Pages

Thursday, April 22, 2021

ಹೇಳಿದರೆ ನಮ್ಮ ಮೇಲೆ ಯಾಕಮ್ಮ ಸಿಟ್ಟು / Helidare namma mEle yakamma sittu

ಹೇಳಿದರೆ ನಮ್ಮ ಮೇಲೆ ಯಾಕಮ್ಮ ಸಿಟ್ಟು





ರಚನೆ : ಶ್ರೀ ಪುರಂದರ ದಾಸರು

ಹೇಳಿದರೆ ನಮ್ಮ ಮೇಲೆ ಯಾಕಮ್ಮ ಸಿಟ್ಟು, ಇಂಥ
ಗಾಳಿಗಾರ ಮಗನ ಪಡೆದ ಮೇಲೆ ನೀವಿಷ್ಟು ||ಪ||

ಸಣ್ಣ ರುಮಾಲು ಕಟ್ಟಿ ಚುಂಗ ಬಿಟ್ಟು , ಪಣೆಗೆ
ಬಣ್ಣಿಸಿ ಕಸ್ತೂರಿ ತಿಲಕವನಿಟ್ಟು
ಚಿಣ್ಣಿಕೋಲು ಚೆಂಡು ಬುಗುರಿ ಕೈಯಲಿಟ್ಟು, ಪೊಸ
ಬೆಣ್ಣೆಯ ಮೆಲ್ಲು ಹೋಗೆಂದು ಕಳುಹಿಬಿಟ್ಟು ||

ಕರೆದು ಕೈಯಲ್ಲಿ ಚಿಟ್ಟೆಬೆಲ್ಲ ಕೊಟ್ಟು, ಚಿಕ್ಕ
ಹರಳುಕಲ್ಲುಗಳನ್ನೆ ಅರಿಸಿ ಕೊಟ್ಟು
ವಾರಿಗೆಯ ಪುಂಡರನ್ನು ಮಾಡಿಕೊಟ್ಟು, ಗೋಪಿ
ಊರನೆಲ್ಲ ಸುಲಿಯೆಂದು ಕಳುಹಿಕೊಟ್ಟು ||

ಹೋಗೆಂದು ರಂಗನ ಕಳುಹಿಕೊಟ್ಟು, ಗೋಪಿ
ಆಗ ಭೋಗಂಗಳೆಲ್ಲ ತುಂಬಿಕೊಟ್ಟು
ನಿಗಮಗೋಚರನೆಂಬ ಪೆಸರನಿಟ್ಟು, ಗೋಪಿ
ಪುರಂದರವಿಠಲನ್ನ ಬೆಳೆಸಿಬಿಟ್ಟು ||

Helidare namma mEle yakamma sittu 

Author : Shri Purandara Dasaru

Helidare namma mEle yakamma sittu intha
gaaLigaara magana padeda mele nivishtu ||pa.||

Sanna rumalu katti chunga bittu paNege
Bannisi kasturi tilakavannittu
ChinnikOlu chendu bugari kaiyalittu posa
Benneya mellu hogendu kaluhibittu ||1||

Karedu kaiyalli chitte bella kottu chikka
haraLu kallugalanne arisi kottu
Varigeya pundarannu madikottu gopi
Uranella suliyendu kaluhisikottu ||2||

Hogendu rangana kaluhikottu gopi
Aga bhogangaLella tumbikottu
Nigamagocharanemba pesaranittu gopi
Purandaravithalanna belesibittu ||3||


Listen to song by Shri SP Balasubramanyam




Wednesday, April 21, 2021

ರಾಮ ಎಂಬುವ ಎರಡು ಅಕ್ಷರದ ಮಹಿಮೆ / Rama embuva eradu aksharada mahime


ರಾಮ ಎಂಬುವ ಎರಡು ಅಕ್ಷರದ ಮಹಿಮೆ





ರಚನೆ : ಶ್ರೀ ಪುರಂದರ ದಾಸರು

ರಾಮ ಎಂಬುವ ಎರಡು ಅಕ್ಷರದ ಮಹಿಮೆಯನು
ಪಾಮರರು ತಾವೇನು ಬಲ್ಲಿರಯ್ಯ ||ಪ||

ರಾ ಎಂದ ಮಾತ್ರದೊಳು ರಕ್ತ ಮಾಂಸದೊಳಿದ್ದ
ಆಯಸ್ಥಿತಗತವಾದ ಅತಿ ಪಾಪವನ್ನು
ಮಾಯವನು ಮಾಡಿ ಮಹರಾಯ ಮುಕ್ತಿಯ ಕೊಡುವ
ದಾಯವನು ವಾಲ್ಮೀಕಿ ಮುನಿರಾಯ ಬಲ್ಲ ||೧||

