Pages

Monday, June 15, 2020

ರಾಜತಾದ್ರಿ ನಿಲಯನ ರಜನೀಶ ಧರನತೋರೆ ಪಾರ್ವತಿಯೆ / Rajataadri nilayana rajanisha dharana Tore paarvatiye



ರಾಜತಾದ್ರಿ ನಿಲಯನ ರಜನೀಶ ಧರನತೋರೆ ಪಾರ್ವತಿಯೆ||pa||

ಪಂಚಾನನ ಶಂಕರನ | ಶ್ರೀ ಹರಿಮಂಚಪದವ ಪಡೆದವನ
ಪಂಚಬಾಣ ಮದಹರನ ಉರುವಿರಂಚಿ ಕುವರ ದೂರ್ವಾಸ ಶುಕನ ತೋರೆ ಪಾರ್ವತಿಯೆ ||1||

ನಂದಿಸುಶ್ಯಂದನ ಶಿವನ ಗರಳಕಂಧರ ತ್ರಿಪುರಾಂತಕನ
ಮಂದಾಕಿನಿಧರ ಭವನ ಸುರವೃಂದ ವಿನುತ ನಗಚಾಪಭವನ ತೋರೆ ಪಾರ್ವತಿಯೆ||2||

ಸಾಮಜ ಚರ್ಮಾಂಬರನ | ಶುಭಕಾಮಿತ ಫಲದಾಯಕ
ನವಾಮದೇವ ಮುನಿಸುತನ | ಶ್ರೀವರಶಾಮಸುಂದರನ ಸುಖನ ತೋರೆ ಪಾರ್ವತಿಯೆ ||3||

Rajataadri nilayana rajanisha dharana Tore paarvatiye || pa ||

Panchaanana shankarana shreehari |
Manca padavi padedavana |
Panca baana madaharanaa | guru |
Virinci kuvara doorvaasa shukana || 1 ||

Nandi sushyandana shivanaa | gara |
Kandhara tripuraantakanaa |
Mandaakinidhara bhuvana suraa |
Vrundavinuta nagachaapa dharanaa || 2 ||

Saamaja charmaambaranaa | shubha |
Kaamita phaladaayakanaa |
Vaamadeva muni sutanaa shreevara |
Shyamasudarana premada sakhanaa || 3 ||

Monday, June 8, 2020

ಅತಿ ಶೋಭಿಸುತಿದೆ ಶ್ರೀಪತಿವಾಹನ / Ati shobisutide shreepativahana

ಗರುಡ ದೇವರ ಕಥೆಯನ್ನು ಸಾರುವ ಈ ಹಾಡಿನ ರಚನೆ ಶ್ರೀ ಜಗನ್ನಾಥ ದಾಸರದ್ದು.


ರಚನೆ : ಜಗನ್ನಾಥ ದಾಸರು 

ಅತಿ ಶೋಭಿಸುತಿದೆ ಶ್ರೀಪತಿವಾಹನ ।।ಪ।।
ಚತುರದಶ ಲೋಕದಲಿ ಅಪ್ರತಿವಾಹನ ।।ಅ।।

ವಿನುತಕಶ್ಯಪ ಮುನಿಗೆ ತನಯನೆನಿಸಿದ ವಾಹನ
ಅನುಜರನು ಕದ್ದೊಯ್ದ ಅತ್ಯಾಢ್ಯ ವಾಹನ
ವನದಿ ಮಧ್ಯದಿ ನಾವಿಕರ ಭಕ್ಷಿಸಿದ ವಾಹನ
ಜನಪನಾಜ್ಞದಿ ಕೂರ್ಮಗಜರ ನುಂಗಿದ ವಾಹನ ।।೧।।

ಕುಲಿಶಪಾಣಿಯ ಕೂಡೆ ಕಲಹ ಮಾಡಿದ ವಾಹನ
ಒಳಹೊಕ್ಕು ಪೀಯೂಷ ತಂದ ವಾಹನ
ಮಲತಾಯಿ ಮಕ್ಕಳನು ಮರುಳುಗೊಳಿಸಿದ ವಾಹನ
ಬಲಿರಾಯ ಒಯ್ದ ಮಕುಟವ ತಂದ ವಾಹನ ।।೨।।

