Pages

Tuesday, April 6, 2021

ನೋಡು ನೋಡು ನೋಡು ಕೃಷ್ಣ / Nodu nodu nodu krishna

ನೋಡು ನೋಡು ನೋಡು ಕೃಷ್ಣ


ರಚನೆ : ಶ್ರೀ ಪುರಂದರ ದಾಸರು 


ನೋಡು ನೋಡು ನೋಡು ಕೃಷ್ಣ ಹೇಗೆ ಮಾಡುತಾನೆ
ಬೇಡಿಕೊಂಡರೆ ಬಾರ ಕೃಷ್ಣ, ಓಡಿ ಹೋಗುತಾನೆ ||ಪ||

ಕಂಡಕಂಡವರ ಮೇಲೆ ಕಣ್ಣ ಹಾಕುತಾನೆ
ಉಂಡು ಉಂಡು ಮುಸುಕನಿಟ್ಟು ಮಲಗಿಕೊಳ್ಳುತಾನೆ
ಲಂಡತನವ ಮಾಡಿ ಮಾಡಿ ಮಣ್ಣ ಗೋರುತಾನೆ
ಭಂಡು ಮಾಡಿ ಬಾಗಿಲೊಳಗೆ ಚೀರಿಕೊಳ್ಳುತಾನೆ ||೧||

ಕರುಣವಿಲ್ಲದಲೆ ಬಂದು ಕಾಲಲೊದೆಯುತಾನೆ
ಶರಣು ಹೊಕ್ಕರೆಯು ತಾನೆ ಕೊಡಲಿ ಮಸೆಯುತಾನೆ
ಹರಿಯುವ ವಾನರರ ಕೂಡ ಹಾರಾಡುತಾನೆ
ಸಿರಿಕೃಷ್ಣ ಹಾಲು-ತುಪ್ಪ ಸೂರೆಮಾಡುತಾನೆ ||೨||

ಬಾಲೆಯರಿಗೆ ವರವನಿತ್ತು ಪುರವ ಕೆಡಿಸುತಾನೆ
ನೀಲಗುದುರೆಯನೇರಿ ಹಾರಿಸಾಡುತಾನೆ
ಬಾಲಕರ ಕೂಡಿಕೊಂದು ಕುಣಿದಾಡುತಾನೆ
ಲೋಲಪುರಂದರವಿಠಲ ತಾನು ಕುಣಿಯುತಾನೆ||೩||


Nodu nodu nodu krishna

Author : Shri Purandara Dasaru

Nodu nodu nodu krishna hEge maadutane |
Bedikondare baala krishna Odi hogutaane ||pa||

Kanda kandavara mEle kannu haakutaane |
Undu undu musukanittu malagikoLLutaane ||
Landatanava maadi maadi maNNa gorutaane |
Bhandu maadi baagiloLage cheerikollutaane ||1||

Karunavilladale bandu kaalalodeyutaane |
Sharanu hokkareyu taanu kodali maseyutaane ||
Hariyuva vaanarara kooda haraDutaane |
Sirikrishna haalu tuppa sooremaadutaane ||2||

BaLeyarige varavanittu purava kedisutaane |
Neelagudureyaneri harisaadutaane ||
Baalakara koodikondu kunidaadutaane |
Lolapurandara vithala taanu kuniyutane ||3||


Listen to song here




ಬೂಚಿ ಬಂದಿದೆ / Boochi bandide

ಬೂಚಿ ಬಂದಿದೆ






ರಚನೆ : ಶ್ರೀ ಪುರಂದರ ದಾಸರು 


ಬೂಚಿ ಬಂದಿದೆ, ರಂಗ ಬೂಚಿ ಬಂದಿದೆ ||ಪ||
ಚಾಚಿ ಕುಡಿದು ಸುಮ್ಮನೆ ನೀ ಪಾಚಿಕೊಳ್ಳೊ ಕೃಷ್ಣಯ್ಯ ||ಅ||

ನಾಲ್ಕು ಮುಖದ ಬೂಚಿಯೊಂದು
ಗೋಕುಲಕ್ಕೆ ಓಡಿ ಬಂದು
ಲೋಕರನ್ನು ಎಳೆದುಕೊಂಡು
ಕಾಕು ಮಾಡಿ ಒಯ್ಯುವುದಕೆ ||೧||

