Pages

Friday, August 21, 2020

ಶರಣು ಸಿದ್ಧಿವಿನಾಯಕಾ ಶರಣು ವಿದ್ಯ ಪ್ರದಾಯಕ / sharanu siddhi vinayaka sharanu vidyA pradAyaka

Ganapati

ಶರಣು ಸಿದ್ಧಿವಿನಾಯಕಾ ಶರಣು ವಿದ್ಯ ಪ್ರದಾಯಕ

ರಚನೆ : ಶ್ರೀ ಪುರಂದರ ದಾಸರು 

ಶರಣು ಸಿದ್ಧಿವಿನಾಯಕಾ | ಶರಣು ವಿದ್ಯ ಪ್ರದಾಯಕ |
ಶರಣು ಪಾರ್ವತಿ ತನಯ ಮೂರುತಿ ಶರಣು ಮೂಷಕ ವಾಹನ || ಪ ||

ನಿಟಿಲ ನೇತ್ರನೆ ದೇವಿ ಸುತನೆ ನಾಗ ಭೂಷಣ ಪ್ರೀಯನೇ |
ಕಟಿತಟಾಂಕಿತ ಕೋಮಲಾಂಗನೆ | ಕರ್ಣ ಕುಂಡಲ ಧಾರನೆ || ೧ ||

ಬಟ್ಟ ಮುತ್ತಿನ ಹಾರ ಪದಕ ಬಾಹು ಹಸ್ತ ಚತುಷ್ಟನೆ |
ಇಟ್ಟ ತೊಡುಗೆಯ ಹೇಮ ಕಂಕಣ ಪಾಷ ಅಂಕುಶ ಧಾರನೆ || ೨ ||

ಕುಕ್ಷಿ ಮಹಾ ಲಂಬೋದರನೆ | ಇಕ್ಷುಚಾಪನ ಗೆಲಿದನೆ |
ಪಕ್ಷಿವಾಹನ ಶ್ರೀಪುರಂದರವಿಠಲನ ನಿಜ ದಾಸನೆ || ೩ ||


sharanu siddhi vinayaka sharanu vidyA pradAyaka

Author : Shree Purandara Dasaru

sharanu siddhi vinayaka sharanu vidyA pradAyaka
sharaNu parvati tanaya muruti sharaNu mushika vahana || pa ||

nitila netrana devisutane nagabhusaNa priyane
katita tankita komalangane karna kundala dhaarane ||1||

batta muttina hara padaka bahu hasta chatustane
itta todugeya hema kankaNa pasha ankusha dharane||2||

kukshi maha lambodarane iksu chapana gelidane
pakshi vahana shreepurandara vittalana nija dasane||3||

Thursday, August 20, 2020

ಭೋ ಯತಿ ವರದೇಂದ್ರ / bhO yati varadEndrA


ರಚನೆ : ಶ್ರೀ ಗೋಕಾವಿ ಅನಂತದ್ರೀಶ ದಾಸರು 

ರಾಗ : ಸುರತಿ 
ತಾಳ : ಆದಿ 

ಭೋ ಯತಿ ವರದೇಂದ್ರ ಶ್ರೀಗುರುರಾಯ ರಾಘವೇಂದ್ರ ||ಪ||
ಕಾಯೋ ಎನ್ನ ಶುಭಕಾಯ ಭಜಿಸುವೆನು ಕಾಯೋ ಮಾಯತಮಕೆ ಚಂದ್ರಾ ||ಅ||

ಕಂಡ ಕಂಡ ಕಡೆಗೆ ತಿರುಗಿ - ಬೆಂಡಾದೆನೋ ಕೊನೆಗೆ
ಕಂಡ ಕಂಡವರ ಕೊಂಡಾಡುತ ನಿಮ್ಮ ಕಂಡೆ ಕಟ್ಟ ಕಡೆಗೆ ||೧||

ನೇಮವು ಎನಗೆಲ್ಲೀ ಇರುವುದು - ಕಾಮಾಧಮನಲ್ಲಿ
ಭೋ ಮಹಾಮಹಿಮನೆ ಪಾಮರ ನಾ ನಿಮ್ಮ ನಾಮವೊಂದೆ ಬಲ್ಲೆ ||೨||

ಮಂತ್ರವ ನಾನರಿಯೇ - ಶ್ರೀಮನ್ಮಂತ್ರಾಲಯ ಧೊರೆಯೆ
ಅಂತರಂಗದೊಳು ನಿಂತು ಪ್ರೇರಿಸುವ ಅನಂತಾದ್ರೀಶ ನಾನರಿಯೆ ||೩||