ಕಾಲನಾಮಕನಾಗಿ ಕಮಲಭವನಲಿ ಜನಿಸಿ
ಕಾಲಾತ್ಮ ಹರಿಯ ಸೇವಿಪ ವಾಹನ
ಕಾಳಗದಿ ಕಪಿವರರ ಕಟ್ಟುಬಿಡಿಸಿದ ವಾಹನ
ವಾಲಖಿಲ್ಯಗ ಪಿಡಿದ ವರವಾಹನ ।।೩।।

ಕೂಪರದೆಡೆಗೆ ಮಂದಾರವೈದ ವಾಹನ ನಿಜ
ರೂಪದಿ ಹರಿಸೇವೆಗೈವ ವಾಹನ
ಆ ಪಿತೃಗಳಿಗಮೃತ ಪ್ರಾಪ್ತಿಸಿದ ವಾಹನ
ಸೌಪರ್ಣಿ ಪತಿಯೆಂಬ ಹೊಂಬಣ್ಣ ವಾಹನ ।।೪।।

ಪನ್ನಗಾಶನ ವಾಹನ ಪತಿತಪಾವನ ವಾಹನ
ಸನ್ನುತಿಪ ಭಕ್ತರನ್ನು ಸಲಹುವ ವಾಹನ
ಪನ್ನಗಾದ್ರಿನಿವಾಸ ಜಗನ್ನಾಥವಿಠ್ಠಲಗೆ
ಉನ್ನತ ಪ್ರಿಯವಾದ ಶ್ರೀ ಗರುಡವಾಹನ ।।೫।।

Author : Shri Jagannatha Dasaru

Ati shobisutide shreepativahana
Chaturadasha lokadali aprativahana

Vinutakashyapa munige tanayanenisida vahana
anujaranu kaddoyda atyaaDya vahana
vanadi madyadi naavikara bakshisida vahana
janapanaagnadi kurmagajara nungida vahana

KulishapaaNiya koode kalaha maadida vahana
olahokku peeyusha tanda vahana
malataayi makkalanu marulugoLisida vahana
baliraaya oidha makutava tanda vahana

Kaalanaamakanaagi kamalabhavanali janisi
kaalatma hariya sevipa vahana
kaaLagadi kapivarara kattubidisida vahana
vaalakilyaga pidida varavahana

Kooparadedege mandaravaida vahana nija
rupadi harisevegaiva vahana
aa pitrugaligamruta praaptisida vahana
sauparni patiyemba hombanna vahana

Pannagaashana vahana patitapavana vahana
sannutipa bhaktaranu salahuva vahana
pannagaadrinivasa jagannathavitthalage
unnata priyavada shree garudavahana

Listen to song by Naada Ninaada


ಆನಂದ ಆನಂದ ಮತ್ತೆ ಪರಮಾನಂದ / Ananda Ananda Matte Paramaananda

ಪುರಂದರ ದಾಸರು ಕನಸಿನಲ್ಲಿ ಬಂದು ದಾಸಪ್ಪರವರಿಗೆ ವಿಜಯ ದಾಸ ಎಂದು ಬಿರುದಾಂಕಿತ ಕೊಟ್ಟರು. ವಿಜಯ ದಾಸರಿಗೆ ದಾಸರಾದ ಮೇಲೆ ಬರೆದ ಮೊದಲ ಹಾಡು ಆನಂದ ಆನಂದ ಮತ್ತೆ ಪರಮಾನಂದ ಎಂದು ಪ್ರತೀತಿ ಇದೆ. ವಿಜಯ ದಾಸರು ತಮ್ಮ ಹಿಂದಿನ ಜನ್ಮದಲ್ಲಿ ಮಧ್ವಪತಿ ಎಂಬ ಹೆಸರಿಂದ ಪುರಂದರ ದಾಸರ ನಾಲ್ಕನೇ ಮಗನಾಗಿದ್ದರು ಎಂದು ಕಥೆಗಳು ಹೇಳುತ್ತವೆ.