ಮತ್ತೆ ಮಾ ಎಂದೆನಲು ಹೊರಬಿದ್ದ ಪಾಪಗಳು
ಒತ್ತಿ ಒಳ ಪೋಗದಂತೆ ಕವಾಟವಾಗಿ
ಚಿತ್ತ ಕಾಯಗಳ ಪವಿತ್ರ ಮಾಡುವ ಪರಿಯ
ಭಕ್ತವರ ಹನುಮಂತನೊಬ್ಬ ತಾ ಬಲ್ಲ ||೨||

ಧರೆಯೊಳೀ ನಾಮಕ್ಕೆ ಸರಿಮಿಗಿಲು ಇಲ್ಲೆಂದು
ಪರಮ ವೇದಗಳೆಲ್ಲ ಪೊಗಳುತಿಹವು
ಸಿರಿಯರಸ ಪುರಂದರವಿಟ್ಠಲ ನಾಮವನು
ಸಿರಿ ಕಾಶಿಯೊಳಗಿಪ್ಪ ಶಿವನು ತಾ ಬಲ್ಲ ||೩||

Rama embuva eradu aksharada mahime

Author : Shri Purandara Dasaru

Rama embuva eradu aksharada mahimeyanu
Paamararu taavenu ballirayya ||pa||

Ra enda maatradoLu rakta maamsadoLidda
Ayasthitagatavada ati papavannu
Maayavanu maadi maharaya muktiya koduva
Daayavanu valmiki muniraya balla ||1||

Matte ma endenalu horabidda paapagalu
Otti oLa pOgadante kavatavaagi
Chitta kayagala pavitra maduva pariya
Bhaktavara hanumantanobba taa balla ||2||

Dhareyolee namakke sari migilu illendu
Parama vedagalella pogaLutihavu
Siriyarasa purandara vittala namavanu
Siri kasihyolagippa Shivanu ta balla ||3||


Listen to song by Shri Puttur Narasimha Nayak






ರಾಮನಾಮವ ನುಡಿ ನುಡಿ / Raama naamava nudi nudi

ರಾಮನಾಮವ ನುಡಿ ನುಡಿ



ರಚನೆ : ಶ್ರೀ ಪುರಂದರ ದಾಸರು

ರಾಮನಾಮವ ನುಡಿ ನುಡಿ 
ಕಾಮಕ್ರೋಧಗಳ ಬಿಡಿ ಬಿಡಿ||


ಗುರುಗಳ ಚರಣವ ಹಿಡಿ ಹಿಡಿ
ಹರಿ ನಿರ್ಮಾಲ್ಯವ ಮುಡಿ ಮುಡಿ
ಕರಕರೆ ಭವಪಾಶವ ಕಡಿ ಕಡಿ ಬಂದ
ದುರಿತವನೆಲ್ಲ ಹೂಡಿ ಹೂಡಿ||೧||

ಸಜ್ಜನರ ಸಂಗವ ಮಾಡೋ ಮಾಡೋ
ದುರ್ಜನರ ಸಂಗವ ಬಿಡೋ ಬಿಡೋ
ಅರ್ಜುನಸಾರಥಿ ರೂಪ ನೋಡೋ ನೋಡೋ ಹರಿ
ಭನನೆಯಲಿ ಮನ ಇಡೋ ಇಡೋ||೨||

ಕರಿರಾಜವರದನ ಸಾರೋ ಸಾರೋ ಶ್ರಮ
ಪರಹರಿಸೆಂದು ಹೋರೋ ಹೋರೋ
ವರದ ಭೀಮೇಶನ ದೂರದಿರೋ ನಮ್ಮ
ಪುರಂದರವಿಠಲನ ಸೇರೋ ಸೇರೋ||೩||