Author : Shree Gokavi Anantadreesha Dasaru

Raaga: Surati
Taala : Adi

bhO yati varadEndrA shrI gururAya rAghavEndrA ||pa||
kAyA ninna shubha kAya bhajisuvara kAyO tavakadinda ||a pa||

kaNDa kaNDa kaDege tirugi peNDAdenO konagE
kaNDa kaNDavara koNDADuta nimma kaNDE kaTTe kaDegE ||1||

nEmavu enagillA iruvudu kAmAttumanalli bhO mahA
mahimanE pAmara nA nimma nAma ondE ballE ||2||

mantrava nAnariyE shrIman mantrAlaya dhoreyE
antarangadoLu nintu prErisuva anantAdrIsha dhoreyE ||3||


Listen to song from Vijayadasara Mane - Chikalparavi

Listen to song by Shri Puttur Narasimha Nayak


ಕುದುರೆ ಬಂದಿದೆ ಚೆಲುವ ಕುದುರೆ ಬಂದಿದೆ / kudure bandide cheluva kudure bandide


ರಚನೆ : ಶ್ರೀ ವಾದಿರಾಜರು 

ಕುದುರೆ ಬಂದಿದೆ ಚೆಲುವ ಕುದುರೆ ಬಂದಿದೆ |ಪ|
ವಾದಿರಾಜರಿಗೊಲಿದು ಬಂದು ಸ್ವಾದಿಪುರದಲ್ಲಿ ನಿಂದ|ಅ.ಪ|

ಮುಂಗಾಲು ಕೆದರಿ ಕುಣಿವ ಕುದುರೆ
ಹಿಂಗಾಲಿಲಸುರರ ಒದೆವ ಕುದುರೆ|
ರಂಗನೆಂದರೆ ಸಲಹೊ ಕುದುರೆ
ತುಂಗ ಹಯವದನ ಕುದುರೆ||1||

ಹಲ್ಲಣದೊಳಗೆ ನಿಲ್ಲದು ಕುದುರೆ
ಬೆಲ್ಲ ಕಡಲೆ ಮೆಲ್ವ ಕುದುರೆ|
ಫುಲ್ಲಭವನಿಗೊರೆದ ಕುದುರೆ
ಚೆಲ್ವ ಹಯವದನ ಕುದುರೆ||2||

ಸುತ್ತಮುತ್ತಲಾಡುವ ಕುದುರೆ
ಮತ್ತವಾದಿಯ ಗೆಲ್ವ ಕುದುರೆ|
ಶತ್ರುಗಳೆಲ್ಲರ ಬಡಿವ ಕುದುರೆ
ತತ್ವ ಹಯವದನ ಕುದುರೆ||3||

Author : Shree Vadirajaru

kudure bandide cheluva kudure bandide |pa|
vAdirAjarigolidu bandu svAdipuradalli ninda|a.pa|

mungAlu kedari kuNiva kudure
hingAlilasurara odeva kudure|
ranganendare salaho kudure
tunga hayavadana kudure||1||

hallaNadoLage nilladu kudure
bella kaDale melva kudure|
PullaBhavanigoreda kudure
chelva hayavadana kudure||2||

suttamuttalADuva kudure
mattavAdiya gelva kudure|
SatrugaLellara baDiva kudure
tatva hayavadana kudure||3||

Listen to song by Shri Vidyabhushana



Listen to song by Pt Prasanna Gudi



ಕಾಗದ ಬಂದಿದೆ ನಮ್ಮ ಕಮಲನಾಭನದು / kAgada bandide namma kamalanABanadu


ರಚನೆ : ಶ್ರೀ ಪುರಂದರ ದಾಸರು 

ಕಾಗದ ಬಂದಿದೆ ನಮ್ಮ ಕಮಲನಾಭನದು
ಈ ಕಾಗದವನ್ನು ಓದಿಕೊಂಡು ಕಾಲವ ಕಳೆಯಿರೋ ||

ಕಾಮಕ್ರೋಧ ಬಿಡಿರೆಂಬೊ ಕಾಗದ ಬಂದಿದೆ
ನೇಮನಿಷ್ಠೆಯೊಳಿರಿರೆಂಬೊ ಕಾಗದ ಬಂದಿದೆ
ತಾಮಸ ಜನರ ಕೂಡದಿರೆಂಬೊ ಕಾಗದ ಬಂದಿದೆ
ನಮ್ಮ ಕಾಮನೈಯನು ತಾನೇ ಬರೆದ ಕಾಗದ ಬಂದಿದೆ ||೧||