ರಚನೆ : ಶ್ರೀ ವಿಜಯ ದಾಸರು

ಆನಂದ ಆನಂದ ಮತ್ತೆ ಪರಮಾನಂದ || ಪ ||
ಆ ನಂದನ ಕಂದ ಒಲಿಯಲು ಏನಂದದ್ದೇ ವೇದವೃಂದಾ ||ಅ.ಪ||

ಆ ಮೊದಲು ಕ್ಷ ಕಾರಾಂತ ಈ ಮಹಾ ವರ್ಣಗಳೆಲ್ಲ |
ಸ್ವಾಮಿಯಾದ ವಿಷ್ಣುವೀನ ನಾಮವೆಂದು ತಿಳಿದವರಿಗೆ||೧||

ಬಾರೋ ತಾರೋ ಬೀರೋ ಸಾರೋ ಮಾರೋ ತೋರೋ ಹಾರೋ ಹೋರೋ |
ಸೇರೋ ತೋರೆಂಬುದೆಲ್ಲ ಈಶ ಪ್ರೇರಣೆ ಎಂದರಿತವರಿಗೆ || ೨ ||

ಜಲಕಾಷ್ಠ ಶೈಲ ಗಗನ ಜಲ ಪಾವಕ ವಾಯು ತರು |
ಫಲ ಪುಷ್ಪ ಬಳ್ಳಿಗಳಲ್ಲಿ ಹರಿ ವ್ಯಾಪ್ತನೆಂದರಿತವರೀಗೆ || ೩ ||

ಪೋಪುದು ಬಪ್ಪುದು ಕೋಪ ಶಾಂತ ಮಾಡುವುದು |
ರೂಪ ಲಾವಣ್ಯವು ಹರಿ ವ್ಯಾಪಾರ ಎಂದರಿತವರೀಗೆ || ೪ ||

ಮಧ್ವ ಶಾಸ್ತ್ರ ಪ್ರವಚನ ಮುದ್ದು ಕೃಷ್ಣ ದರುಶನ |
ಸಿದ್ಧ ವಿಜಯ ವಿಠ್ಠಲನ ಮನದಿ ಕೊಂಡಾಡುವವರಿಗೆ || ೫ ||

Author : Shri Vijaya Dasaru

ananda ananda matte paramaananda ||pa||
aa nandana kanda oliyalu enandadde vedavrundaa ||a pa||

aa modalu kshakaaraanta ee maha varNagaLella
swamiyaada vishnuVina naamavendu tiLidavarige ||1||

baaro taaro beero saaro maaro toro haaro haaro
sEro tOrembudella eesha prerane endaritavarige ||2||

jalaakaashta bappudu kopa pavaka vaayu taru
phala pushpa baLLigaLalli hari vyaaptanendaritavarige ||3||

pOpudu bappudu kOpa shanta maaduvudu
rUpa lavaNyavu hari vyaapaara endaritavarige ||4||

madhwashaastra pravachana muddu krishna
darushana sidha vijaya vithalana manadi konDaDuvarige ||5||

Listen to song by Shri Mysore Ramachandrachar


ಅಕ್ಕ ಕೇಳೆ ನಿನ್ನ ತಪಸಿಯರೊಳಗೊಬ್ಬ / akka kELe ninna tapasiyaroLagobba


ರಚನೆ : ಶ್ರೀ ಮಹಿಪತಿ ದಾಸರು 

ಅಕ್ಕ ಕೇಳೆ ನಿನ್ನ ತಪಸಿಯರೊಳಗೊಬ್ಬ ಮುಕ್ಕಣ್ಣಗೀವರಂತೆ |
ಮುಕ್ಕಣ್ಣಗೀವರಂತೆ || ಪ ||
ಮೂರ್ಖನೊ ಗಿರಿರಾಜ ವಿಗಡ ಮುನಿ |
ಮಾತನೆ ಲೆಕ್ಕಿಸಿ ಮದುವೆ ಮಾಡಿ ಕೊಡುವನಂತೆ || ಅ. ಪ. ||

ತಲೆ ಎಲ್ಲ ಜಡೆಯಂತೆ | ಅದರೊಳಗೆ ಜಲವಂತೆ |
ತಿಲಕ ಫಣೆಗೆ ಬಾಲಚಂದ್ರನಂತೆ |
ಹೊಳೆವ ಕಿಡಿಗಣ್ಣಂತೆ | ನಂಜು ಗೊರಳನಂತೆ |
ಸಲೆ ರುಂಡ ಮಾಲೆಯ ಕೊರಳಿಗ್ಹಾಕಿಹನಂತೆ || 1 ||