Raama naamava nudi nudi 

Author : Shri Purandara Dasaru

Raama naamava nudi nudi 
Kaama krodhava bidi bidi || pa ||

Gurugala charanava hidi hidi 
Hari nirmalyava mudi mudi 
Kare kare bhavapasha kadi kadi  banda 
Duritava nellava hodi hodi || 1 ||

Sajjana sangava maado maado 
Durjanara sangava bido bido 
Arjunana sarathiya nodo nodo 
Hari bhajaneli manavanu ido ido || 2 ||

Kariraja varadana saro saro 
Shrama pariharisendu horo horo 
Varada bheemesana dooradiro namma 
Purandara vithalana sEro sEro || 3 ||


Listen to song by Shri Vidyabhushana







Tuesday, April 20, 2021

ಜೋ ಜೋ ಯಶೋದೆಯ ಕಂದ / Jo Jo Yashodeya Kanda

ಜೋ ಜೋ ಯಶೋದೆಯ 



ರಚನೆ : ಶ್ರೀ ಪುರಂದರ ದಾಸರು

ಜೋ ಜೋ ಯಶೋದೆಯ ಕಂದ ಮುಕುಂದನೆ
ಜೋ ಜೋ ಕಂಸಕುಠಾರಿ
ಜೋ ಜೋ ಮುನಿಗಳ ಹೃದಯಮಂದಿರ
ಜೋ ಜೋ ಲಕುಮಿಯ ರಮಣ ||ಪ||

ಹೊಕ್ಕಳಹೂವಿನ ತಾವರೆಗಣ್ಣಿನ , ಇಕ್ಕಿದ್ದ ಮಕರಕುಂಡಲದ
ಜಕ್ಕರಿಸುವ ಕದಪಿನ ಸುಳಿಗುರುಳಿನ , ಚಿಕ್ಕ ಬಾಯ ಮುದ್ದುಮೊಗದ
ಸೊಕ್ಕಿದ ಮದಕರಿಯಂದದಿ ನೊಸಲಲಿ ಇಕ್ಕಿದ ಕಸ್ತೂರಿತಿಲಕ
ರಕ್ಕಸರೆದೆದಲ್ಲಣ ಮುರವೈರಿಯೆ ಮಕ್ಕಳ ಮಾಣಿಕ ಜೋ ಜೋ ||೧||

ಕಣ್ಣು ಬೆಳಗು ಪಸರಿಸಿ ನೋಡುವ ಅರೆಗಣ್ಣ ಮುಚ್ಚಿ ನಸುನಗುತ
ಸಣ್ಣ ಬೆರಳು ಬಾಯೊಳು ಢವಳಿಸುತ ಪನ್ನಂಗಶಯನ ನಾಟಕದಿ
ನಿನ್ನ ಮಗನ ಮುದ್ದು ನೋಡೆನುತ ಗೋಪಿ ತನ್ನ ಪತಿಗೆ ತೋರಿದಳು
ಚಿನ್ನತನದ ಸೊಬಗಿನ ಖಣಿಯೇ ಹೊಸ ರನ್ನ ಮುತ್ತಿನ ಬೊಂಬೆ ಜೋ ಜೋ ||೨||

ನಿಡಿತೋಳ್ಗಳ ಪಸರಿಸುತಲಿ ಗೋಪಿಯ ತೊಡೆ ಮೇಲೆ ಮಲಗಿ ಬಾಯ ತೆರೆಯೆ
ಒಡಲೊಳು ಚತುರ್ದಶಭುವನವಿರಲು ಕಂಡು ನಡುನಡುಗಿ ಕಣ್ಣ ಮುಚ್ಚಿದಳು
ತಡೆಯದೆ ಅಡಿಗಳನಿಡುತಲಿ ಬಂದು ಮಡದೇರ ಮುಖವ ನೋಡುತ ನಿಂದು
ಕಡುದಯಾಸಾಗರ ಪುರಂದರವಿಟ್ಠಲ ಬಿಡದೆ ರಕ್ಶಿಸು ಎನ ಸಲಹಬೇಕೆಂದು ಜೋ ಜೋ ||೩||

Jo jo Yashodeya Kanda 

Author : Shri Purandara Dasaru

Jo jo yashodeya kanda mukundane 
jo jo kamsa kuthari
Jo munigala hrudayamandira 
jo jo lakumiya ramana ||pa||

