Pages

Monday, May 11, 2020

ಚಂದ್ರಚೂಡ ಶಿವಶಂಕರ / Chandrachooda sivasankara

ಚಂದ್ರಚೂಡ ಶಿವಶಂಕರ 



ರಚನೆ  : ಪುರಂದರ ದಾಸರು 


ಚಂದ್ರಚೂಡ ಶಿವಶಂಕರ ಪಾರ್ವತಿ ರಮಣನೆ ನಿನಗೆ ನಮೋ ನಮೋ ||ಪ||

ಸುಂದರ ಮೃಗದರ ಪಿನಾಕಧರಹರ ಗಂಗಾಧರ ಶಿರ ಗಜ ಚರ್ಮಾಂಬರಧರ ||ಅ.ಪ||

ನಂದಿ ವಾಹನಾನಂದಿಂದ ಮೂರ್ಜಗದಿ ಮೆರೆವನು ನೀನೆ
ಅಂದು ಅಮೃತ ಘಟದಿಂದುದಿಸಿದ ವಿಷ ತಂದು ಭುಜಿಸಿದವನು ನೀನೆ
ಕಂದರ್ಪನ ಕ್ರೋಧದಿಂದ ಕಣ್ತೆರದು ಕೊಂದ ಉಗ್ರನು ನೀನೆ
ಇಂದಿರೇಶ ಶ್ರೀ ರಾಮನ ಪಾದವ ಚಂದದಿ ಪೋಗಳುವನು ನೀನೆ ||೧||

ಬಾಲ ಮೃಕಂಡನ ಕಾಲನು ಎಳೆವಾಗ ಪಲಿಸಿದವನು ನೀನೆ
ಕಾಲಕೂಟ ವಿಷವ ಪಾನ ಮಾಡಿದ ನೀಲಕಂಠ ನೀನೆ
ವಾಲಯದಿ ಕಪಾಲವ ಪಿಡಿದು ಭಿಕ್ಷೆ ಬೇಡೋ ದಿಗಂಬರನು ನೀನೆ
ಜಾಲ ಮಾಡುವ ಗೋಪಾಲನೆಂಬ ಪೆಣ್ಣಿಗೆ ಮರುಳಾದವನು ನೀನೆ ||೨||

ಧರೆಗೆ ದಕ್ಷಿಣ ಕಾವೇರಿ ತೀರ ಕುಂಭಾಪುರ ನಿವಾಸನು ನೀನೆ
ಕರದಲಿ ವೀಣೆಯ ಗಾನವ ಮಾಡುವ ನಮ್ಮ ಉರಗ ಭೂಷಣನು
ಕೊರಳಲಿ ಭಸ್ಮ ರುದ್ರಾಕ್ಷಿ ಧರಿಸಿದ ಪರಮ ವೈಷ್ಣವನು ನೀನೆ
ಗರುಡ ಗಮನ ಶ್ರೀ ಪುರಂದರ ವಿಠಲಗೆ ಪ್ರಾಣ ಪ್ರಿಯನು ನೀನೆ ||೩||


Sunday, May 10, 2020

ದಾಸನ ಮಾಡಿಕೊ ಎನ್ನ / Daasana Maadiko Enna

ದಾಸನ ಮಾಡಿಕೊ ಎನ್ನ





ರಚನೆ : ಪುರಂದರ ದಾಸರು


ದಾಸನ ಮಾಡಿಕೊ ಎನ್ನ ಸ್ವಾಮಿ
ಸಾಸಿರ ನಾಮದ ವೆಂಕಟರಮಣ

ದುರ್ಬುದ್ಧಿಗಳನೆಲ್ಲ ಬಿಡಿಸೊ ನಿನ್ನ
ಕರುಣ-ಕವಚವೆನ್ನ ಹರಣಕೆ ತೊಡಿಸೊ
ಚರಣಸೇವೆ ಎನಗೆ ಕೊಡಿಸೊ ಅಭಯ
ಕರ ಪುಷ್ಪವ ಎನ್ನ ಶಿರದಲ್ಲಿ ಮುಡಿಸೊ ||೧||

ದೃಢಭಕ್ತಿ ನಿನ್ನಲ್ಲಿ ಬೇಡಿ ನಾ
ಅಡಿಗೆರಗುವೆನಯ್ಯ ಅನುದಿನ ಪಾಡಿ
ಕಡೆಗಣ್ಣಲೇಕೆನ್ನ ನೋಡಿ ಬಿಡುವೆ
ಕೊಡು ನಿನ್ನ ಧ್ಯಾನವ ಮನಶುಚಿ ಮಾಡಿ ||೨||

