ಹಣ್ಣು ಬಂದಿದೆ ಕೊಳ್ಳಿರಿ ನೀವೀಗ
ರಚನೆ : ಶ್ರೀ ಪುರಂದರ ದಾಸರು
ಹಣ್ಣು ಬಂದಿದೆ ಕೊಳ್ಳಿರಿ ನೀವೀಗಚೆನ್ನಬಾಲಕೃಷ್ಣನೆಂಬೊ ಚೆನ್ನಾದ ಬಾಳೆಯಹಣ್ಣು ||ಪ||
ಹವ್ಯಕವ್ಯದ ಹಣ್ಣು ಸವಿವ ಸಕ್ಕರೆಹಣ್ಣು
ಭವರೋಗಗಳನೆಲ್ಲ ಕಳೆವ ಹಣ್ಣು
ನವನೀತ ಚೋರನೆಂಬ ಯಮನ ಅಂಜಿಪ ಹಣ್ಣು
ಅವನಿಯೊಳು ಶ್ರೀರಾಮನೆಂಬೊ ಹಣ್ಣು ||೧||
ಕೊಳೆತು ಹೋಗುವುದಲ್ಲ ಹುಳಿತು ಹೋಗುವುದಲ್ಲ
ಕಳೆದು ಬಿಸಾಡಿಸಿ ಕೊಳ್ಳುವುದಲ್ಲ
ಅಳೆದು ಕೊಂಬುವುದಲ್ಲ ಗಿಳಿ ಕಚ್ಚಿ ತಿಂಬೊದಲ್ಲ
ಒಳಿತಾದ ಹರಿಯೆಂಬೊ ಮಾವಿನಹಣ್ಣು ||೨||
ಕೆಟ್ಟು ನಾರುವುದಲ್ಲ ಬಿತ್ತಿ ಬೆಳೆಯೋದಲ್ಲ
ಕಷ್ಟದಿ ಹಣಕೊಟ್ಟು ಕೊಂಬುವುದಲ್ಲ
ಸೃಷ್ಟಿಯೊಳಗೆ ನಮ್ಮ ಪುರಂದರವಿಠಲ
ಕೃಷ್ಣರಾಯನೆಂಬೊ ಶ್ರೇಷ್ಠವಾದ ಹಣ್ಣು ||೩||
Hannu bandide kolliri neeveega
Author : Shri Purandara Dasaru
Hannu bandide kolliri neeveegaChenna balakrishnanembo chennada baleyahannu ||pa||
Havyakavyada hannu saviva sakkarehannu
BhavarOgagaLanella kaLeva hannu
Navanita choranemba yamana anjipa hannu
Avaniyolu sriramanembo hannu ||1||
KoLetu hoguvudalla huLitu hoguvudalla
Kaledu bisadisi kolluvudalla
Aledu kombuvudalla gili kachchi timbodalla
Olitada hariyembo mavinahannu ||2||
Kettu naaruvudalla bitti beLeyodalla
Kashtadi haNakottu kombuvudalla
Srushtiyolage namma purandaravithala
Krishnarayanembo sreshthavada hannu ||3||
No comments:
Post a Comment