Hokkala hoovina taavaregaNNina ikkidda makarakundalada
Jakkarisuva kadapina suligurulina cikka bayi muddu mogada
Sokkida madakariyamdadi nosalali ikkida kasturi tilaka
Rakkasarededallana muravairiye makkala manika jo jo || 1||

Kanna belagu pasarisi noduta areganna mucci nasunaguta
Sanna beralu bayolu dhavalisuta pannagasayana natakadi
Ninna magana muddu nodenuta gopi tanna patige toridalu
Cinnatanada sobagina kaniye hosa ranna muttina bombe jo jo ||2||

Niditolgala pasarisutali gopiya tode mel malagi baya tereye
Odalolu chaturdasa Buvanaviralu kandu nadunadugi kanna muccidalu
Tadeyade adigalanidutali bandu madadera mukava noduta nindu
Kadu dayasagara purandara vithala bidade rakshisu enna salahabekendu jo jo ||3||

Listen to song here




ಏನು ಮಾಡಲೊ ಮಗನೆ / Enu maadalo magane

ಏನು ಮಾಡಲೊ ಮಗನೆ



ರಚನೆ : ಶ್ರೀ ಪುರಂದರ ದಾಸರು

ಏನು ಮಾಡಲೊ ಮಗನೆ ಯಾಕೆ ಬೆಳಗಾಯಿತೊ 
ಏನು ಮಾಡಲೊ ಕೃಷ್ಣಯ್ಯ||ಪ
ಏನು ಮಾಡಲಿ ಇನ್ನು ಮಾನಿನಿಯರು ಎನ್ನ
ಮಾನವ ಕಳೆಯುವರೊ ರಂಗಯ್ಯ||ಅ ಪ||

ಹಾಲು ಮೊಸರು ಬೆಣ್ಣೆ ಕದ್ದನೆಂಬುವರೊ
ಮೇಲಿನ ಕೆನೆಗಳ ಮೆದ್ದನೆಂಬುವರೊ
ಬಾಲಕರೆಲ್ಲರ ಬಡಿದನೆಂಬರೊ ಎಂಥ
ಕಾಳ ಹೆಂಗಸು ಇವನ ಹಡೆದಳೆಂಬುವರೊ||೧||

ಕಟ್ಟೆದ್ದ ಕರುಗಳ ಬಿಟ್ಟನೆಂತೆಂಬರೊ
ಮೆಟ್ಟೆ ಸರ್ಪನ ಮೇಲೆ ಕುಣಿದನೆಂಬುವರೊ
ಪುಟ್ಟ ಬಾಲೆಯರ ಮೋಹಿಸಿದನೆಂಬರೊ ಎಂಥ
ದುಷ್ಟ ಹೆಂಗಸು ಇವನ ಹಡೆದಳೆಂಬುವರೊ||೨||

ಗಂಗಾಜನಕ ನಿನ್ನ ಜಾರನೆಂತೆಂಬರೊ
ಶೃಂಗಾರಮುಖ ನಿನ್ನ ಬರಿದೆ ದೂರುವರೊ
ಮಂಗಳಮಹಿಮ ಶೀಪುರಂದರವಿಟ್ಠಲ
ಹಿಂಗದೆ ಎಮ್ಮನು ಸಲಹೆಂತೆಂಬರೊ||೩||

Enu maadalo magane 

Author : Shri Purandara Dasaru

Enu maadalo magane yaake belagaayito
Enu maadalo krishnayya ||pa.||
Enu maadali innu maaniniyaru enna
Maanava kaLeyuvaro rangayya ||a.pa.||

Haalu mosaru benne kaddanembuvaro
MElina kenegala meddanembuvaro
Baalakarellara baDidanembaro entha
KaaLa hengasu ivana hadedalembuvaro ||1||

Kattidda karugala bittanentembaro
Metti sarpana mele kunidanembuvaro
Putta baaleyara mohisidanembaro entha
Dushta hengasu ivana hadedalembuvaro ||2||

Gangajanaka ninna jaranentembaro
Srungaramukha ninna baride dooruvaro
Mangalamahima sri purandaraviththala
Hingade emmanu salahentembaro ||3||