ಹೆಣ್ಣಿನಾಸೆ ಬಿಡಿರೆಂಬೊ ಕಾಗದ ಬಂದಿದೆ
ಹೊನ್ನಿನ್ನಾಸೆ  ಬಿಡಿರೆಂಬೊ ಕಾಗದ ಬಂದಿದೆ
ಮಣ್ಣಿನಾಸೆ ಬಿಡಿರೆಂಬೊ ಕಾಗದ ಬಂದಿದೆ
ನಮ್ಮ ಕಮಲನಾಭನು ತಾನೇ ಬರೆದ ಕಾಗದ ಬಂದಿದೆ ||೨||

ಗೆಜ್ಜೆಕಾಲಿಗೆ ಕಟ್ಟಿರೆಂಬೊ ಕಾಗದ ಬಂದಿದೆ
ಹೆಜ್ಜೆಹೆಜ್ಜೆಗೆ ಹರಿ ಎನಿರೆಂಬೊ ಕಾಗದ ಬಂದಿದೆ
ಲಜ್ಜೆ ಬಿಟ್ಟು ಕುಣಿಯಿರಿ ಎಂಬೊ ಕಾಗದ ಬಂದಿದೆ
ನಮ್ಮ ಪುರಂದರವಿಠ್ಠಲ ತಾನೇ ಬರೆದ ಕಾಗದ ಬಂದಿದೆ ||೩||

Composer : Sri Purandaradasaru

kAgada bandide namma kamalanABanadu
I kAgadavannu OdikonDu kAlava kaLeyirO ||

kAmakrOdha biDirembo kAgada bandide
nEmaniShTheyoLirirembo kAgada bandide
tAmasa janara kUDadirembo kAgada bandide
namma kAmanaiyanu tAnE bareda kAgada bandide||1||

heNNinAse biDirembo kAgada bandide
honninAse biDirembo kAgada bandide
maNNinAse biDirembo kAgada bandide
namma kamala nAbhanu tAne bareda kAgada bandide ||2||

gejjekAlige kaTTirembo kAgada bandide
hejjehejjege hari enirembo kAgada bandide
lajje biTTu kuNiyiri embo kAgada bandide
namma puraMdaraviThThala tAnE bareda kAgada bandide ||3||

Listen to song by Shri Dr. M. Balamuralikrishna




Monday, August 17, 2020

ಕಲಿಯುಗದೊಳು ಹರಿನಾಮವ ನೆನೆದರೆ / Kaliyugadolu Harinaamava Nenedare



ರಾಗ :ಜಂಜುಟಿ 

ರಚನೆ : ಶ್ರೀ ಪುರಂದರ ದಾಸರು 

ಕಲಿಯುಗದೊಳು ಹರಿನಾಮವ ನೆನೆದರೆ
ಕುಲಕೋಟಿಗಳು ಉದ್ಧರಿಸುವುವು | ರಂಗ ||ಪ.||
ಸುಲಭದ ಭಕುತಿಗೆ ಸುಲಭನೆಂದೆನಿಸುವ
ಜಲರುಹನಾಭನ ನೆನೆ ಮನವೆ ||ಅ.ಪ.||

ಸ್ನಾನವನರಿಯೆ ಮೌನವನರಿಯೆ
ಧ್ಯಾನವನರಿಯೆನೆಂದು ಎನಬೇಡಾ
ಜಾನಕಿವಲ್ಲಭ ದಶರಥನಂದನ
ಗಾನವಿಲೋಲನ ನೆನೆ ಮನವೆ ||೧||

ಅರ್ಚಿಸಲರಿಯೆ ಮೆಚ್ಚಿಸಲರಿಯೆ
ತುಚ್ಛನು ನಾನೆಂದು ಎನಬೇಡಾ
ಅಚ್ಯುತಾನಂತ ಗೋವಿಂದ ಮುಕುಂದನ
ಇಚ್ಛೆಯಿಂದಲಿ ನೆನೆ ಮನವೆ ||೨||

ಜಪವೊಂದರಿಯೆ ತಪವೊಂದರಿಯೆ
ಉಪದೇಶವಿಲ್ಲೆಂದೆನಬೇಡಾ
ಅಪಾರಮಹಿಮ ಶ್ರೀ ಪುರಂದರ ವಿಠಲನ
ಉಪಾಯದಿಂದಲಿ ನೆನೆ ಮನವೆ ||೩||

