Pages

Saturday, April 24, 2021

ರಂಗನಾಯಕ ರಾಜೀವ ಲೋಚನ / Ranganayaka Rajeeva Lochana

ರಂಗನಾಯಕ ರಾಜೀವ ಲೋಚನ




ರಚನೆ : ಶ್ರೀ ಪುರಂದರ ದಾಸರು

ರಂಗನಾಯಕ ರಾಜೀವ ಲೋಚನ
ರಮಣನೇ ಬೆಳಗಾಯಿತು ಏಳೆನ್ನುತಾ ।।ಪ।।

ಅಂಗನೇ ಲಕುಮಿ ತಾ ಪತಿಯನೆಬ್ಬಿಸಿದಳು
ಶೃಂಗಾರದ ನಿದ್ರೆ ಸಾಕೆನ್ನುತಾ ।।ಅ ಪ।।

ಪಕ್ಷರಾಜನು ಬಂದು ಬಾಗಿಲಲ್ಲಿ ನಿಂದು
ಅಕ್ಷಿ ತೆರೆದು ಬೇಗ ಈಕ್ಷೀಸೆಂದು
ಪಕ್ಷಿ ಜಾತಿಗಳೆಲ್ಲಾ ಚಿಲಿಪಿಲಿಗುಟ್ಟುತಾ
ಸೂಕ್ಷ್ಮದಲ್ಲಿ ನಿನ್ನ ಸ್ಮರಿಸುವವೋ ಕೃಷ್ಣ ।।೧।।


ಸನಕ ಸನಂದನ ಸನತ್ಸುಜಾತರು ಬಂದು
ವಿನಯದಿಂ ಕರ ಮುಗಿದು ಓಲೈಪರು
ಘನಶುಕ ಶೌನಕ ವ್ಯಾಸ ವಾಲ್ಮೀಕರು
ನೆನೆದು ನೆನೆದು ಕೊಂಡಾಡುವರು ಹರಿಯೇ ।।೨।।

ಸುರರು ಕಿನ್ನರರು ಕಿಂಪುರುಷರು ಉರಗುರು
ಪರಿಪರಿಯಲಿ ನಿನ್ನ ಸ್ಮರಿಸುವರು
ಅರುಣನು ಬಂದು ಉದಯಾಚಲದಲಿ ನಿಂದು
ಕಿರಣ ತೋರುವನು ಭಾಸ್ಕರನು ಶ್ರೀಹರಿಯೇ ।।೩।।

ಪದುಮನಾಭನೇ ನಿನ್ನ ನಾಮಾಮೃತವನ್ನು
ಪದುಮಾಕ್ಷಿಯರು ತಮ್ಮ ಗೃಹದೊಳಗೆ
ಉದಯದೊಳೆದ್ದು ಸವಿದಾಡುತ್ತಾ ಪಾಡುತ್ತಾ
ದಧಿಯ ಕಡೆವರೇಳೋ ಮಧುಸೂಧನ ಕೃಷ್ಣಾ।।೪।।

ಮುರಮಥನನೇ ನಿನ್ನ ಚರಣದ ಸೇವೆಯ
ಕರುಣಿಸಬೇಕೆಂದು ತರುಣಿಯರು
ಪರಿಪರಿಯಿಂದಲೇ ಸ್ಮರಿಸಿ ಹಾರೈಪರು
ಪುರಂದರ ವಿಠಲ ನೀನೇಳೋ ಶ್ರೀ ಹರಿಯೇ।।೫।।

Ranganayaka Rajeeva Lochana

Author : Shri Purandara Dasaru

Ranganayaka Rajeeva lOchana
ramaNanE bElagAyitu Elennutaa||pa||
anganE lakumi taa patiyanebbisidaLu
shrungarada nidre sakennutaa||a pa||


pakshirajanu bandu bAgilalli nindu
akshi tEredu bEga Eekshisendu
pakshi jAtigaLella chilipiliguttutaa 
sookshmadali ninna smarisuvavO krushna||1||


sanaka sanandana sanatsujAtaru bandu
vinayadim kara mugidu Olaiparu
ghanashuka shounaka Vyaasa Valmikaru
nenedu nenedu konDaduvaru hariyE||2||


suraru kinnararu kimpurusharu uraguru
paripariyali ninna smarisuvaru
aruNanu bandu udayAchaladali nindu
kiraNa toruvanu bhaskaranu srihariyE||3||


padumanabhanE ninna naamamrutavannu
padumaakshyari tamma gruhadoLagE
udayadOleddu savidaaDutta paaDutta
dadhiya kaDevarELo madhusoodhana Krishna||4||


muramathananE ninna charanada sEvEya
karunisabEkendu taruNiyaru
paripariyindale smarisi haraiparu
PurandaraVithala neenELO SriHariyE||5||

No comments:

Post a Comment