ಉರಗ ಭೂಷಣನಂತೆ | ಭಸ್ಮ ಲೇಪನನಂತೆ |
ಕರಿಯ ಚರ್ಮಾಂಬರ ಉಡುಗೆಯಂತೆ |
ತಿರಿದು ಉಂಬುವನಂತೆ | ಬಿಳಿಯ ಮೈಯವನಂತೆ |
ನಿರುತ ಡಮರುವ ಬಾರಿಸುವ ಜೋಗಿಯಂತೆ || 2 ||

ಹಡೆದವಳಿಲ್ಲವಂತೆ | ಎತ್ತನೇರುವನಂತೆ |
ಅಡವಿ ಗಿರಿಗಳಲಿ ಇಪ್ಪನಂತೆ |
ಒಡನೆ ಪುಲಿದೊಗಲ ಹಾಸಿಗೆ ಇಹುದಂತೆ |
ನುಡಿಗೊಮ್ಮೆ ರಾಮನೆಂಬೋ ಸ್ಮರಣೆಯಂತೆ || 3 ||

ಮಾರನ ರಿಪುವಂತೆ ಐದು ಮೋರೆಗಳಂತೆ |
ಆರೂ ಇಲ್ಲದ ಪರದೇಶಿಯಂತೆ|
ಧಾರುಣಿಯೊಳು ಗುರು ಮಹಿಪತಿಸುತಪ್ರಭೋ |
ಭವ ತಾರಕ ಶಿವನೆಂದು ಮೊರೆ ಹೋಗಬೇಕಂತೆ || 4 ||

Author : Shree Mahipati Dasaru

akka kELe ninna tapasiyaroLagobba
mukkaNNageevarante |
mukkaNNageevarante || pa ||
moorkhano giriraaja vigaDa muni |
maatane lekkisi maduve maaDi koDuvanante || a.pa. ||

tale ella jaDeyante  adaroLage jalavante |
tilaka phaNege baalachandranaMte |
hoLeva kiDigaNNante | nanju goraLanante |
sale runDa maaleya koraLig~haakihanante || 1 ||

uraga bhooShaNanante | bhasma lEpananante |
kariya charmaanbara uDugeyante |
tiridu unbuvanante | biLiya maiyavanante |
niruta Damaruva baarisuva jOgiyante || 2 ||

haDedavaLillavante | ettanEruvanante |
aDavi girigaLali ippanante |
oDane pulidogala haasige ihudante |
nuDigomme raamanembO smaraNeyante || 3 ||

maarana ripuvante aidu mOregaLante |
aaroo illada paradEshiyante|
dhaaruNiyoLu guru mahipatisutaprabhO |
bhava taaraka shivanendu more hOgabEkante ||4 ||

Listen to song by B. K. Sumitra & B. E. Nagendra Prasad



Listen to song by Padmini Srinidhi





ಅಂಗಳದೊಳು ರಾಮನಾಡಿದಾ / angaLadOLu raamanaaDidaa


ರಚನೆ : ಶ್ರೀ ಕನಕ ದಾಸರು 
ಅಂಗಳದೊಳು ರಾಮನಾಡಿದಾ |
ಚಂದ್ರ ಬೇಕೆಂದು ತಾ ಹಟ ಮಾಡಿದಾ || ಪ ||

ತಾಯಿಯ ಕರೆದು ಕೈ ಮಾಡಿ ತೋರಿದಾ |
ಮುಗಿಲ ಕಡೆಗೊಮ್ಮೆ ದಿಟ್ಟಿಸಿ ನೋಡಿದಾ |
ಚಿನ್ನಿ ಕೋಲು ಚೆಂಡು ಬುಗುರಿ ಎಲ್ಲವಾ |
ಬೇಡಾ ಬೇಡಾ ಎಂದು ಬೀಸಾಡಿದಾ || 1 ||

ಕಂದ ಬಾ ಎಂದು ತಾಯಿ ಕರೆದಳು |
ಮಮ್ಮು ಉಣ್ಣೆಂದು ಬಣ್ಣಿಸುತ್ತಿದ್ದಳು |
ತಾಯಿ ಕೌಸಲ್ಯಾ ಕಳವಳಗೊಂಡಳು |
ಕಂದ ಅಂಜಿದನು ಎನ್ನುತ್ತಿದ್ದಳು || 2 ||