Raaga: JanjUTi

Composer: Sri Purandara Dasaru

kaliyugadoLu harinaamava nenedare
kulakOTigaLu uddharisuvuvu | ranga ||pa.||
sulabhada bhakutige sulabhanendenisuva
jalaruhanaabhana nene manave ||a.pa.||

snaanavanariye maunavanariye
dhyaanavanariyenendu enabEDaa
jaanakivallabha dasharathanandana
gaanavilOlana nene manave ||1||

archisalariye mechchisalariye
tuchchanu naanendu enabEDaa
achyutaananta gOvinda mukundana
ichcheyindali nene manave ||2||

japavondariye tapavondariye
upadEshavillendenabEDaa
apaaramahima shrI purandara viThalana
upaayadindali nene manave ||3||

Listen to song by Shri Vidyabhushana



Listen to song by Shri Pt Venkatesh Kumar


Listen to song by Dr Rajkumar



Sunday, August 16, 2020

baare venkaTaramaNi shreedEvi nee / ಬಾರೆ ವೆಂಕಟರಮಣಿ ಶ್ರೀದೇವಿ ನೀ



ರಚನೆ : ಶ್ರೀ ಇಂದಿರೇಶ ದಾಸರು 


ಬಾರೆ ವೆಂಕಟರಮಣಿ | ಶ್ರೀದೇವಿ ನೀ |
ಬಾರೆ ವೆಂಕಟರಮಣಿ || ಪ ||
ಬಾರೆ ವೆಂಕಟರಮಣಿ ಪಾರಾಯಣ ಕೇಳೆ |
ಚಾರು ವದನೆ ಉಪಹಾರ ಕಾಲಕೆ ನಿತ್ಯ || ಅ. ಪ.||

ಏನು ಪುಣ್ಯವೆ ನಂದು ಪಾರಾಯಣ |
ನೀನೆ ಕೇಳುವಿ ಬಂದು |
ಹೀನ ಮಾನವನಿಗೆ ನೀನೆ ಬರುವಿ ಎಂಬೋ |
ಜ್ಞಾನವಿಲ್ಲವೋ ಉಚ್ಚ ಸ್ಥಾನದೊಳು ಕೂಡೆ || 1 ||

ಸ್ವಪ್ನದೊಳಗೆ ಬರುವಿ |
ಶ್ರೀದೇವಿ ನೀ ಕ್ಷಿಪ್ರದಿಂದಲಿ ಪೋಗುವಿ |
ಸರ್ಪಶಯನ ನಮ್ಮಪ್ಪ ಗೋಕುಲಬಾಲನ್- |
ಅಪ್ಪಿ ಕೊಳ್ಳುವ ಸುಖ ಒಪ್ಪಿಸು ಬೇಗನೆ || 2 ||

ಎಲ್ಲ ದೇವತೆಗಳನು ತಡೆದಿಯೆ |
ಫುಲ್ಲ ವಾರಿಜ ನಯನೆ | ಗೊಲ್ಲ ಬಾಲನ ಪಾದ |
ಪಲ್ಲವ ಕಾಣದೆ ನಿಲ್ಲಲೊಲ್ಲದೊ ಮನ |
ಸೊಲ್ಲ ಸೊಲ್ಲ ಲಾಲಿಸೆ ತಾಯಿ || 3 ||

ಮಂಗಳಾಂಗಿಯೆ ನಿನ್ನ | ನೋಡದೆ |
ಭಂಗ ಪಡುವೆನಮ್ಮ |
ಗಂಗ ಜನಕ ಸಿರಿ ರಂಗನಂಕದಿ ಕುಳಿತು |
ಭೃಂಗ ಕುಂತಳೆ ಹೃದಯದಂಗಳದೊಳು ಆಡೆ || 4 ||

ಇಂದಿರೇಶನ ರಾಣಿ | ನೀ ಎನ್ನ |
ಮನ ಮಂದಿರದೊಳು ಬಾ ನೀ |
ನಂದ ಗೋಕುಲ ಬಾಲ ನಿಂದು ಕರದೊಳೆತ್ತಿ |
ತಂದು ತೋರಿಸೆ ಅರವಿಂದ ನಿಲಯೆ ಲಕ್ಷ್ಮೀ || 5 ||

Author : Shree Indiresha Dasaru


baare venkaTaramaNi | shreedEvi nee |
baare venkaTaramaNi || pa ||
baare venkaTaramaNi paaraayaNa kELe |
chaaru vadane upahaara kaalake nitya || a. pa.||

