Pages

Sunday, April 4, 2021

ಕಂದಾ ಬೇಡವೊ ಮಣ್ಣು ತಿನ್ನ ಬೇಡವೊ /Kanda bedavo mannu tinna bedavo

ಕಂದಾ ಬೇಡವೊ ಮಣ್ಣು ತಿನ್ನ ಬೇಡವೊ





ರಚನೆ : ಶ್ರೀ ಪುರಂದರ ದಾಸರು 

ಕಂದಾ ಬೇಡವೊ ಮಣ್ಣು ತಿನ್ನ ಬೇಡವೊ ||ಪ||
ಕಂದಾ ಬೇಡವೊ ಮಣ್ಣು ತಿನ್ನಲಿ ಬೇಡವೊ

ಸುಂದರಾಂಗನೆ ನಿನಗೆ ಹೊಟ್ಟೆ ನೋಯುವುದಯ್ಯ ||ಅ||

ಬೇಗನೆ ಏಳಯ್ಯ , ಮಣ್ಣಾಟ ಬಿಡೊ ನೀನು
ಜೋಗಿ ಬರುತಾನಲ್ಲಿ ಅಂಜಿಸುವುದಕೀಗ ||
ತಾಯಿ ಮಾತನು ಒತ್ತಿ ಕರದಲಿ ಮಣ್ಣೊತ್ತಿ
ಬಾಯಲಿ ಇಟ್ಟನು ಬಾಲಕೃಷ್ಣಯ್ಯನು ||೧||

ಪೆಟ್ಟು ಕೊಡುವೆ ನಿನಗೆ , ಸಿಟ್ಟು ಬಹಳ ಇದೆ
ಮುಟ್ಟಬೇಡೊ ಮಣ್ಣು , ಬೆಣ್ಣೆ ತರುವೆನಯ್ಯ ||
ಅಮ್ಮಯ್ಯ ಕೇಳೆಲೆ , ಬಾಯಲಿ ಮಣ್ಣಿಲ್ಲ
ಗುಮ್ಮನ ಕರೆಬೇಡ , ಸುಮ್ಮನೆ ಇರುತೇನೆ ||೨||

ಮಗುವೆ ಬಾ ಬಾ ಎಂದು ಬಣ್ಣಿಸಿ ಕರೆದಳು
ಮಗುವಿನ ಬಾಯ ಶೋಧಿಸಿದಳು ಬೇಗನೆ ||
ಬಾಯಲಿ ಕಂಡಳು ಹದಿನಾಲ್ಕು ಲೋಕವ
ಕಾಯ ಮರೆತಳಯ್ಯ ಮರುಳಿಗೆ ವಶವಾಗಿ ||೩||

ಮತ್ತು ಕಂಡಳು ಅವಳು ಗೋಕುಲವೆಲ್ಲವ
ಅತ್ತ ಕಂಡಳು ತನ್ನ ಕೃಷ್ಣನ ಬಗಲಲಿ ||
ಗೋಪ್ಯೇರ ಮನೆಗಳಲಿ ಗೋಪಾಲಕೃಷ್ಣನು
ಗೋಪ್ಯೇರ ಮನೆಗಳಂತೆ ದುಡುಕು ಮಾಡುತಲಿರ್ದ ||೪||

ಬಾಲನು ಬೀದಿಯ ಮಣ್ಣೆತ್ತಿ ಉಣುತಿರ್ದ
ಬಾಲೆ ಗೋಪ್ಯಮ್ಮನು ಮಣ್ಣ ತೆಗೆತಿರ್ದಳು ||
ಕಂದನು ನೀನಲ್ಲ ಕಂದರ್ಪ ಜನಕನೆ
ಕಂದನೆ ನಿನ್ನ ಬಾಯ ಮುಚ್ಚಿಕೊಳ್ಳಯ್ಯ ಈಗ ||೫||

ದೇವದಿದೇವನೆ ದೇವಕಿತನಯನೆ
ಭಾವಜನಯ್ಯನೆ ಬಾರಯ್ಯ ದೊರೆಯೆ ||
ಜಯಗಳಾಗಲಿ ನಮ್ಮ ಕೃಷ್ಣರಾಯಗೆ ಬಹಳ
ಜಯಗಳಾಗಲಿ ಅವನ ಭಕ್ತರ ವೃಂದಕೆ ||೬||

ಲೀಲಾವಿನೋದನು ರುಕ್ಮಿಣೀಲೋಲನು
ಲೀಲೆ ತೋರಿದನಂದು ತಂದೆ ಪುರಂದರವಿಠಲ ||೭||

Kanda bedavo mannu tinna bedavo

Composer: Sri Purandara Dasaru

Kanda bedavo mannu tinna bedavo ||pa||
Kanda bedavo mannu tinnali bedavo

Sundaraangane ninage hotte noyuvudayya ||a||

Begane elayya , maNNata bido neenu
JOgi barutaanalli anjisuvudakiga ||
Taayi matanu otti karadali maNNotti
Baayali iTTanu baalakrishnayyanu ||

Pettu koduve ninage , sittu bahala ide
MuttabedO mannu , benne taruvenayya ||
Ammayya kelele , baayali mannilla
Gummana karebeda , summane irutene ||

Maguve ba ba endu bannisi karedalu
Maguvina baya shodhisidaLu begane ||
Baayali kandalu hadinalku lokava
Kaaya maretaLayya maruLige vasHavaagi ||

Mattu kandalu avalu gokulavellava
Atta kandalu tanna krishnana bagalali ||
GopyEra manegalali gopalakrishnanu
GopyEra manegalante duDuku maadutalirda ||

Baalanu beediya maNNetti uNutirda
Baale gopyammanu maNNa tegetirdaLu ||
Kandanu neenalla kandarpa janakane
Kandane ninna baaya muchchikollayya Iga ||

Devaadidevane devakitanayane
Bhavajanayyane barayya doreye ||
Jayagalaagali namma krishnarayage bahaLa
Jayagalagali avana Bkaktara vrundake ||

Leelaavinodanu rukmiNilOlanu
Leele toridanandu tande purandaravithala ||


No comments:

Post a Comment