Pages

Friday, July 3, 2020

ಆರು ಬದುಕಿದರಯ್ಯ ಹರಿ ನಿನ್ನ ನಂಬಿ / Aru badukidarayya hari ninna nambi



ರಚನೆ : ಶ್ರೀ ಪುರಂದರ ದಾಸರು 

ಆರು ಬದುಕಿದರಯ್ಯ ಹರಿ ನಿನ್ನ ನಂಬಿ
ತೋರು ಈ ಜಗದೊಳಗೆ ಒಬ್ಬರನು ಕಾಣೆ||pa||

ಕರಪತ್ರದಿಂದ ತಾಮ್ರಧ್ವಜನ ತಂದೆಯ
ಕೊರಳ ಕೊಯಿಸಿದೆ ನೀನು ಕುಂದಿಲ್ಲದೆ
ಮರುಳನಂದದಿ ಪೋಗಿ ಭೃಗುಮುನಿಯ ಕಣ್ಣೊಡೆದೆ
ಅರಿತು ತ್ರಿಪುರಾಸುರನ ಹೆಂಡಿರನು ಬೆರೆದೆ||೧||

ಕಲಹ ಬಾರದ ಮುನ್ನ ಕರ್ಣನನು ನೀ ಕೊಂದೆ
ಸುಲಭದಲಿ ಕೌರವರ ಮನೆಯ ಮುರಿದೆ
ನೆಲವ ಬೇಡುತ ಹೋಗಿ ಬಲಿಯ ತನುವನು ತುಳಿದೆ
ಮೊಲೆಯನುಣಿಸಲು ಬಂದ ಪೂತನಿಯ ಕೊಂದೆ||೨||

ತಿರಿದುಂಬ ದಾಸರ ಕೈಲಿ ಕಪ್ಪವ ಕೊಂಬೆ
ಗರುಡವಾಹನ ನಿನ್ನ ಚರಿಯವರಿಯೆ
ದೊರೆ ಪುರಂದರವಿಠಲ ನಿನ್ನನ್ನು ನಂಬಿದರೆ
ತಿರುಪೆಯೂ ಹುಟ್ಟಲೊಲ್ಲದು ಕೇಳೊ ಹರಿಯೆ||೩||

Author : Shri Purandaradasaru

Aru badukidarayya hari ninna nambi
Toru I jagadolage obbaranu kane||pa||

Karapatradinda tamradhvajana tandeya
Korala koyiside ninu kumdillade
Marulanamdadi pogi brugumuniya kannodede
Aritu tripurasurana hendiranu berede||1||

Kalaha barada munna karnananu ni konde
Sulabadali kauravara maneya muride
Nelava beduta hogi baliya tanuvanu tulide
Moleyanunisalu banda putaniya konde||2||

Tiridumba dasara kaili kappava kombe
Garudavahana ninna cariyavariye
Dore purandaravithala ninnannu nambidare
Tirupeyu huttalolladu kelo hariye||3||

Listen to song by Shridhar Hegde


Listen to song by Shri M Balamuralikrishna

No comments:

Post a Comment