Enu puNyave nandu paaraayaNa |
neene kELuvi bandu |
heena maanavanige neene baruvi eMbO |
jnyaanavillavO uchcha sthaanadoLu kooDe || 1 ||

swapnadoLage baruvi |
shreedEvi nee kShipradindali pOguvi |
sarpashayana nammappa gOkulabaalan- |
appi koLLuva sukha oppisu bEgane || 2 ||

ella dEvategaLanu taDediye |
phulla vaarija nayane | golla baalana paada |
pallava kaaNade nillalollado mana |
solla solla laalise taayi || 3 ||

mangaLaangiye ninna | nODade |
bhanga paDuvenamma |
ganga janaka siri ranganankadi kuLitu |
bhRunga kuntaLe hRudayadangaLadoLu aaDe ||4 ||

indirEshana raaNi | nee enna |
mana mandiradoLu baa nee |
nanda gOkula baala niMdu karadoLetti |
tandu tOrise aravinda nilaye lakShmI || 5 ||

Listen to song by Shri Sheshagiridas 

Listen to song by Shri Puttur Narasimha Nayak


aava kaDeyinda bande vaajivadanane / ಆವ ಕಡೆಯಿಂದ ಬಂದೆ ವಾಜಿವದನನೆ


ರಚನೆ : ಶ್ರೀ ವಾದಿರಾಜರು 

ಆವ ಕಡೆಯಿಂದ ಬಂದೆ ವಾಜಿವದನನೆ |
ಭಾವಿಸುತ ವಾದಿರಾಜ ಮುನಿಯ ಕಾಣುತ || ಪ ||
ನೇವರಿಸಿ ಮೈಯ ತಡವಿ ನೇಹದಿಂದಲಿ |
ಮೇಲು ನೈವೇದ್ಯವನ್ನು ಇತ್ತು ಭಜಿಸುವೆ || ಅ. ಪ. ||

ಭಕುತಿ ಕಡಲೆ ಜ್ಞಾನ ವೈರಾಗ್ಯ ಬೆಲ್ಲದ |
ಮುಕುತಿ ಆನಂದ ಸುಖದ ಕ್ಷೀರ ಲಡ್ಡಿಗೆ |
ಯುಕುತಿ ಧ್ಯಾನ ಕೊಟ್ಟು ನೀನು ಎಲ್ಲ ಮಾತಲಿ |
ಶಕುತಿ ಸಂತೋಷ ಮಹಿಮೆ ತೋರ ಬಂದೆಯ || 1 ||

ಹೆತ್ತ ತುಪ್ಪ ಸಕ್ಕರೆಯ ಮಾಡಿ ಮುದ್ದೆಯ |
ತುತ್ತು ಮಾಡಿ ಕೊಡಲು ಅದನು ಮೆಲುತ ಮೆಚ್ಚುತ |
ಅತ್ಯಂತ ಸಂತೋಷ ನೀನು ಆಟ ತೋರುತ |
ಭೃತ್ಯ ವಾದಿರಾಜ ಮುನಿಯ ಸಲಹ ಬಂದೆಯ || 2 ||

ಫಲವ ಕೊಟ್ಟು ರಕ್ಷಿಸಿದಿ ವಾಜಿವದನನೆ |
ನಿಲುವೋ ಜ್ಞಾನ ಭಕ್ತಿಯನ್ನು ನೀಡ ಬಂದೆಯ |
ಸುಲಭ ಸುಮುಖ ಸುಪ್ರಸನ್ನ ಹಯವದನನೆ |
ಚೆಲುವ ಚಿನ್ಮಯ ಮೂರ್ತಿ ನಮ್ಮ ಸಲಹ ಬಂದೆಯ || 3 ||

Author :  Shree Vadirajaru

aava kaDeyinda bande vaajivadanane |
bhaavisuta vaadiraaja muniya kaaNuta || pa ||

nEvarisi maiya taDavi nEhadindali |
mElu naivEdyavannu ittu bhajisuve || a. pa. ||

bhakuti kaDale jnyaana vairaagya bellada |
mukuti aananda sukhada kSheera laDDige |
yukuti dhyaana koTTu neenu ella maatali |
shakuti santOSha mahime tOra bandeya || 1 ||

hetta tuppa sakkareya maaDi muddeya |
tuttu maaDi koDalu adanu meluta mechchuta |
atyanta santOSha neenu aaTa tOruta |
bhRutya vaadiraaja muniya salaha bandeya || 2 ||

phalava koTTu rakShisidi vaajivadanane |
niluvO jnyaana bhaktiyannu neeDa bandeya |
sulabha sumukha suprasanna hayavadanane |
cheluva chinmaya moorti namma salaha bandeya || 3 ||

Listen to song by Padmashree Srirangam



Listen to song by Bombay Jayahshree