ಅಳುವ ಧ್ವನಿ ಕೇಳಿ ರಾಜನು |
ಮಂತ್ರಿ ಸಹಿತಾಗಿ ಧಾವಿಸಿ ಬಂದನು |
ನಿಲುವ ಕನ್ನಡಿ ತಂದಿರಿಸಿದಾ |
ಶ್ರೀರಾಮನ ಎತ್ತಿ ಮುದ್ದಾಡಿದಾ || 3 ||

ಕನ್ನಡಿಯೊಳು ಬಿಂಬ ನೋಡಿದಾ |
ಚಂದ್ರ ಸಿಕ್ಕಿದನೆಂದು ಕುಣಿದಾಡಿದಾ |
ಈ ಸಂಭ್ರಮ ನೋಡಿ ಆದಿ ಕೇಶವ |
ರಘುವಂಶವನ್ನೇ ಕೊಂಡಾಡಿದಾ || 4 ||

Author : Shri Kanaka Dasaru

angaLadOLu raamanaaDidaa |
chandra bEkendu taa haTa maaDidaa || pa ||

taayiya karedu kai maaDi tOridaa |
mugila kaDegomme diTTisi nODidaa |
chinni kOlu chenDu buguri ellavaa |
bEDaa bEDaa endu beesaaDidaa || 1 ||

kanda baa endu taayi karedaLu |
mammu uNNendu baNNisuttiddaLu |
taayi kousalyaa kaLavaLagonDaLu |
kanda anjidanu ennuttiddaLu || 2 ||

aLuva dhwani kELi raajanu |
mantri sahitaagi dhaavisi bandanu |
niluva kannaDi tandirisidaa |
shreeraamana etti muddaaDidaa || 3 ||

kannaDiyoLu bimba nODidaa |
chandra sikkidanendu kuNidaaDidaa |
ee sambhrama nODi aadi kEshava |
raghuvamshavannE konDaaDidaa || 4 ||

Listen to song by Puttur Narasimha Nayak


ಅನುಭವದಡುಗೆಯ ಮಾಡಿ / AnubhavadaDugeya Maadi



ರಚನೆ : ಶ್ರೀಪುರುಂದರದಾಸರು.

ಅನುಭವದಡುಗೆಯ ಮಾಡಿ ಅದ
ಕ್ಕನುಭವಿಗಳು ಬಂದು ನೀವೆಲ್ಲ ಕೂಡಿ |

ತನುವೆಂಬ ಭಾಂಡವತೊಳೆದು ಕೆಟ್ಟ
ಮನದ ಚಂಚಲವೆಂಬ ಮುಸುರೆಯ ಕಳೆದು ||
ಘನವಾಗಿ ಮನೆಯನ್ನು ಬಳಿದು ಅಲ್ಲಿ |
ಮಿನುಗುವ ತ್ರಿಗುಣದ ಒಲೆಗುಂಡ ನೆಡೆದು || 1 ||

ವಿರಕ್ತಿಯೆಂಬುವ ಮಡಿಯುಟ್ಟು ಪೂರ್ಣ |
ಹರಿಭಕ್ತಿಯೆಂಬ ನೀರನ್ನೆಸರಿಟ್ಟು ||
ಅರಿವೆಂಬ ಬೆಂಕಿಯ ಕೊಟ್ಟು ಮಾಯಾ |
ಮರವೆಂಬ ಕಾಷ್ಟವ ಮುದದಿಂದ ಸುಟ್ಟು || 2 ||

ಕರುಣೆಂಬೊ ಸಾಮಗ್ರಿ ಹೂಡಿ ಮೋಕ್ಷ |
ಪರಿಕರವಾದಂಥ ಪಾಕವ ಮಾಡಿ ||
ಗುರುಶರಣರು ಸವಿದಾಡಿ ನಮ್ಮ|
ಪುರುಂದರವಿಠಲನ ಬಿಡದೆ ಕೊಂಡಾಡಿ || 3 ||


Author : Shree Purandara Dasaru

anubhavadaDugeya maaDi ada
kkanubhavigaLu neevella koodi

tanuvemba bhanvatoLedu ketta
manada chanchalavemba musureya kaLedu
ghanavaagi maneyannu baLidu alli
minuguva triguNada olegunda naDedu

viraktiyemba madiyuttu poorna
haribhaktiyemba neerannesarittu
arivemba benkiya kottu maaya
maravemba kaashtava mudadinda suttu

karuNembo saamagri hooDi moksha
parikaravaadantha paakava maadi
guru sharanaru savidaaDi namma
purandaravittalana biDade kondadi