ಮೂರು ಕಣ್ಣಿನ ಬೂಚಿಯೊಂದು
ಊರೂರ ಸುತ್ತಿ ಬಂದು
ದ್ವಾರದಲ್ಲಿ ನಿಂತಿದೆ ನೋಡೊ
ಪೋರರನ್ನು ಒಯ್ಯುವುದಕೆ ||೨||

ಅಂಗವೆಲ್ಲ ಕಂಗಳುಳ್ಳ
ಶೃಂಗಾರ ಮುಖದ ಬೂಚಿ
ಬಂಗಾರದಂಥ ಮಕ್ಕಳನೆಲ್ಲ
ಕಂಗೆಡಿಸಿ ಒಯ್ಯುವುದಕೆ ||೩||

ಆರು ಮುಖದ ಬೂಚಿಯೊಂದು
ಈರಾರು ಕಂಗಳದಕೆ
ವಾರು ವಾರು ಅಳುವ ಮಕ್ಕಳ
ದೂರ ಸೆಳೆದು ಒಯ್ಯುವುದಕೆ ||೪||

ಮರದ ಮೇಲೆ ಇರುವುದೊಂದು
ಕರಾಳ ಮುಖದ ಬೂಚಿ
ತರಳರನ್ನು ಎಳೆದುಕೊಂಡು
ಪುರಂದರವಿಠಲಗೊಪ್ಪಿಸಲಿಕೆ ||೫||

Boochi bandide


Author : Shri Purandara Dasaru


Boochi bandide, ranga Boochi bandide ||pa||
Chaachi kudidu summane ni pachikollo krishnayya ||a||

Nalku mukhada boochiyondu
Gokulakke odi bandu
Lokarannu eLedukondu
Kaaku maadi oyyuvudake ||1||

Mooru kannina boochiyondu
Oorura sutti bandu
Dvaradalli nintide nodo
POrarannu oyyuvudake ||2||

Angavella kangalulla
Shrungara mukhada boochi
Bangaradantha makkalanella
Kangedisi oyyuvudake ||3||

Aru mukhada boochiyondu
Eeraaru kangaLadake
Vaaru vaaru aLuva makkaLa
Doora seLedu oyyuvudake ||4||

Marada mele iruvudondu
Karaala mukhada boochi
TaraLarannu eledukondu
Purandara vithala goppisalike ||5||



