Pages

Sunday, April 18, 2021

ಬವ್ವು ಬಂದಿತಲ್ಲ / Bavvu Banditalla

ಬವ್ವು ಬಂದಿತಲ್ಲ 


ರಚನೆ : ಶ್ರೀ ಪುರಂದರ ದಾಸರು 

ಬವ್ವು ಬಂದಿತಲ್ಲ, ರಂಗಯ್ಯ, ಬವ್ವು ಬಂದಿತಲ್ಲ ||ಪ||
ಬವ್ವು ನಿನ್ನ ಕಾಲು ಕಚ್ಚಿತೋ ಕೃಷ್ಣ ||ಅ||

ಸೆರಗು ಪಿಡಿದು ನೀ ಹೇಳದೆ ಮಲಗೊ
ತಿರುಗಿದರೆ ನೋಡು ಮತ್ತಿಲ್ಲೆ
ಬೂದಿಯ ಹಚ್ಚಿದೆ ಕೂದಲು ಬಿಚ್ಚಿದೆ
ಸ್ವಾದವ ಕಂಡು ಬಂದಿತಿಲ್ಲಿ ||೧||

ಹಿಡಿದ ತ್ರಿಶೂಲ ಪಿಡಿದ ಕಪಾಲ
ಮುಕ್ಕಣ್ಣಲಿ ಕಿಡಿಯುದುರಿಸುತ
ಹಾವು ಕೊರಳಲಿಟ್ಟು ಹುಲಿಯ ಚರ್ಮವ ಹೊದ್ದು
ಸುತ್ತಲಿ ಬರುತಿದೆ ಬವ್ವುತನ ದಂಡು ||೨||

ಕಪ್ಪುಗೊರಳ ಬವ್ವು ಒಪ್ಪುವ ಎತ್ತನೇರಿ
ತಪ್ಪದೆ ಬಂದೀತು ಬಿಡು ಮುನ್ನೆ
ಅಪ್ಪ ಕೃಷ್ಣರಾಯ ಪುರಂದರವಿಠಲನೆ
ಒಪ್ಪಿಸಿ ಕೊಡುವೆನು ಈಗಲೆ ನಿನ್ನ ||೩||

Bavvu Banditalla

Author : Shri Purandara Dasaru


bavvu banditalla, rangayya, bavvu banditalla ||pa||
Bavvu ninna kalu kachchito krishna ||a||

Seragu pididu ni heLade malago
Tirugidare nodu mattille
Budiya hachchide koodalu bichchide
Svaadava kanDu banditilli ||1||

HiDida trishoola piDida kapala
Mukkannali kidiyudurisuta
Haavu koraLalittu huliya charmava hoddu
Suttali barutide bavvutana dandu ||2||

KappugoraLa bavvu oppuva ettaneri
Tappade baneetu bidu munne
Appa krishnaraya purandaravithalane
Oppisi koduvenu eegale ninna ||3||

Saturday, April 17, 2021

ಸಹಿಸಲಾರೆನೆ ಗೋಪಿ ನಿನ್ನ ಮಗನ / Sahisalaarene gopi ninna magana

ಸಹಿಸಲಾರೆನೆ ಗೋಪಿ ನಿನ್ನ ಮಗನ ಲೂಟಿ



ರಚನೆ : ಶ್ರೀ ಪುರಂದರ ದಾಸರು 

ಸಹಿಸಲಾರೆನೆ ಗೋಪಿ ನಿನ್ನ ಮಗನ ಲೂಟಿ,
ಏನೆಂದು ಪೇಳಮ್ಮ ||ಪ ||
ವಾಸುದೇವನು ಬಂದು ಮೋಸದಿಂದಲಿ ಎನ್ನ
ವಾಸವ ಸೆಳಕೊಂಡು ಓಡಿ ಪೋದನಮ್ಮ ||ಅ ||

ದೇವರ ಪೆಟ್ಟಿಗೆ ತೆಗೆದು ಸಾಲಿಗ್ರಾಮ
ಸಾವಿರ ನುಂಗುವನೆ
ಭಾವಜನಯ್ಯ ಇದೇನೆಂದರೆ ನಿಮ್ಮ
ಕಾವ ದೇವರು ನಾ ಕೇಳಿಕೋ ಎಂಬನೆ ||೧||

