗೆ
ಶ್ರೀ ರಂಗ ವಲಿದ ದಾಸರಿಗೆ ನಮೋ ನಮೋ ||೩||

ಪರಮ ವೈರಾಗ್ಯಶಲಿ ತಿಮ್ಮಣ್ಣ ದಾಸರಿಗೆ
ಹುನ್ದೆಕಾರ ದಾಸರಿಗೆ ನಮೋ ನಮೋ ||೪||

ಗುರು ಶ್ರೀಶ ವಿಠಲನ ಪರಮ ಭಕ್ತರ ಚರಣ
ಸರಸಿಜ ಯುಗಗಳಿಗೆ ನಮೋ ನಮೋ ||೫||

Guru Madhva Rayarige Namo Namo

Author : Shree Guru Shreesha Vittala Dasa

guru madhva rayarige namo namo ||pa||
guru madhva saantatige namo namo ||a pa||

shripadarajarige guru vyasarajarige
guru vadirajarige namo namo ||1||

raghavendra rayarige vaikunaa dasarige
purandara dasarige namo namo ||2||

guru vijaya dasarige bhaganna dasarige
shri ranga valida dasarige namo namo ||3||

parama vairagyashali timmanna dasarige
hundeekara dasarige namo namo ||4||

guru shrisha vithalanna parama bhaktara charana
sarasija yugagalige namo namo ||5||



Listen to song by Shree Mysore Ramachandrachar



ಭಾಳ ಭಾರ ನಿನ್ನೊಳ್ಹಾಕಿದೆ / bhaaLa bhaara ninnoLhaakide

ಭಾಳ ಭಾರ ನಿನ್ನೊಳ್ಹಾಕಿದೆ



ರಚನೆ : ಶ್ರೀ ಗುರು ಶ್ರೀಶ ವಿಠ್ಠಲ ದಾಸರು 

ಭಾಳ ಭಾರ ನಿನ್ನೊಳ್ಹಾಕಿದೆ |
ಶ್ರೀನಾರಸಿಂಹ ಶ್ರೀ ನಾರಸಿಂಹ || ಪ ||

ಭಾಳ ಭಾರ ಹಾಕಿದೆನೆಂದು |
ದೂರ ಮಾತ್ರ ಮಾಡಬೇಡ |
ತೋರು ನಿನ್ನ ಪಾದ ಪದ್ಮ |
ನೀರಜಾಕ್ಷ ಆನಂದ ಒಡೆಯ || ಅ. ಪ. ||

ಅಡವಿಯಲ್ಲಿ ಬಂದು ಕುಳಿತೆ ನಾ | ನಿನ್ನ |
ಅಡಿಗಳಿಗೆ ವಂದಿಸುವೆ ನಾ |
ಕಡಲಿಬ್ಯಾಳಿ ಬೆಲ್ಲ ಮೊದಲು |
ಒಡಲಿಗೆಂದು ಬೇಡುವೆ ನಾ |
ಕೊಡದೆ ನೀನು ಮಡದಿ ಸಹಿತ |
ಸಡಗರಾದಿ ಭುಂಜಿಸುತಿರುವೆ || 1 ||

ಅಶನ ವಶನ ಕಾಡಿ ಬೇಡಿದ | ಅನುದಿನ |
ಶಶಿಮುಖಿಯರ ಕೂಡಿ ಆಡುವೆ |
ನಿರುತ ನಿನ್ನ ಪಾದ ಪದ್ಮ |
ಬಿಸಜೆಯಿಂದ ಭಜಿಸುವೆನು |
ಹೊಸತರಾದ ಗುರುವಿನಿಂದ |
ಹೆಚ್ಚಿಗೆ ಕಾರ್ಯ ಮಾಡುವೆನು || 2 ||

ತಂದೆ ತಾಯಿ ಎಂದು ನಾ | ನಿಮ್ಮ |
ಚರಣ ಕಮಲಗಳಿಗೆ ವಂದಿಸುವೆ ನಾ |
ಕಂದನಂತೆಂದು ಎನ್ನ ಹಿಂದೆ ಮುಂದೆ ನೋಡದಲೆ |
ಮುಂದೆ ಬಂದು ಪಾಲಿಸಯ್ಯಾ |
ಇಂದಿರೇಶ ಶ್ರೀಶವಿಠ್ಠಲ || 3 ||

bhaaLa bhaara ninnoLhaakide


Author : Shree Guru Shreesha Vittala Dasaru


bhaaLa bhaara ninnoLhaakide |
shreenaarasiMha shree naarasiMha || pa ||

bhaaLa bhaara haakidenendu |
doora maatra maaDabEDa |
tOru ninna paada padma |
neerajaakSha aananda oDeya || a. pa. ||

aDaviyalli bandu kuLite naa | ninna |
aDigaLige vandisuve naa |
kaDalibyaaLi bella modalu |
oDaligendu bEDuve naa |
koDade neenu maDadi sahita |
saDagaraadi bhunjisutiruve || 1 ||

ashana vashana kaaDi bEDida | anudina |
shashimukhiyara kooDi aaDuve |
niruta ninna paada padma |
bisajeyinda bhajisuvenu |
hosataraada guruvininda |
hechchige kaarya maaDuvenu || 2 ||

tande taayi endu naa | nimma |
charaNa kamalagaLige vandisuve naa |
kandanantendu enna hinde munde nODadale |
munde bandu paalisayyaa |
indirEsha shreeshaviThThala || 3 ||