ಮೊರೆಹೊಕ್ಕವರ ಕಾಯುವ ಬಿರುದು ಎನ್ನ
ಮರೆಯದೆ ರಕ್ಷಣೆ ಮಾಡಯ್ಯ ಪೊರೆದು
ದುರಿತಗಳೆಲ್ಲವ ತರಿದು ಸಿರಿ
ಪುರಂದರ ವಿಠಲ ಎನ್ನನು ಪೊರೆದು ||೩||


Saturday, May 9, 2020

ಇದು ಏನೊ ಚರಿತ ಯಂತ್ರೋದ್ಧಾರ / Idu Eno charita yantroddhara


ಇದು ಏನೊ ಚರಿತ ಯಂತ್ರೋದ್ಧಾರ



ರಚನೆ : ಗೋಪಾಲ ದಾಸರು 


ಇದು ಏನೊ ಚರಿತ ಯಂತ್ರೋದ್ಧಾರ ||pa||

ಇದು ಏನೊ ಚರಿತ ಶ್ರೀಪದುಮನಾಭನ ದೂತ

ಸದಾ ಕಾಲದಲಿ ಸರ್ವರ ಹೃದಯಾಂತರ್ಗತ ||a.pa||

ವಾರಿಧಿ ಗೋಷ್ಪಾದನೀರಂತೆ ದಾಟಿದೆ

ಧೀರ ಯೋಗಾಸನಧಾರಿಯಾಗಿಪ್ಪೊದು ||

ದುರುಳ ಕೌರವರನ್ನು ವರಗದೆಯಲಿ ಕೊಂದ

ಕರದಲ್ಲಿ ಜಪಮಾಲೆ ಧರಿಸಿ ಎಣಿಸುವುದು||

ಹೀನ ಮತಗಳನ್ನು ವಾಣಿಲಿ ತರಿದಂಥ

ಜ್ಞಾನವಂತನೆ ಹೀಗೆ ಮೌನವ ಧರಿಸಿದ್ದು ||

ಸರ್ವವ್ಯಾಪಕ ನೀನು ಪೂರ್ವಿಕ ದೇವನೆ

ಶರ್ವನಪಿತ ಬಂದೀ ಪರ್ವತ ಸೇರಿದ್ದು ||

ಗೋಪಾಲವಿಠಲಗೆ ನೀ ಪ್ರೀತಿ ಮಂತ್ರಿಯು

ವ್ಯಾಪಾರ ಮಾಡದೆ ಈ ಪರಿ ಕುಳಿತದ್ದು ||


Friday, May 8, 2020

ಸದಾ ಎನ್ನ ಹೃದಯದಲ್ಲಿ / Sada Enna Hrudayadalli

ಸದಾ ಎನ್ನ ಹೃದಯದಲ್ಲಿ



ರಚನೆ : ವಿಜಯ ದಾಸರು 


ಸದಾ ಎನ್ನ ಹೃದಯದಲ್ಲಿ, ವಾಸ ಮಾಡೋ ಶ್ರೀ ಹರೀ || ಪ ||
ನಾದ ಮೂರ್ತಿ ನಿನ್ನ ಪಾದ, ಮೋದದಿಂದ ಭಜಿಸುವೆ || ಅ ||

ಙ್ಞಾನವೆಂಬೋ ನವರತ್ನದ ಮಂಟಪದ ಮಧ್ಯದಲ್ಲಿ
ವೇಣು ಲೋಲನ ಕುಳ್ಳಿರಿಸಿ ಮೋದದಿಂದ ಭಜಿಸುವೆ || ೧ ||

ಭಕ್ತಿರಸವೆಂಬೋ ಮುತ್ತು ಮಾಣಿಕ್ಯದ ಹರಿವಾಣದೀ
ಮುಕ್ತನಾಗಬೇಕು ಎಂದು ಮುತ್ತಿನಾರು ಎತ್ತುವೆ || ೨ ||

ನಿನ್ನ ನಾನು ಬಿಡುವನಲ್ಲ ಎನ್ನ ನೀನು ಬಿಡಲು ಸಲ್ಲ || ೩ ||
ಘನ್ನ ಮಹಿಮ ವಿಜಯ ವಿಠಲ ನಿನ್ನ ಭಕುತರ ಕೇಳೋ ಸೊಲ್ಲ


