Pages

Sunday, May 30, 2021

ಕೇಳಲೊಲ್ಲನೆ ಎನ್ನ ಮಾತನು ರಂಗ / Kelalollane enna matanu ranga

ಕೇಳಲೊಲ್ಲನೆ ಎನ್ನ ಮಾತನು ರಂಗ




ರಚನೆ : ಶ್ರೀ ಪುರಂದರ ದಾಸರು

ಕೇಳಲೊಲ್ಲನೆ ಎನ್ನ ಮಾತನು ರಂಗ ॥ಪ॥
ಕಾಳಿಯಮರ್ದನ ಕೃಷ್ಣಗೆ
ಪೇಳೆ ಗೋಪ್ಯಮ್ಮ ಬುದ್ಧಿ ॥ಅ.ಪ॥

ಬಿಟ್ಟ ಕಂಗಳ ಮುಚ್ಚಲೊಲ್ಲನೆ ಬೇಗ
ಬೆಟ್ಟಕ್ಕೆ ಬೆನ್ನೊಡ್ಡಿ ನಿಂತನೆ
ಸಿಟ್ಟಿಸಿ ಕೋರೆ ಹಲ್ಲ ತೋರ್ದನೆ ಅತಿ
ಗಟ್ಟಿ ಉಕ್ಕಿನ ಕಂಭವನೊಡೆದು ಬಂದನೆ ॥೧॥

ಮೂರಡಿ ಭೂಮಿಯ ಬೇಡಿದನೆ ಅರಸರ
ಬೇರ ಕಡಿಯೆ ಕೊಡಲಿ ತಂದನೆ
ನಾರ ಸೀರೆಯನಿಟ್ಟುಕೊಂಡನೆ ಬೇಗ
ಚೋರತನದಿ ಹರವಿ ಹಾಲ ಕುಡಿದನಮ್ಮ ॥೨॥

ಬತ್ತಲೆ ನಾರಿಯರನಪ್ಪಿದ ಬೇಗ
ಉತ್ತಮ ಅಶ್ವವ ಹತ್ತಿದ
ಹತ್ತವತಾರವ ತಾಳಿದ ನಮ್ಮ
ದಿಟ್ಟ ಮೂರುತಿ ಪುರಂದರ ವಿಠಲ ॥೩॥

Kelalollane enna matanu ranga

Author : Shri Purandara Dasaru

Kelalollane enna matanu ranga ||pa||
Kaliyamardana krushnage
Pele gopyamma buddhi ||a.pa||

Bitta kangala muccalollane bega
Bettakke bennoddi nintane
Sittisi kore halla tordane ati
Gatti ukkina kambavanodedu bandane ||1||

Muradi bumiya bedidane arasara
Bera kadiye kodali tandane
Nara sireyanittukondane bega
Choratanadi haravi hala kudidanamma ||2||

Battale nariyaranappida bega
Uttama asvava hattida
Hattavatarava talida namma
Ditta muruti purandara vithala ||3||

Listen to song here



No comments:

Post a Comment