ಅಗ್ರೋದಕ ತಂದು ಜಗಲಿ ಮೇಲಿಟ್ಟರೆ
ವೆಗ್ಗಳದಲಿ ಕುಡಿವ
ಮಂಗಳಮಹಿಮನ ಮೀಸಲೆಂದರೆ ನಿಮ್ಮ
ಮಂಗಳಮಹಿಮನ ಅಪ್ಪ ನಾನೆಂಬನೆ ||೨||

ಅಟ್ಟಡುಗೆಯನೆಲ್ಲ ಉಚ್ಚಿಷ್ಟ ಮಾಡಿ
ಅಷ್ಟು ತಾ ಬಳಿದುಂಬನೆ
ಕೃಷ್ಣದೇವರ ನೈವೇದ್ಯವೆಂದರೆ ನಿಮ್ಮ
ಇಷ್ಟ ದೇವರು ತೃಪ್ತನಾದನೆಂತೆಂಬನೆ ||೩||

ಋತುವಾದ ಬಾಲೆಯರು ಪತಿಯೊಡೆಗೆ ಪೋಪಾಗ
ಪಥದೊಳಗಡಗಿರುವ
ಮತಿಗೆಟ್ಟ ಹೆಣ್ಣೆ ಸುಂಕವ ಕೊಡು ಎನುತಲಿ
ರತಿಯಿಂದ ಮಾನವ ಸೂರೆಗೊಂಬುವನೆ ||೪||

ಅಚ್ಚ ಪಾಲ್ಮೊಸರು ನವನೀತವು ಮಜ್ಜಿಗೆ
ರಚ್ಚೆ ಮಾಡಿ ಕುಡಿವ
ಸ್ವಚ್ಛ ಶ್ರೀಪುರಂದರವಿಟ್ಠಲರಾಯನ
ಇಚ್ಛೆಯಿಂದಲಿ ನಿನ್ನ ಮನೆಗೆ ಕರೆದು ಕೊಳ್ಳೆ ||೫||

Sahisalaarene gopi ninna magana

Author : Shri Purandara Dasaru


Sahisalaarene gOpi ninna magana looti
Enendu peLamma ||pa||
Vasudevanu bandu mosadindali enna
Vaasava seLakondu odi pOdanamma ||a ||

Devara pettige tegedu saligrama
Saavira nunguvane
Bhaavajanayya idEnendare nimma
Kaava devaru naa kELiko embane ||1||

Agrodaka tandu jagali melittare
Veggaladali kuDiva
MangaLamahimana meesalendare nimma
MangaLamahimana appa naanembane ||2||

AttaDugeyanella uchchishta maadi
Ashtu ta baLidumbane
Krishnadevara naivedyavendare nimma
Ishta devaru truptanaadanentembane ||3||

Rutuvada baaleyaru patiyoDege pOpaaga
Pathadolagadagiruva
Matigetta heNNe sunkava kodu enutali
Ratiyinda manava sooregombuvane ||4||

Achcha palmosaru navaneetavu majjige
Rachche maadi kudiva
Svachcha shripurandaravitthalarayana
Ichcheyindali ninna manege karedu kolle ||5||

ಕಂದನೇಕೆ ಮಲಗನೆ / Kandaneke Malagane

ಕಂದನೇಕೆ ಮಲಗನೆ




ರಚನೆ : ಶ್ರೀ ಪುರಂದರ ದಾಸರು

ಕಂದನೇಕೆ ಮಲಗನೆ , ಕೇಳೆಲೆ ಸಖಿ ||ಪ||
ಕಾಯಜಜನಕಗೇನಾಯಿತು ಇವಗೆ
ಯಾವಳ ದೃಷ್ಟಿ ತಾಗಿತೆ ||ಅ||

ಕಂದನೇಕೆ ಕಣ್ಣ ಮುಚ್ಚನೆ
ಇಂದು ನೀರದಡದಲ್ಲಿರುವನೆ , ಏ-
ನೆಂದರು ಮುಖವೆತ್ತಿ ನೋಡನೆ , ಗೋ-
ವಿಂದ ಬಾ ಎಂದರೆ ಬಾಯ ತೆರೆವನೆ ||೧||

ತನಯನಾಗಿ ಧರೆ ಅಳೆದನೆ , ತನ್ನ
ಜನನಿಯ ಕಂಡರೆ ಸೇರನೆ
ಮುನಿಗಳಂತೆ ಮೌನ ಪಿಡಿದನೆ
ಘನ ಗೋವು ಕಾಯ್ವಾಗ ಗಾಳಿ ಸೋಕಿತೇನೆ ||೨||

