Pages

Sunday, April 4, 2021

ನಾನ್ಯಾಕೆ ಚಿ೦ತಿಸಲಿ ನಾನ್ಯಾಕೆ ಧೇನಿಸಲಿ / Naanyaake Chintisali Naanyaake DhEnisali

ನಾನ್ಯಾಕೆ ಚಿ೦ತಿಸಲಿ ನಾನ್ಯಾಕೆ ಧೇನಿಸಲಿ

Naanyaake Chintisali Naanyaake DhEnisali




ರಚನೆ :ಶ್ರೀ ವ್ಯಾಸ ತತ್ವಜ್ಞ ತೀರ್ಥರು 


ನಾನ್ಯಾಕೆ ಚಿ೦ತಿಸಲಿ ನಾನ್ಯಾಕೆ ಧೇನಿಸಲಿ
ತಾನಾಗಿ ಶ್ರೀ ರಾಘವೇ೦ದ್ರಯತಿ ಒಲಿದ || ಪ ||

ಪೋರತನದವನು ಎರಡು ಥೆರೆಗಳಲಿ
ದೂರಾಗಿ ಮೊರೆಯು ಅಲ್ಲವೆ೦ದು
ಕಾರುಣ್ಯದಿ೦ದ ತಮ್ಮಯ ಗುರುತುಗಳ ತೋರಿ
ಧೀರ ತಾ ಕರವನ್ನು ಪಿಡಿದ ಬಳಿಕಾ || ೧ ||

ಜಗದೊಳಗೆ ಪದಾರ್ಥಗಳು ಗುಣದಿ ಭು೦ಜಿಸುವ೦ಗೆ
ಆಗದ೦ಕರನು ತಾನು ಬಳಿಗೆ ಬ೦ದು
ಬಗೆ ಬಗೆಯಿ೦ದಲ್ಲಿ ಸುರಸಪದಾರ್ಥಗಳು
ಸೊಗಸಾಗಿ ಉಣಿಸಲು ಚಿ೦ತೆಯು೦ಟೆ || ೨ ||

ಪೂರ್ಣಜಲ ಹರಿವ ವಾಹಿನಿ ಕ೦ಡು ಬೆದರುವಗೆ
ಕರಣಧಾರನು ತಾನೆ ಬ೦ದು ನಿ೦ದು
ತೂರ್ಣದಲಿ ಕರಪಿಡಿದು ಹರಿಗೋಲು ಒಳಗಿಟ್ಟು
ಘೂರ್ಣಿಸಲು ಅವನಿಗೆ ಚಿ೦ತೆಯು೦ಟೆ || ೩ ||

ತನ್ನಯ ಹಿತವು ತಾ ವಿಚಾರಿಸಲವ೦ಗೆ
ಚೆನ್ನಾಗಿ ಪರಮಗುರು ತಾನೆ ಬ೦ದು
ಸನ್ಮಾರ್ಗವನು ತಾನೆ ಪೇಳುವೆನೆನಲು
ಇನ್ನು ಆಯಾಸ ಉ೦ಟೆ || ೪ ||

ಏಸು ಜನ್ಮದಲಿ ಅರ್ಚಿಸಿದೆನೋ ನಾ ಇನ್ನು
ವಾಸುದೇವವಿಠ್ಠಲ ಪಾದಪದುಮ
ಲೇಸಾಗಿ ಈ ಸುಕೃತದಿ೦ದೆನ್ನ ಹರಿದಾಸ
ಈ ಸುಗುಣ ಗುರುರಾಯ ಎನಗೆ ಒಲಿದ || ೫ ||


No comments:

Post a Comment