ಬೇಗ ಬಾರೋ ಬೇಗ ಬಾರೋ ನೀಲಮೇಘ ವರ್ಣ / Bega BaarO bega baarO neelaamEgha varNA

ಬೇಗ ಬಾರೋ ಬೇಗ ಬಾರೋ ನೀಲಮೇಘ ವರ್ಣ



ರಾಗ: ಮಾಂಡ್
ತಾಳ: ಏಕತಾಳ

ರಚನೆ: ಶ್ರೀ ಗುರು ವಾದಿರಾಜರು

ಬೇಗ ಬಾರೋ ಬೇಗ ಬಾರೋ ನೀಲಮೇಘ ವರ್ಣ 
ಬೇಗ ಬಾರೋ ಬೇಗ ಬಾರೋ ವೇಲಾಪುರದ ಚೆನ್ನ || ಪ |

ಇಂದಿರಾ ರಮಣ ಗೋವಿಂದ ಬೇಗ ಬಾರೋ 
ನಂದನ ಕಂದ ಮುಕುಂದ ಬೇಗ ಬಾರೋ || ೧ ||

ಧೀರ ಉದ್ಧಾರಾ ಗಂಭೀರ ಬೇಗ ಬಾರೋ 
ಹಾರಾ ಅಲಂಕಾರ ರಘುವೀರ ಬೇಗ ಬಾರೋ || ೨ ||

ರಂಗ ಉತ್ತುಂಗ ನರಸಿಂಗ ಬೇಗ ಬಾರೋ 
ಗಂಗೆಯ ಪಡೆದ ಪಾಂಡುರಂಗ ಬೇಗ ಬಾರೋ || ೩||

ಸಿಧ್ಧ ಸಮೃಧ್ಧ ಅನಿರುಧ್ಧ ಬೇಗ ಬಾರೋ
ಹದ್ದನೇರಿದ ಪ್ರಸಿಧ್ಧ ಬೇಗ ಬಾರೋ || ೪ ||

ಅಯ್ಯಾ ವಿಜಯ ಸಹಾಯ ಬೇಗ ಬಾರೋ 
ಉರಗಾದ್ರಿವಾಸ ಹಯವದನ ಬೇಗ ಬಾರೋ || ೫ ||


Bega BaarO bega baarO neelaamEgha varNA 

Author : Shri Guru Vadirajaru


bEga bArO bEga bArO neelaamEgha varNA 
bEga bArO bEga bArO vElApurada chenna ||pa||

indirA ramaNa gOvinda bEga bArO 
nandana kandA mukunda bEga bArO ||1||

dhIrI udArA gambhIrA bAga bArO
hArA alankAra raghuvIrA bEga bArO ||2||

ranga uttunga nrasinga bEga bArO
gangeya paDeda pANDuranga bEga bArO ||3||

siddhA samruddhA aniruddhA bEga bArO 
haddanEridda prasiddhA bEga bArO ||4||

hayyA vijaya sahAya bEga bArO 
uragAdrivAsa hayavadana bEga bArO ||5||


Listen to song by Shri Vidyabhushana





Listen to song by Sheela Nayak



Listen to another version here



Sunday, October 4, 2020

ಪೋಪು ಹೋಗೋಣ ಬಾರೋ ರಂಗ / popu hogona baro ranga

ಪೋಪು ಹೋಗೋಣ ಬಾರೋ ರಂಗ


ರಚನೆ : ಶ್ರೀ ಶ್ರೀಪಾದರಾಜರು


ಪೋಪು ಹೋಗೋಣ ಬಾರೋ ರಂಗ 
ಪೋಪು ಹೋಗೋಣ ಬಾರೋ 

ಜಾಹ್ನವಿಯ ತೀರವಂತೆ ಜನಕರಾಯನ ಕುವರಿಯಂತೆ 
ಜಾನಕಿಯ ವಿವಾಹವಂತೆ ಜಾಣ ನೀ ಬರಬೇಕಂತೆ | ೧ | 

ಕುಂಡಲಿಯ ನಗರವಂತೆ ಭೀಷ್ಮರಾಯನ ಕುವರಿಯಂತೆ
ಶಿಶುಪಾಲನ ಒಲ್ಲಲಂತೆ ನಿನಗೆ ಓಲೆ ಬರೆದಳಂತೆ | ೨ | 

ಪಾಂಡವರು ಕೌರರಿಗೆ ಲೆತ್ತವಾಡಿ ಸೋತರಂತೆ 
ರಾಜವನ್ನು ಬಿಡಬೇಕಂತೆ ರಂಗ ವಿಠಲ ಬರಬೇಕಂತೆ | ೩ |


Popu hogona baro ranga

Author : Shree Shreepadarajaru

popu hogona baro ranga 
popu hogona baro 

jahnaviya tiravante janakarayana kuvariyante 
janakiya vivahavante jana ni barabekante | 1 |

kundaliya nagaravante bishmarayana kuvariyante 
sisupalana ollalante ninage ole baredalante | 2 | 

pandavaru kaurarige lettavadi sotarante 
rajyavannu bidabekante ranga vithala barabekante | 3 |