ಸುಮ್ಮನೇತಕೆ ವ್ರತ ಕೆಡಿಸಿದನೆ
ಹಮ್ಮಿನಿಂದಲಿ ಖಡ್ಗ ಪಿಡಿದನೆ
ಜನ್ಮಜನ್ಮಗಳಲ್ಲಿ ಬಿಡದಲಿರುವ ನೀ ಬಾರೊ
ಬೊಮ್ಮ ಶ್ರೀ ಪುರಂದರವಿಠಲ ||೩||

Kandaneke Malagane

Author : Shri Purandara Dasaru

KandanEke malagane , keLele sakhi ||pa||
Kayajajanakagenayitu ivage
YavaLa drushti tagite ||a||

KandanEke kaNNa muchchane
Indu neeradaDadalliruvane , E-
nendaru mukhavetti noDane , go-
vinda ba endare baaya terevane ||1||

Tanayanaagi dhare aLedane , tanna
Jananiya kandare sErane
MunigaLante mauna pididane
Ghana gOvu kayvaaga gaaLi sOkitEne ||2||

SummanEtake vrata kedisidane
Hamminindali khadga piDidane
JanmajanmagaLalli bidadaliruva ni baro
Bomma sri purandaravithala ||3||




Wednesday, April 7, 2021

ಗೋಕುಲದೊಳು ನಿನ್ನ ಮಗನ ಹಾವಳಿ / GokuladoLu ninna magana haavali

ಗೋಕುಲದೊಳು ನಿನ್ನ ಮಗನ ಹಾವಳಿ 



ರಚನೆ : ಶ್ರೀ ಪುರಂದರ ದಾಸರು 


ಗೋಕುಲದೊಳು ನಿನ್ನ ಮಗನ ಹಾವಳಿ ಘನವಾಯಿತಮ್ಮ
ಜೋಕೆ ಮಾಡಿಕೊ ಇಂಥ ದುರುಳತನಕೆ ನಾವು ನಿಲ್ಲೆವಮ್ಮ ||ಪ||

ಬಾಲರ ಒಡಗೂಡಿ ಬಂದೆಮ್ಮ ಮನೆಗಳ ಪೊಗುವನಮ್ಮ , ಒರಳ
ಮೇಲೇರಿ ನೆಲುವಿನ ಮೇಲಿದ್ದ ಬೆಣ್ಣೆಯ ಮೆಲುವನಮ್ಮ
ಜಾಲವ ಮಾಡಿ ಎಲ್ಲರಿಗಿಂದ ತಾ ಮುನ್ನೆ ಜಾರ್ವನಮ್ಮ, ಗೋ-
ಪಾಲ ಬೇಡೆಂದು ಹೇಳಿದರೆ ಇವಗೆ ಬುದ್ಧಿ ಸಾಲದಮ್ಮ ||೧||

ಗಂಡನುಳ್ಳವಳೆಂದು ಬೇಡಿಕೊಂಡರೆ ಮಾತ ಕೇಳನಮ್ಮ, ಈ
ಪುಂಡುಗಾರ ನಮ್ಮ ಪುರವನೆಲ್ಲ ಸೂರೆಗೊಂಡನಮ್ಮ
ಗಂಡರೆಲ್ಲರು ಇವನ ನೋಡಿ ತಮ್ಹೆಂಡಿರ ಬಿಡುವರಮ್ಮ, ಕಂಡ-
ಕಂಡ ವೇಳೆಯಲ್ಲಿ ಚಿಕ್ಕ ಚೆಲುವೆಯರ ಕೂಡ್ವನಮ್ಮ ||೨||

ಮಾರಲೀಸನು ಹಾಲು ಮೊಸರ ಕಂಡರೆ ಬಿಟ್ಟು ಬಾರನಮ್ಮ , ತನ್ನ
ವಾರಿಗೆ ಸತಿಯರ ಒಲಿಸಿಕೊಂಬ ಮಾಯಗಾರನಮ್ಮ
ನಾರಿ ಕೇಳಿವನ ನಡತೆ ಯಾರಿಗೂ ಸರಿ ಬಾರದಮ್ಮ, ನಮ್ಮ
ಮಾರಜನಕ ಪುರಂದರವಿಠಲರಾಯ ಜಾರನಮ್ಮ ||೩||