Listen to song by Shri Vidyabhushana




Sunday, April 4, 2021

Deva Banda Namma Swamy Bandano / ದೇವ ಬಂದ ನಮ್ಮ ಸ್ವಾಮಿ ಬಂದನೊ

ದೇವ ಬಂದ ನಮ್ಮ ಸ್ವಾಮಿ ಬಂದನೊ





ರಚನೆ : ಶ್ರೀ ಪುರಂದರ ದಾಸರು 


ದೇವ ಬಂದ ನಮ್ಮ ಸ್ವಾಮಿ ಬಂದನೊ
ದೇವರ ದೇವ ಶಿಖಾಮಣಿ ಬಂದನೊ ||ಪ ||

ಉರಗಶಯನ ಬಂದ ಗರುಡಗಮನ ಬಂದ
ನರಗೊಲಿದವ ಬಂದ ನಾರಾಯಣ ಬಂದ ||೧ ||

ಮಂದರೋದ್ದರ ಬಂದ ಮಾಮನೋಹರ ಬಂದ
ಬೃಂದಾವನಪತಿ ಗೋವಿಂದ ಬಂದನೊ ||೨||

ನಕ್ರಹರನು ಬಂದ ಚಕ್ರಧರನು ಬಂದ
ಅಕ್ರೂರಗೊಲಿದ ತ್ರಿವಿಕ್ರಮ ಬಂದನೊ||೩||

ಪಕ್ಷಿವಾಹನ ಬಂದ ಲಕ್ಷ್ಮಣಾಗ್ರಜ ಬಂದ
ಅಕ್ಷಯ ಫಲದ ಶ್ರೀ ಲಕ್ಷ್ಮೀರಮಣ ಬಂದನೊ ||೪||

ನಿಗಮಗೋಚರ ಬಂದ ನಿತ್ಯತೃಪ್ತನು ಬಂದ
ನಗೆಮುಖ ಪುರಂದರವಿಠಲ ಬಂದನೊ||೫||

ನಾನ್ಯಾಕೆ ಚಿ೦ತಿಸಲಿ ನಾನ್ಯಾಕೆ ಧೇನಿಸಲಿ / Naanyaake Chintisali Naanyaake DhEnisali

ನಾನ್ಯಾಕೆ ಚಿ೦ತಿಸಲಿ ನಾನ್ಯಾಕೆ ಧೇನಿಸಲಿ

Naanyaake Chintisali Naanyaake DhEnisali




ರಚನೆ :ಶ್ರೀ ವ್ಯಾಸ ತತ್ವಜ್ಞ ತೀರ್ಥರು 


ನಾನ್ಯಾಕೆ ಚಿ೦ತಿಸಲಿ ನಾನ್ಯಾಕೆ ಧೇನಿಸಲಿ
ತಾನಾಗಿ ಶ್ರೀ ರಾಘವೇ೦ದ್ರಯತಿ ಒಲಿದ || ಪ ||

ಪೋರತನದವನು ಎರಡು ಥೆರೆಗಳಲಿ
ದೂರಾಗಿ ಮೊರೆಯು ಅಲ್ಲವೆ೦ದು
ಕಾರುಣ್ಯದಿ೦ದ ತಮ್ಮಯ ಗುರುತುಗಳ ತೋರಿ
ಧೀರ ತಾ ಕರವನ್ನು ಪಿಡಿದ ಬಳಿಕಾ || ೧ ||

ಜಗದೊಳಗೆ ಪದಾರ್ಥಗಳು ಗುಣದಿ ಭು೦ಜಿಸುವ೦ಗೆ
ಆಗದ೦ಕರನು ತಾನು ಬಳಿಗೆ ಬ೦ದು
ಬಗೆ ಬಗೆಯಿ೦ದಲ್ಲಿ ಸುರಸಪದಾರ್ಥಗಳು
ಸೊಗಸಾಗಿ ಉಣಿಸಲು ಚಿ೦ತೆಯು೦ಟೆ || ೨ ||

ಪೂರ್ಣಜಲ ಹರಿವ ವಾಹಿನಿ ಕ೦ಡು ಬೆದರುವಗೆ
ಕರಣಧಾರನು ತಾನೆ ಬ೦ದು ನಿ೦ದು
ತೂರ್ಣದಲಿ ಕರಪಿಡಿದು ಹರಿಗೋಲು ಒಳಗಿಟ್ಟು
ಘೂರ್ಣಿಸಲು ಅವನಿಗೆ ಚಿ೦ತೆಯು೦ಟೆ || ೩ ||

ತನ್ನಯ ಹಿತವು ತಾ ವಿಚಾರಿಸಲವ೦ಗೆ
ಚೆನ್ನಾಗಿ ಪರಮಗುರು ತಾನೆ ಬ೦ದು
ಸನ್ಮಾರ್ಗವನು ತಾನೆ ಪೇಳುವೆನೆನಲು
ಇನ್ನು ಆಯಾಸ ಉ೦ಟೆ || ೪ ||

ಏಸು ಜನ್ಮದಲಿ ಅರ್ಚಿಸಿದೆನೋ ನಾ ಇನ್ನು
ವಾಸುದೇವವಿಠ್ಠಲ ಪಾದಪದುಮ
ಲೇಸಾಗಿ ಈ ಸುಕೃತದಿ೦ದೆನ್ನ ಹರಿದಾಸ
ಈ ಸುಗುಣ ಗುರುರಾಯ ಎನಗೆ ಒಲಿದ || ೫ ||