Sada Enna Hrudayadalli

Author : Vijaya Dasaru


sadaa enna hrdayadalli vAsamADO shri hari ||P||
nAda murti ninna pAda mOdadinda bhajisuve ||A||

jnAnavembo navaratnada maNTapada madhyadali
vENugAna lOlana kuLLirisi modadinda bhajisuve ||1||

bhakti rasavembO mttuu mANikyada harivANAdi
muktanAga bEku endu muttinArati ettuve ||2||

ninna nAnu biDuvanalla enna neenu bidalu salla
ghana mahima vijayavithala ninna bhakutara kELO solla ||3||

Famously sung by Bhimsen Joshi / ಭೀಮಸೇನ್ ಜೋಶಿ ಅವರ ಹಾಡುಗಾರಿಕೆ 



Beautiful rendition by Shankar Shanbogue / ಶಂಕರ್ ಶಾನುಭೋಗ್ ಅವರ  ಕಂಠ ಸಿರಿ 






Thursday, May 7, 2020

ಎದ್ದು ಬರುತಾರೆ ನೋಡೆ / Yeddu baruthare Node


ಎದ್ದು ಬರುತಾರೆ ನೋಡೆ 



ಗೀತ ರಚನೆ : ಗುರು ಜಗನ್ನಾಥ ದಾಸರು 


ಎದ್ದು ಬರುತಾರೆ ನೋಡೆ ತಾ
ವೆದ್ದು ಬರುತಾರೆ ನೋಡೆ || ಪ ||

ಮುದ್ದು ಬೃಂದಾವನ ಮಧ್ಯದೊಳಗಿಂದ
ತಿದ್ದಿ ಹಚ್ಚಿದ ನಾಮ ಮುದ್ರೆಗಳಿಂದೊಪ್ಪುತ || ಅ ||

ಗಳದೊಳು ಶ್ರೀ ತುಳಸಿ ನಳಿನಾಕ್ಷಿ ಮಾಲೆಯು
ಚೆಲುವ ಮುಖದೊಳು ಪೊಳೆವೊ ದಂತಗಳಿಂದ || ೧ ||

ಹೃದಯಮಂದಿರದಲ್ಲಿ ಪದುಮನಾಭನ ಭಜಿಸಿ
ಮುದಮನದಲಿ ನಿತ್ಯ ಸದಮಲ ರೂಪತಾಳಿ || ೨ ||

ದಾತ ಗುರುಜಗನ್ನಾಥವಿಠ್ಠಲನ್ನ
ಪ್ರೀತಿಯ ಪಡಿಸುತ ದೂತರ ಪೊರೆಯುತ || ೩ ||

 Yeddu baruthare Node

Author : Guru Jagannatha Dasaru


Yeddu baruthare Node, tha
eddu baruthare Node ||pa||

Muddu Brindavanada Madyadolaginda
Thiddi hachida nama Mudregaloputhive

Galadolu Shri Tulasi Nalinakshi Malegalu
Cheluva Mukhadolu Poleva Danthagalinda ||1||

Hridaya Sadanadalli Padubhanamana Bhajisi
Mudamanadinda Nitya SadaMalaRoopa Thali ||2||

Data Guru Jaganatha Vittalana
Prithiya Padisutha Doothara Poreyutha ||3||

Wednesday, May 6, 2020

ಯಾಕೆ ಮೂಕನಾದ್ಯೋ / Yaake Mookanaadyo

ಯಾಕೆ ಮೂಕನಾದ್ಯೋ




ಕ್ರುತಿ : ಜಗನ್ನಾಥ ದಾಸರು


ಯಾಕೆ ಮೂಕನಾದ್ಯೋ ಗುರುವೆ ನೀ ಯಾಕೆ ಮೂಕನಾದ್ಯೋ ।
ಯಾಕೆ ಮೂಕನಾದೆ ಲೋಕಪಾಲಕ ಎನ್ನ ।
ಸಾಕುವರ್ಯಾರಯ್ಯ ಶ್ರೀಕರ ರಾಘವೇಂದ್ರ ॥