GokuladoLu ninna magana haavali 

Author : Shri Purandara Dasaru

GokuladoLu ninna magana haavali ghanavayitamma
jookay maadiko intha duruLatanake naavu nillevamma ||pa||

Baalara odagudi bandemma manegaLa poguvanamma , oraLa
MEleri neluvina melidda beNNeya meluvanamma
Jaalava maadi ellariginda taa munne jarvanamma, gO-
Pala bEdendu heLidare ivage buddhi saaladamma ||1||

GandanuLLavalendu bEdikondare maata kelanamma, I
Pundugaara namma puravanella sooregondanamma
Gandarellaru ivana nOdi tamhendira biduvaramma, kanda-
Kanda vEleyalli chikka cheluveyara kudvanamma ||2||

Maaraleesanu halu mosara kandare bittu baaranamma , tanna
Vaarige satiyara olisikomba mayagaranamma
Naari keLivana nadate yaarigu sari baradamma, namma
Marajanaka purandaravithalaraya jaranamma ||3||

ಸಿಕ್ಕಿದನೆಲೆ ಜಾಣೆ ಶ್ರೀ ವೇಣುಗೋಪಾಲ / Sikkidanele jaaNe shri vEnugOpala

ಸಿಕ್ಕಿದನೆಲೆ ಜಾಣೆ ಶ್ರೀ ವೇಣುಗೋಪಾಲ




ರಚನೆ : ಶ್ರೀ ಪುರಂದರ ದಾಸರು 


ಸಿಕ್ಕಿದನೆಲೆ ಜಾಣೆ ಶ್ರೀ ವೇಣುಗೋಪಾಲ
ಭಕ್ತವತ್ಸಲ ದೇವನು ||ಪ ||
ಮಕ್ಕಳ ಚಂಡಿಕೆ ಮರದ ಕೊನೆಗೆ ಕಟ್ಟಿ
ಘಕ್ಕನ ಚಪ್ಪಾಳೆಯಿಕ್ಕಿ ನಲಿವ ನಮ್ಮ ||ಅ ||

ಹೆಣ್ಣು ಮಕ್ಕಳು ಬಚ್ಚಲೊಳಗೆಣ್ಣೆ ಹಚ್ಚಿಕೊಂಡು
ಬಣ್ಣ ವಸ್ತ್ರವ ಬಿಚ್ಚಿ ಬತ್ತಲಿರೆ
ಕಣ್ಣಿಗೆ ಬಿಸಿನೀರು ಚೆಲ್ಲಿ ಸೀರೆಯನೊಯ್ದು
ಉನ್ನತವಾದ ವೃಕ್ಷವನೇರಿ ಇಹನಮ್ಮ ||

ಪಟ್ಟೆ ಮಂಚದ ಮೇಲೆ ಪತಿಯಂತೆ ಕುಳ್ಳಿರೆ
ಎಷ್ಟು ಸ್ವತಂತ್ರ ಇವಗೆ ಗೋಪಿ
ಉಟ್ಟ ಸೀರೆಯನೊಯ್ದು ಬಟ್ಟಕುಚವ ಪಿಡಿವ-
ನೆಷ್ಟೆಂದ ಹೇಳೆ ಭ್ರಷ್ಟ ಮಾಡಿದನಮ್ಮ ||

ಸಡಗರದಿ ಷೋಡಶ ಸಹಸ್ರ ಸ್ತ್ರೀಯರ
ಒಡಗೂಡಿ ಕೊಳಲನೂದುತ ಬಂದು
ಕಡೆವ ಗೋಪಿಯ ಜಡೆ ಪಿಡಿದೆಳೆವ ಎ-
ನ್ನೊಡೆಯ ಪುರಂದರವಿಠಲರಾಯನೆ ||


Sikkidanele jaaNe shri vEnugOpala

Author : Shri Purandara Dasaru


Sikkidanele jaaNe shri vEnugOpala
bhaktavatsala devanu ||pa ||
Makkala chandike marada konege katti
Ghakkana chappaleyikki naliva namma ||a ||

Hennu makkalu bachchaloLagenne hachchikondu
Banna vastrava bichchi bettalire
Kannige bisineeru chelli seereyanoydu
Unnatavaada vrukshavanEri ihanamma ||1||

Patte manchada mEle patiyante kullire
Eshtu svatantra ivage gOpi
Utta seereyanoydu battakuchava pidiva-
Neshtenda hELe brashta madidanamma ||2||