ಕಂದಾ ಬೇಡವೊ ಮಣ್ಣು ತಿನ್ನ ಬೇಡವೊ /Kanda bedavo mannu tinna bedavo

ಕಂದಾ ಬೇಡವೊ ಮಣ್ಣು ತಿನ್ನ ಬೇಡವೊ





ರಚನೆ : ಶ್ರೀ ಪುರಂದರ ದಾಸರು 

ಕಂದಾ ಬೇಡವೊ ಮಣ್ಣು ತಿನ್ನ ಬೇಡವೊ ||ಪ||
ಕಂದಾ ಬೇಡವೊ ಮಣ್ಣು ತಿನ್ನಲಿ ಬೇಡವೊ

ಸುಂದರಾಂಗನೆ ನಿನಗೆ ಹೊಟ್ಟೆ ನೋಯುವುದಯ್ಯ ||ಅ||

ಬೇಗನೆ ಏಳಯ್ಯ , ಮಣ್ಣಾಟ ಬಿಡೊ ನೀನು
ಜೋಗಿ ಬರುತಾನಲ್ಲಿ ಅಂಜಿಸುವುದಕೀಗ ||
ತಾಯಿ ಮಾತನು ಒತ್ತಿ ಕರದಲಿ ಮಣ್ಣೊತ್ತಿ
ಬಾಯಲಿ ಇಟ್ಟನು ಬಾಲಕೃಷ್ಣಯ್ಯನು ||೧||

ಪೆಟ್ಟು ಕೊಡುವೆ ನಿನಗೆ , ಸಿಟ್ಟು ಬಹಳ ಇದೆ
ಮುಟ್ಟಬೇಡೊ ಮಣ್ಣು , ಬೆಣ್ಣೆ ತರುವೆನಯ್ಯ ||
ಅಮ್ಮಯ್ಯ ಕೇಳೆಲೆ , ಬಾಯಲಿ ಮಣ್ಣಿಲ್ಲ
ಗುಮ್ಮನ ಕರೆಬೇಡ , ಸುಮ್ಮನೆ ಇರುತೇನೆ ||೨||

ಮಗುವೆ ಬಾ ಬಾ ಎಂದು ಬಣ್ಣಿಸಿ ಕರೆದಳು
ಮಗುವಿನ ಬಾಯ ಶೋಧಿಸಿದಳು ಬೇಗನೆ ||
ಬಾಯಲಿ ಕಂಡಳು ಹದಿನಾಲ್ಕು ಲೋಕವ
ಕಾಯ ಮರೆತಳಯ್ಯ ಮರುಳಿಗೆ ವಶವಾಗಿ ||೩||

ಮತ್ತು ಕಂಡಳು ಅವಳು ಗೋಕುಲವೆಲ್ಲವ
ಅತ್ತ ಕಂಡಳು ತನ್ನ ಕೃಷ್ಣನ ಬಗಲಲಿ ||
ಗೋಪ್ಯೇರ ಮನೆಗಳಲಿ ಗೋಪಾಲಕೃಷ್ಣನು
ಗೋಪ್ಯೇರ ಮನೆಗಳಂತೆ ದುಡುಕು ಮಾಡುತಲಿರ್ದ ||೪||

ಬಾಲನು ಬೀದಿಯ ಮಣ್ಣೆತ್ತಿ ಉಣುತಿರ್ದ
ಬಾಲೆ ಗೋಪ್ಯಮ್ಮನು ಮಣ್ಣ ತೆಗೆತಿರ್ದಳು ||
ಕಂದನು ನೀನಲ್ಲ ಕಂದರ್ಪ ಜನಕನೆ
ಕಂದನೆ ನಿನ್ನ ಬಾಯ ಮುಚ್ಚಿಕೊಳ್ಳಯ್ಯ ಈಗ ||೫||

ದೇವದಿದೇವನೆ ದೇವಕಿತನಯನೆ
ಭಾವಜನಯ್ಯನೆ ಬಾರಯ್ಯ ದೊರೆಯೆ ||
ಜಯಗಳಾಗಲಿ ನಮ್ಮ ಕೃಷ್ಣರಾಯಗೆ ಬಹಳ
ಜಯಗಳಾಗಲಿ ಅವನ ಭಕ್ತರ ವೃಂದಕೆ ||೬||