Listen to song by C Ashwath



Listen to song by Bellur Sisters


Listen to song by Muralidhara Patthar


Listen to song by Shashidhar Kote


ನಮಃ ಪಾರ್ವತೀ ಪತಿನುತ ಜನಪರ / Namah Parvati Patinuta Janapara



ರಚನೆ : ಶ್ರೀ ವ್ಯಾಸ ರಾಜ ತೀರ್ಥರು 
ನಮಃ ಪಾರ್ವತೀ ಪತಿನುತ ಜನಪರ ನಮೋ ವಿರೂಪಾಕ್ಷ | ಪ |
ರಮಾ ರಮಣಲಿ ಅಮಲ ಭಕುತಿಕೊಡು ನಮೋ ವಿಶಾಲಾಕ್ಷ | ಅ.ಪ. |

ನೀಲಕಂಠ ತ್ರಿಶೂಲ ಡಮರು ಹಸ್ತಾಲಂಕೃತ ರಕ್ಷ |
ಫಾಲ ನೇತ್ರ ಕಪಾಲ ರುಂಡ ಮಣಿ ಮಾಲಾವೃತ ವಕ್ಷ |
ಶೀಲ ರಮ್ಯ ವಿಶಾಲ ಸುಗುಣ ಸಲ್ಲೀಲ ಸುರಾಧ್ಯಕ್ಷ |
ಶ್ರೀಲಕುಮೀಶನ ಓಲೈಸುವ ಭಕ್ತಾವಳಿಗಳ ಪಕ್ಷ | ೧ |

ವಾಸವನುತ ಹರಿದಾಸ ಈಶ ಕೈಲಾಸ ವಾಸ ದೇವ |
ದಾಸರಥಿಯ ಔಪಾಸಕ ಸುಜನರ ಪೋಷಿಪ ಪ್ರಭಾವ |
ಭಾಸಿಸುತಿಹುದು ಅಶೇಷ ಜೀವರಿಗೆ ಈಶನೆಂಬ ಭಾವ | ಶ್ರಿ
ಶನಲ್ಲಿ ಕೀಲಿಸುಮನವ ಗಿರಿಜೇಶ ಮಹಾದೇವ | ೨ |

ಮೃತ್ಯುಂಜಯ ನಿನ್ನುತ್ತಮ ಪದಯುಗ ಭೃತ್ಯನೋ ಸರ್ವತ್ರ |
ಹತ್ತಿರ ಕರೆದು ಅಪತ್ಯನಂತೆ ಪೊರೆಯುತ್ತಿರೋ ತ್ರಿನೇತ್ರ |
ತೆತ್ತಿಗನಂತೆ ಕಾಯುತ್ತಿಹೆ ಬಾಣನ ಸತ್ಯದಿ ಸುಚರಿತ್ರ |
ಕರ್ತೃ ಉಡುಪಿ ಸರ್ವೋತ್ತಮ ಕೃಷ್ಣನ ಪೌತ್ರ ಕೃಪಾ ಪಾತ್ರ | ೩ |


Author : Shree Vyasa Raja Tirtha

namah parvati patinuta janapara namo virupaksha | pa | 
rama ramanali amala bakutikodu namo visalaksha | a.pa. | 

nilakantha trisula damaru hastalankruta raksha | 
pala netra kapala runda mani malavruta vaksha | 
sila ramya visala suguna sallila suradhyaksha | 
srilakumisana olaisuva baktavaligala paksha | 1 | 

vasavanuta haridasa isa kailasa vasa deva | 
dasarathiya aupasaka sujanara poshipa prabava | 
basisutihudu asesha jivarige isanenba bava | 
srisanalli kilisumanava girijesa mahadeva | 2 | 

mrutyunjaya ninnuttama padayuga brutyano sarvatra | 
hattira karedu apatyanante poreyuttiro trinetra | 
tettiganante kayuttihe banana satyadi sucaritra | 
kartru udupi sarvottama krushnana pautra krupa patra | 3 |



Listen to song by Shri Puttur Narasimha Nayak


Listen to song by Shri Ananta Kulkarni


Listen to song by Jayasindoor Rashmi