ಭಳಿರೆ ಭಳಿರೆ ನಾರಸಿಂಹ
ರಚನೆ: ಶ್ರೀ ವಿಜಯ ದಾಸರು
ಭಳಿರೆ ಭಳಿರೆ ನಾರಸಿಂಹ ಮಹಾಸಿಂಹ,
ಮಲಮಲಮಲತವರ ವೈರಿ ಉರಿಮಾರೀ ।।ಪ।।
ಮಗನ ಗಾನಗಗಳಲ್ಲಾಡಿದ್ ಚತುರ್ದಶ
ಜಗಜಗಜಗವೆಲ್ಲ ಕಂಪಿಸಿ ಕಂಬಾಹೇ
ಹಗೆಹಗೆಹಗೆಬಲವ ದೆಶೆಗೆಡಿಸಿ ರೋಷಗಿಡಿ
ಉಗು ಉಗು ಉಗುಳುತ್ತ ಬಂದ ನಾರಸಿಂಹ ।।೧।।
ಬಿಗಿಬಿಗಿಬಿಗಿದು ಹುಗ್ಗು ಗಂಟನೆ ಹಾಕಿ
ಹೊಗೆಹೊಗೆಹೊಗೆಸುತ್ತಿ ಸರ್ವರಂಜೆ
ನೆಗನೆಗನೆಗನೆಗೆದು ಕುಪ್ಪಣಿಸಿ ಅಸುರನ್ನ
ಮಗುಮಗುಮಗು ಬೇಡಿಕೊಂಡ ನಾರಸಿಂಹ ।।೨।।
ಉಗುಉಗುಉಗರಿಂದ ಕ್ರೂರನ್ನ ಹೇರೊಡಲ
ಬಗಬಗಬಗಬಗದು ರಕುತ ವನ್ನು
ಉಗಿಉಗಿಉಗಿಉಗಿದು ಚೆಲ್ಲಿ ಕೊರಳಿಗೆ ಕರುಳ
ತೆಗೆತೆಗೆತೆಗೆತೆಗೆದು ಇಟ್ಟ ನಾರಸಿಂಹ ।।೩।।
ಯುಗಯುಗಯುಗದೊಳಗೆ ಪ್ರಣತಾರ್ತಿಹರ ನೆಂದು
ರುಗರುಗರುಗರುಗಿಪ ಮಕುಟ ತೂಹೇ
ನಗುನಗುನಗುನಗುತ ಸುರರು ಗಗನದಿ ನೆರೆದು
ಮಿಗಿಮಿಗಿಮಿಗಿಲೆನೆ ನಾರಸಿಂಹ ।।೪।।
ಒಂದೊಂದೊಂದೊಂದು ಮುನಿಗಳಿಗೆ ಒಲಿದು
ಅಂದಂದಂದಂದಿಗಾಯಕ ಒಲಿದು
ಅಂದಂದವಕಾವ ಚೋಳಂಗಿರಿ
ಮಂದಿರನೆ ವಿಜಯ ವಿಠ್ಠಲ ನಾರಸಿಂಹ ।।೫।।
bhaLire bhaLire naarasimha
Author : Shri Vijaya Dasaru
bhaLire bhaLire naarasimha mahaasimha
malamalamalatavara vyri urimaari ।।pa।।
magana gaanagagaLalladid chaturdasha
jagajagajagavella kampisi kambaahE
hagehagehagebalava deshegedisi rOshagiDi
ugu ugu uguLutta banda naarasimha ।।1।।
bigi bigi bigibigidu haggu gantane haaki
hoge hoge hogesutti sarvaranje
neganega nega negadu kuppaNisi asuranna
magu magu magu magu bEdikonda naarasimha ।।2।।
ugu ugu ugurinda krooranna hErodala
baga baga baga bagadu rakuta vannu
ugi ugi ugiugidu chelli koraLige karuLa
tege tege tegetegedu itta naarasimha ।।3।।
yuga yuga yugadoLage pranataartiharanendu
jhagajhaga jhagajhagipa mukuta toohe
nagu nagu nagunaguta suraru gaganadi neredu
migimigi migilene naarasimha ।।4।।
ondondondondu munigaLige olidu
andandandandigaayaka olidu
andandavakaava chOlangiri
mandirane vijaya vittala naarasimha ।।5।।
Listen to song by Shri Mysore Ramachandrachar
Listen to song by Shri Vidyabhushana
No comments:
Post a Comment