ಲೀಲಾವಿನೋದನು ರುಕ್ಮಿಣೀಲೋಲನು
ಲೀಲೆ ತೋರಿದನಂದು ತಂದೆ ಪುರಂದರವಿಠಲ ||೭||

Kanda bedavo mannu tinna bedavo

Composer: Sri Purandara Dasaru

Kanda bedavo mannu tinna bedavo ||pa||
Kanda bedavo mannu tinnali bedavo

Sundaraangane ninage hotte noyuvudayya ||a||

Begane elayya , maNNata bido neenu
JOgi barutaanalli anjisuvudakiga ||
Taayi matanu otti karadali maNNotti
Baayali iTTanu baalakrishnayyanu ||

Pettu koduve ninage , sittu bahala ide
MuttabedO mannu , benne taruvenayya ||
Ammayya kelele , baayali mannilla
Gummana karebeda , summane irutene ||

Maguve ba ba endu bannisi karedalu
Maguvina baya shodhisidaLu begane ||
Baayali kandalu hadinalku lokava
Kaaya maretaLayya maruLige vasHavaagi ||

Mattu kandalu avalu gokulavellava
Atta kandalu tanna krishnana bagalali ||
GopyEra manegalali gopalakrishnanu
GopyEra manegalante duDuku maadutalirda ||

Baalanu beediya maNNetti uNutirda
Baale gopyammanu maNNa tegetirdaLu ||
Kandanu neenalla kandarpa janakane
Kandane ninna baaya muchchikollayya Iga ||

Devaadidevane devakitanayane
Bhavajanayyane barayya doreye ||
Jayagalaagali namma krishnarayage bahaLa
Jayagalagali avana Bkaktara vrundake ||

Leelaavinodanu rukmiNilOlanu
Leele toridanandu tande purandaravithala ||


Saturday, April 3, 2021

ಹೇಗೆ ಮಾಡಲಿ ಮಗುವಿಗೆ / hEge maadali maguvige

ಹೇಗೆ ಮಾಡಲಿ ಮಗುವಿಗೆ



ರಚನೆ : ಶ್ರೀ ಪುರಂದರ ದಾಸರು 


ಹೇಗೆ ಮಾಡಲಿ ಮಗುವಿಗೆ ಏನಾಯಿತೆ , ಇದ-
ರಾಗಮವ ಬಲ್ಲವರು ತಿಳಿದು ಪೇಳಿ ||ಪ||

ಕಣ್ಣಮುಚ್ಚಲೊಲ್ಲನು ತೂಗಿ ಮಲಗಿಸಿದರೆ
ಬೆನ್ನ ಮೇಲಿನ ಬುಕಟಿ ಕಲ್ಲ ಅರಿಯಾಗಿದೆ ||
ರೋಗವಿದೇನು ದಾಡೆಯಲಿ ನೀರು ಇಳಿವುತದೆ
ಕೂಗುವ ಧ್ವನಿ ಒಮ್ಮೆ ಕುಂದಿದುದು ||

ಖಂಡ ಸಕ್ಕರೆ ಹಾಲು ಉಣಕೊಟ್ಟರೊಲ್ಲದೆ
ಮಣ್ಣು ಹೇಂಟೆ ಬೇಡಿದ ಕೈಯಾಗೆ ಏನು ಕೊಡಲಿ
ಮಂಡೆ ಜಡೆಕಟ್ಟಿತಿನ್ನೇನು ಮಾಡಲಿ ಇದಕೆ
ಹಿಂಡು ಸತಿಯರ ಸಂಗ ಘನವಾಯಿತು ||

ಮಾಲೆಯನು ತೆಗೆದು ಮೈಮುರಿದುಟ್ಟು ನಗುತಿದೆ
ಕಲಕಿತನದಲ್ಲಿ ಎಮ್ಮ ಕಾಡುತಾನೆ
ನೆಲೆಯ ಬಲ್ಲವರು ಕಾಣೆ ಧರೆಯೊಳಗೆ
ಚೆಲುವ ಶ್ರೀಪುರಂದರವಿಠಲ ಒಬ್ಬನೇ ಬಲ್ಲ ||

hEge maadali maguvige 

Composer: Sri Purandara Dasaru


hEge maadali maguvige enayite , ida-
raagamava ballavaru tiLidu peLi ||pa||

Kannamuchchalollanu toogi malagisidare
Benna mElina bukati kalla ariyagide ||
RogavidEnu daaDeyali neeru ilivutade
Kooguva dhvani omme kundidudu ||

