Pages

Sunday, April 18, 2021

ಊಟಕ್ಕೆ ಬಂದೆವು ನಾವು ನಿಮ್ಮ / Utakke bandevu navu nimma

ಊಟಕ್ಕೆ ಬಂದೆವು ನಾವು ನಿಮ್ಮ

ರಚನೆ : ಶ್ರೀ ಪುರಂದರ ದಾಸರು

ಊಟಕ್ಕೆ ಬಂದೆವು ನಾವು ನಿಮ್ಮ
ಆಟ ಪಾಠವ ಬಿಟ್ಟು ಅಡುಗೆ ಮಾಡಮ್ಮ ||ಪ||

ಕತ್ತಲಿಟ್ಟಾವಮ್ಮ ಕಣ್ಣು ಬಾಯಿ
ಬತ್ತಿ ಬರುತಲಿದೆ ಕೈಕಾಲು ಝುಮ್ಮ
ಹೊತ್ತ ಹೋಗಿಸಬೇಡವಮ್ಮ
ಒಂದು ತುತ್ತಾದರು ಇತ್ತು ಸಲಹು ನಮ್ಮಮ್ಮ ।।೧।।

ಒಡಲೊಳಗೆ ಉಸಿರಿಲ್ಲ ಒಂದು
ಕ್ಷಣವಾದರೆ ಜೀವ ನಿಲ್ಲುವುದಿಲ್ಲ
ಮಡಿದರೆ ದೋಷ ತಟ್ಟುವುದು ಒಂದು
ಹಿಡಿ ಅಕ್ಕಿಯಿಂದಲೆ ಕೀರ್ತಿ ಬಾಹೋದು ।।೨।।

ಹೊನ್ನರಾಶಿಯ ತಂದು ಸುರಿಯೆ ಕೋಟಿ
ಕನ್ನಿಕೆಯರ ತಂದು ಧಾರೆಯನೆರೆಯೆ
ಅನ್ನದಾನಕ್ಕಿನ್ನು ಸರಿಯೆ ಪ್ರ
ಸನ್ನ ಪುರಂದರ ವಿಠಲ ದೊರೆಯೆ ।।೩।।

Utakke bandevu navu nimma

Author : Shri Purandara Dasaru


Utakke bandevu navu nimma 
ata patava bittu aduge madamma ||pa||

Kattalittavamma kannu bayi
Batti barutalide kaikalu Jumma
Hotta hogisabedavamma
Ondu tuttadaru ittu salahu nammamma ||1||

Odalolage usirilla ondu
Kshanavadare jiva nilluvudilla
Madidare dosha tattuvudu ondu
Hidi akkiyindale kirti bahodu ||2||

Honnarasiya tandu suriye koti
Kannikeyara tandu dhareyanereye
Annadanakkinnu sariye pra
Sanna purandaravithala doreye ||3||

No comments:

Post a Comment