Sadagaradi shodasa sahasra streeyara
oDagoodi koLalanooduta bandu
Kadeva gOpiya jaDe pidideLeva e-
Nnodeya purandaravithalarayane ||3||

Listen to song in link below




ಬಾರಮ್ಮ, ಎಲೆ ಮುದ್ದು ಗೋಪ್ಯಮ್ಮ / Baaramma, ele muddu gopyamma

ಬಾರಮ್ಮ, ಎಲೆ ಮುದ್ದು ಗೋಪ್ಯಮ್ಮ 






ರಚನೆ : ಶ್ರೀ ಪುರಂದರ ದಾಸರು 


ಬಾರಮ್ಮ, ಎಲೆ ಮುದ್ದು ಗೋಪ್ಯಮ್ಮ ||ಪ||
ನಿಮ್ಮ , ಬಾಲಕೃಷ್ಣಯ್ಯಗೆ ಬುದ್ಧಿ ಹೇಳಮ್ಮ
ಬಾಲಕರನು ಬಡೆವನಮ್ಮ
ಮುದ್ದು, ನೀಲವರ್ಣಗೆ ಬುದ್ಧಿ ಹೇಳಮ್ಮ ||ಅ||

ಸಣ್ಣವನಾಗಿ ತೋರುವನಮ್ಮ, ಪಾಲ್-
ಬೆಣ್ಣೆ ಮೊಸರು ಕದಿವನಮ್ಮ
ಕಣ್ಣಾರೆ ಕಂಡವು ಮಗ ನಿಮ್ಮ , ಮುದ್ದು
ಚಿಣ್ಣಗೆ ಬುದ್ಧಿಯ ಪೇಳಮ್ಮ ||೧||

ಇಟ್ಟ ಕಸ್ತೂರಿ ನಾಮದವನಮ್ಮ, ಅವ
ಹೊಟ್ಟೆಯೊಳಿಡಬಲ್ಲನೀ ಜಗವನಮ್ಮ
ದುಷ್ಟ ಹಾವನು ತುಳಿದವನಮ್ಮ, ಗೋಪಿ
ಗಟ್ಟ್ಯಾಗಿ ಬುದ್ಧಿಯ ಪೇಳಮ್ಮ ||೨||

ಅರಳೆಲೆ ಮಾಗಾಯಿಯವನಮ್ಮ, ಹೊನ್ನ
ಬೆರಳ ರನ್ನದ ಮುದ್ರಿಕೆಯವನಮ್ಮ
ಇರುಳುಹಗಲು ನಮ್ಮ ಮರುಳು ಮಾಡಿ ಪೋದ
ತರಳಗೆ ಬುದ್ಧಿಯ ಪೇಳಮ್ಮ ||೩||

ಮಾಯಾರೂಪಿಲಿ ಬರುವನಮ್ಮ, ಕದ್ದು
ಆವಿನ ಮೊಲೆ ಉಂಬುವನಮ್ಮ
ಮಾವನ ಕೊಂದನಿವನಮ್ಮ, ಚೆಲ್ವ
ದೇವರ ದೇವಗೆ ಬುದ್ಧಿ ಪೇಳಮ್ಮ ||೪||

ಕಡಹದ ಮರನೇರಿದವನಮ್ಮ, ಬೆಟ್ಟ
ಕೊಡೆ ಮಾಡಿ ಹಿಡಿದು ಕಾಯ್ದವನಮ್ಮ
ಮಡದೇರಂದದಿ ರಮಿಸುವನಮ್ಮ, ಘುಡು
ಘುಡಿಸಿ ಕಂಬದಲೊಡೆವನಮ್ಮ ||೫||

ಒಮ್ಮೆಗೆ ಈವರಿಗೊಲಿದವನಮ್ಮ, ಚೆಲ್ವ
ಬ್ರಹ್ಮದೇವರ ಪಡೆದವನಮ್ಮ
ನಮ್ಮೆಲ್ಲರ ಪೊರೆವ ಪುರಂದರ-ವಿಠಲಗೆ
ಘಮ್ಮನೆ ಬುದ್ಧಿಯ ಪೇಳಮ್ಮ ||೬||


Baaramma, ele muddu gopyamma


Author : Shri Purandara Dasaru


Baaramma, ele muddu gopyamma ||pa||
Nimma , baalakrishnayyage buddhi heLamma
Baalakaranu badevanamma
Muddu, nilavarnage buddhi heLamma ||a||