Khanda sakkare haalu uNakottarollade
Mannu hente bedida kaiyaage Enu kodali
ManDe jadekattitinnenu maadali idake
HinDu satiyara sanga ghanavaayitu ||

Maaleyanu tegedu maimuriduttu nagutide
Kalakitanadalli emma kaadutaane
Neleya ballavaru kaaNe dhareyoLage
cheluva sripurandaravithala obbane balla ||

Sunday, November 15, 2020

ಗುರು ಪುರಂದರ ದಾಸರೇ/ Guru Purandara Dasare


ಗುರು ಪುರಂದರ ದಾಸರೇ




ರಚನೆ: ಶ್ರೀ ವಿಜಯ ದಾಸರು

ಗುರು ಪುರಂದರ ದಾಸರೇ ನಿಮ್ಮ ಚರಣ ಸರಸಿಜ ನಂಬಿದೆ ಪ
ಗರ್ವ ರಹಿತನ ಮಾಡಿ ಎನ್ನನು ಪೊರೆವ ಭಾರವು ನಿಮ್ಮದೆ|| ಅ||

ಒಂದು ಅರಿಯದ ಮಂದಮತಿ ನಾನಿಂದು ನಿಮ್ಮನು ವಂದಿಪೆ
ಇಂದಿರೇಶನ ತಂದು ತೋರಿಸಿ ತಂದೆ ಮಾಡೆಲೊ ಸತ್ಕೃಪೆ ||೧||

ಪುರಂದರ ಗಡದೊಳಗೆ ನಿಂದು ನಿರುತ ದ್ರವ್ಯವ ಗಳಿಸಿದೆ
ಪರಮ ಪುರುಷನು ವಿಪ್ರನಂದದಿ ಕರವ ನೀಡಿ ಯಾಚಿಸೆ ||೨||

ಪರಮ ನಿರ್ಗುಣ ಮನವರಿತು ಹರಿಗೆ ಸೂರೆಯ ನೀಡುತ
ಅರಿತು ಮನದೊಳು ಹರಿದು ಭವಗಳ ತರುಣಿ ಸಹಿತಾ ಹೊರಟನೆ ||೩||

ಮಾರಜನಕನ ಸನ್ನಿಧಾನದಿ ಸಾರಗಾನವ ಮಾಡುವ
ನಾರದರೆ ಈ ರೂಪದಿಂದಲಿ ಚಾರುದರುಶನ ತೋರಿದ ||೪||

ಅಜಭವಾದಿಗಳರಸನಾದ ವಿಜಯವಿಠ್ಠಲನ ಧ್ಯಾನಿಪ
ನಿಜ ಸುಜ್ಞಾನವ ಕೊಡಿಸಬೇಕೆಂದು ಭಜಿಪೆನೋ ಕೇಳ್ ಗುರುವರ ||೫||

Guru Purandara Dasare

Author : Shri Vijaya Dasaru


Guru purandaradasare nimma charanakamalava nambide||
Garuvarahitana madi ennanu poreva bharavu nimmade||1||

Ondu ariyada mandamati nanindu nimmanu vandipe|
Indireshana tandu torisi tande madelo satkrupe||2||

Purandaragadadolage nindu niruta dravyava galiside|
Paramapurushanu vipranandadi karava nidi yachise||3||

Parama nirgunavanavanaritu harige sureya niduta|
Aritu manadolu haridu bhavagala taruni sahita horatane||4||

Marajanakana sannidhanadi saraganava maduva|
Naradare I rupadindali charudarushana torida||5||

Ajabhavadigalarasanada vijayavithalana dyanipa|
Nija su~janava kodisabekendu bhajipeno kel guruvara||6||


Listen to song by Shri Raichur Sheshagiridas



Listen to song by Shri Vidyabhushana