ಹಿಂದಕ್ಕೆ ನೀ ಎನ್ನ ಮುಂದೆ ಸುಳಿದಾಡಿದಿ ।
ಮಂದಿಯೊಳಗೆ ಎನ್ನ ಮಂದನ್ನ ಮಾಡಿದ್ಯಲ್ಲೋ ॥ ೧ ॥

ಬೇಕಾಗದಿದ್ದರಿನ್ಯಾಕೆ ಕೈಯನು ಪಿಡಿದೆ ।
ಕಾಕುಜನರೊಳೆನ್ನ ನೂಕಿಬಿಟ್ಟು ನೀನು (/ನೀ) ॥ ೨ ॥

ಈಗ ಪಾಲಿಸದಿರೆ ಯೋಗಿಕುಲವರ್ಯ ।
ರಾಘವೇಂದ್ರನೆ ಭವ ಸಾಗುವದ್ಹ್ಯಾಂಗಯ್ಯ ॥ ೩ ॥

ನಿನ್ನಂಥ ಕರುಣಿಯಿಲ್ಲ ಎನ್ನಂಥ ಕೃಪಣಿಯಿಲ್ಲ ।
ಘನ್ನಮಹಿಮ ನೀ ಎನ್ನನು ಬಿಟ್ಟೀಗ ॥ ೪ ॥

ಜನನಿಯು ನೀ ಎನ್ನ ಜನಕನಯ್ಯ ।
ಮನ್ನಿಸೊ ನೀ ನಿತ್ಯಾನನ್ಯ ಶರಣನೆ (/ಶರಣ್ಯ) ॥ ೫ ॥

ಎಂದಿಗಾದರು ನಿನ್ನ ಪೊಂದಿಕೊಂಡವನಲ್ಲೋ ।
ಇಂದು ನೀ ಕೈಬಿಟ್ಟರೆನ್ನ ಮುಂದೆ ಕಾಯುವರ್ಯಾರೋ ॥ ೬ ॥

ನಾಥನು ನೀ ಅನಾಥನು ನಾನಯ್ಯ ।
ಪಾತಕರರಿ ಜಗನ್ನಾಥವಿಠ್ಠಲದೂತ (/ಜಗನ್ನಾಥವಿಠ್ಠಲದಾಸ) ॥ ೭

---------------------------------------------------------------------------------------------------------

Yaake Mookanaadyo


Author : Jagannatha Dasaru

yAkE mUkanAdyO. rAgA: ahIrbhairav/jOnpuri. Adi tALA.

yAkE mUkanAdyO guruvE nI yAkE mUkanAdyO ॥pa॥
yAkE mUkanAdi lOka pAlaka enna sAkuvarArayya shrIkara rAghavEndra ॥a pa॥

hindakka nIyenna mundE suLidADidi 
mandi oLage enna mandana mADidi Iga  ॥1॥

bEkagadiddare inyAka kaiyanu piDide 
sAku janaroLenna nUkibiTTu nInu  ॥2॥

Iga pAlisidarE yOgi kulavaryA 
rAghavEndrane bhava sAguva dhyAngayya ॥3॥

ninnantha karuNilla ennantha krpaNillA 
ghanna mahimanu nI ennanu biTTIga  ॥4॥

jananiyu nI enagE enna janakanayyA 
mannisO nI nitya nanna sharaNanayyA ॥5॥

endigAdaru ninna hondikoNDavanallO 
indu nI biTTarenna munde kayuvadArO ॥6॥

nAthanu nI anAthanu nAnayya 
pAtaka hari (su?) nI jagannAtha viThala dAsa ॥7॥



ರೋಗ ಹರನೆ ಕೃಪಾಸಾಗರ ಶ್ರೀ ಗುರು / Roga Harane Krupa Sagara Shri Guru

ರೋಗ ಹರನೆ ಕೃಪಾಸಾಗರ ಶ್ರೀ ಗುರು



ಗೀತ ರಚನೆ : ಜಗನ್ನಾಥ  ದಾಸರು 


ರೋಗ ಹರನೆ ಕೃಪಾಸಾಗರ ಶ್ರೀ ಗುರು
ರಾಘವೇಂದ್ರ ಪರಿಪಾಲೀಸೊ ||ಪ
|| 

ಸಂತತ ದುರ್ಮತ ಧ್ವಾಂತ ದಿವಾಕರ
ಸಂತವಿನುತ ಮತ ಲಾಲಿಸೊ || ೧ ||

ಪಾವನ ಗಾತ್ರ ಸುದೇವ ವರನೆ ತವ
ಸೆವಕ ಜನರೊಳಗಾಡಿಸೊ || ೨ ||

ಘನ್ನ ಮಹಿಮ ಜಗನ್ನಾಥ ವಿಠ್ಠಲ ಪ್ರಿಯ
ನಿನ್ನಾರಾಧನೆ ಮಾಡಿಸೊ || ೩ ||

Roga Harane Krupa Sagara Shri Guru


Author : Jagannatha Dasaru

Roga Harane Krupa Sagara Shri Guru
Raghavendra PariPaaleeso ||

Santhata Durmatha Dwanta Diwakara
Santhavinutha Matha Laleeso ||1||

Paavana Gathra sudeva varane Thava
Sevaka Janarolagadeeso ||2||

Ghanna Mahima Jaganatha Vittala Priya
Ninna Aradhane Madeeso ||3||


Listen to song by Shri Vidyabhushana