Sannavanaagi toruvanamma, paal-
Benne mosaru kadivanamma
Kannaare kandavu maga nimma , muddu
Chinnage buddhiya pElamma||1||

Itta kasturi naamadavanamma, ava
HotteyoLidaballanee jagavanamma
Dushta haavanu tulidavanamma, gopi
Gattyagi buddhiya pElamma||2||

Aralele maagayiyavanamma, honna
BeraLa rannada mudrikeyavanamma
IruLu hagalu namma marulu madi pOda
TaraLage buddhiya pElamma ||3||

Maayarupili baruvanamma, kaddu
Avina mole umbuvanamma
Maavana kondanivanamma, chelva
Devara devage buddhi pElamma||4||

KaDahada maraneridavanamma, betta
Kode maadi hiDidu kaaydavanamma
MadadErandadi ramisuvanamma, ghudu
Ghudisi kambadalodevanamma ||5||

Ommege eevarigolidavanamma, chelva
Brahmadevara padedavanamma
Nammellara poreva purandara-vithalage
Ghammane buddhiya pElamma||6||







Tuesday, April 6, 2021

ನೋಡು ನೋಡು ನೋಡು ಕೃಷ್ಣ / Nodu nodu nodu krishna

ನೋಡು ನೋಡು ನೋಡು ಕೃಷ್ಣ


ರಚನೆ : ಶ್ರೀ ಪುರಂದರ ದಾಸರು 


ನೋಡು ನೋಡು ನೋಡು ಕೃಷ್ಣ ಹೇಗೆ ಮಾಡುತಾನೆ
ಬೇಡಿಕೊಂಡರೆ ಬಾರ ಕೃಷ್ಣ, ಓಡಿ ಹೋಗುತಾನೆ ||ಪ||

ಕಂಡಕಂಡವರ ಮೇಲೆ ಕಣ್ಣ ಹಾಕುತಾನೆ
ಉಂಡು ಉಂಡು ಮುಸುಕನಿಟ್ಟು ಮಲಗಿಕೊಳ್ಳುತಾನೆ
ಲಂಡತನವ ಮಾಡಿ ಮಾಡಿ ಮಣ್ಣ ಗೋರುತಾನೆ
ಭಂಡು ಮಾಡಿ ಬಾಗಿಲೊಳಗೆ ಚೀರಿಕೊಳ್ಳುತಾನೆ ||೧||

ಕರುಣವಿಲ್ಲದಲೆ ಬಂದು ಕಾಲಲೊದೆಯುತಾನೆ
ಶರಣು ಹೊಕ್ಕರೆಯು ತಾನೆ ಕೊಡಲಿ ಮಸೆಯುತಾನೆ
ಹರಿಯುವ ವಾನರರ ಕೂಡ ಹಾರಾಡುತಾನೆ
ಸಿರಿಕೃಷ್ಣ ಹಾಲು-ತುಪ್ಪ ಸೂರೆಮಾಡುತಾನೆ ||೨||

ಬಾಲೆಯರಿಗೆ ವರವನಿತ್ತು ಪುರವ ಕೆಡಿಸುತಾನೆ
ನೀಲಗುದುರೆಯನೇರಿ ಹಾರಿಸಾಡುತಾನೆ
ಬಾಲಕರ ಕೂಡಿಕೊಂದು ಕುಣಿದಾಡುತಾನೆ
ಲೋಲಪುರಂದರವಿಠಲ ತಾನು ಕುಣಿಯುತಾನೆ||೩||


Nodu nodu nodu krishna

Author : Shri Purandara Dasaru

Nodu nodu nodu krishna hEge maadutane |
Bedikondare baala krishna Odi hogutaane ||pa||

Kanda kandavara mEle kannu haakutaane |
Undu undu musukanittu malagikoLLutaane ||
Landatanava maadi maadi maNNa gorutaane |
Bhandu maadi baagiloLage cheerikollutaane ||1||

Karunavilladale bandu kaalalodeyutaane |
Sharanu hokkareyu taanu kodali maseyutaane ||
Hariyuva vaanarara kooda haraDutaane |
Sirikrishna haalu tuppa sooremaadutaane ||2||

BaLeyarige varavanittu purava kedisutaane |
Neelagudureyaneri harisaadutaane ||
Baalakara koodikondu kunidaadutaane |
Lolapurandara vithala taanu kuniyutane ||3||


Listen to song here