Pages

Sunday, July 5, 2020

ಆವ ಸಿರಿಯಲಿ ನೀನು ಎನ್ನ ಮರೆತೆ / Ava Siriyali Neenu Enna Marete



ರಚನೆ :ಶ್ರೀ ಕನಕದಾಸರು

ಆವ ಸಿರಿಯಲಿ ನೀನು ಎನ್ನ ಮರೆತೆ ?
ದೇವ ಜಾನಕಿರಮಣ ಪೇಳು ರಘುಪತಿಯೆ ? ।।ಪ।।

ಸುರರ ಸೆರೆಯನು ಬಿಡಿಸಿ ಬಂದನೆಂಬಾ ಸಿರಿಯೆ
ಕರಿ ಮೊರೆಯ ಲಾಲಿಸಿದೆನೆಂಬ ಸಿರಿಯೆ ?
ಶರಧಿ ಸೇತುವೆಯ ಕಟ್ಟಿದೆನೆನ್ನುವಾ ಸಿರಿಯೆ
ಸ್ಥಿರವಾಗಿ ಹೇಳೆನಗೆ ಹೇಳು ರಘುಪತಿಯೆ ।।೧।।

ಕಡಲೊಳಗೆ ಮನೆ ಮಾಡಿ ಮಲಗಿದೆನೆಂಬಾ ಸಿರಿಯೆ
ಮೃಡ ನಿನ್ನ ಸಖನಾದನೆಂಬ ಸಿರಿಯೆ ?
ಬಿಡದೆ ದ್ರೌಪದಿ ಮಾನ ಕಾಯ್ದನೆಂಬ ಸಿರಿಯೆ
ದೃಢವಾಗಿ ಹೇಳೆನಗೆ ದೇವಕೀಸುತನೆ ।।೨।।

ಭೂಮಿಯನು ಮೂರಡಿಯ ಮಾಡಿದೆನೆಂಬ ಸಿರಿಯೆ
ಕಾಮ ನಿನ್ನ ಸುತನಾದನೆಂಬ ಸಿರಿಯೆ
ಆ ಮಹಾಲಕುಮಿ ನಿನ್ನ ಸತಿಯಾದಳೆಂಬ ಸಿರಿಯೆ
ಪ್ರೇಮದಲಿ ಹೇಳೆನಗೆ ಸ್ವಾಮಿ ಅಚ್ಯುತನೆ ।।೩।।

ಮನುಜರೆಲ್ಲರು ನಿನ್ನ ಸ್ತುತಿಸುವರೆಂಬ ಸಿರಿಯೆ
ಹನುಮ ನಿನ್ನ ಬಂಟನಾದೆನೆಂಬ ಸಿರಿಯೆ
ಬಿನುಗುದೈವಗಳು ನಿನಗೆಣೆಯಿಲ್ಲವೆಂಬ ಸಿರಿಯೆ
ಅನುಮಾನ ಮಾಡದೆ ಪೇಳೋ ನರಹರಿಯೆ ।।೪।।

ಇಂತು ಸಿರಿಯಲಿ ನೀನು ಎನ್ನ ಮರೆತರೆ ಸ್ವಾಮಿ
ಪಂಥವೇ ನಿನಗಿದು ಆವಾ ನಡತೆ
ಕಂತುಪಿತ ಕಾಗಿನೆಲೆಯಾದಿಕೇಶವ ರಂಗ
ಚಿಂತೆಯನು ಬಿಡಿಸಿ ಸಂತೋಷಪಡಿಸೊ ।।೫।।

Author : Shri Kanakadasaru

Ava siriyali neenu enna marete 
dEva jAnakIraMaNa pELu raghupatiye ।।pa।।

surara sareyanu biDisi bandanembA siriyE 
kari moreya lAlisidenemba siriyE
sharadhi sEtiveya gaTTidenennuva siriyE 
sthiravAgi hELanage hELu raghupatiyE ।।1।।

kaDaloLage mane mADi malagidenembA siriyE 
mrDha ninna sakhanAdanemba siriyE
biDaede draupadi mAna kAidanemba siriyE 
drDhavAgi hELanage dEvakI sutanE ।।2।।

bhUmiyenu mUraDiya mADidanemba siriyE 
kAma ninna sutanAdanemba siriyE
A mahA lakumi ninna stiyAdaLembe siriyE 
prEmadali hELanage svAmi achyutanE ।।3।।

manujarellaru ninna stutisuavaremba siriyE 
hanuma ninna baNTanAdanembe siriyE
binugu deivagaLu ninageNevillavemba siriye 
anumAna mADade pELO narahariyE ।।4।।
intu siriyali nIna maretare svAmi 
panthavE ninagidu Ava naDate
kantupita kAganeleyAdi kEshava ranga 
chinteyanu biDisi santOSavanu paDiso ।।5।।

Listen to song by Late Shri Mysore Anantaswamy


Listen to song by Sthuthi Bhat MS


Listen to song by Shri Snehaja Praveen


No comments:

Post a Comment