Listen to song in link  below





Monday, April 19, 2021

ಬಾರೋ ಬ್ರಹ್ಮಾದಿವಂದ್ಯಾ / Baaro brahmadivandya

ಬಾರೋ ಬ್ರಹ್ಮಾದಿವಂದ್ಯಾ




ರಚನೆ : ಶ್ರೀ ಪುರಂದರ ದಾಸರು

ಬಾರೋ ಬ್ರಹ್ಮಾದಿವಂದ್ಯಾ
ಬಾರೋ ವಸುದೇವ ಕಂದ||ಪ||

ಧಿಗಿಧಿಗಿ ನೀ ಕುಣಿದಾಡುತ ಬಾರೋ ದೀನರಕ್ಷಕನೇ
ಜಗದೀಶಾ ಕುಣಿದಾಡುತ ಬಾರೋ ಚೆನ್ನಕೇಶವನೇ||೧||

ಗೊಲ್ಲರ ಮನೆಗೆ ಪೋಗಲು ಬೇಡ ಗೋವಿಂದಾ ಕೇಳೋ
ಹಾಲು ಬೆಣ್ಣೆ ಮೊಸರಿಕ್ಕುವೆ ನೀನುಣ್ಣಬಾರೋ||೨||

ದೊಡ್ಡ ದೊಡ್ಡ ಮುತ್ತಿನ ಹಾರವ ಹಾಕಿ ನೋಡುವೆ ಬಾರೋ
ದೊಡ್ಡಪುರದ ದ್ವಾರಕಿವಾಸ ಪುರಂದರವಿಟ್ಠಲ||೩||

Baaro brahmadivandya

Author : Shri Purandara Dasaru

Baaro brahmadivandya
Baaro vasudeva kanda||Pa||

Dhigidhigi ni kunidaaDuta baaro deenarakshakane
Jagadeesha kuNidaduta baaro chennakesavane||1||

Gollara manege pOgalu beDa govinda keLo
Haalu beNNe mosarikkuve neenuNNabaro||2||

Dodda dodda muttina haarava haaki noduve baro
Doddapurada dvarakivasa purandaravitthala||3||

Sunday, April 18, 2021

ಊಟಕ್ಕೆ ಬಂದೆವು ನಾವು ನಿಮ್ಮ / Utakke bandevu navu nimma

ಊಟಕ್ಕೆ ಬಂದೆವು ನಾವು ನಿಮ್ಮ

ರಚನೆ : ಶ್ರೀ ಪುರಂದರ ದಾಸರು

ಊಟಕ್ಕೆ ಬಂದೆವು ನಾವು ನಿಮ್ಮ
ಆಟ ಪಾಠವ ಬಿಟ್ಟು ಅಡುಗೆ ಮಾಡಮ್ಮ ||ಪ||

ಕತ್ತಲಿಟ್ಟಾವಮ್ಮ ಕಣ್ಣು ಬಾಯಿ
ಬತ್ತಿ ಬರುತಲಿದೆ ಕೈಕಾಲು ಝುಮ್ಮ
ಹೊತ್ತ ಹೋಗಿಸಬೇಡವಮ್ಮ
ಒಂದು ತುತ್ತಾದರು ಇತ್ತು ಸಲಹು ನಮ್ಮಮ್ಮ ।।೧।।

ಒಡಲೊಳಗೆ ಉಸಿರಿಲ್ಲ ಒಂದು
ಕ್ಷಣವಾದರೆ ಜೀವ ನಿಲ್ಲುವುದಿಲ್ಲ
ಮಡಿದರೆ ದೋಷ ತಟ್ಟುವುದು ಒಂದು
ಹಿಡಿ ಅಕ್ಕಿಯಿಂದಲೆ ಕೀರ್ತಿ ಬಾಹೋದು ।।೨।।

ಹೊನ್ನರಾಶಿಯ ತಂದು ಸುರಿಯೆ ಕೋಟಿ
ಕನ್ನಿಕೆಯರ ತಂದು ಧಾರೆಯನೆರೆಯೆ
ಅನ್ನದಾನಕ್ಕಿನ್ನು ಸರಿಯೆ ಪ್ರ
ಸನ್ನ ಪುರಂದರ ವಿಠಲ ದೊರೆಯೆ ।।೩।।

Utakke bandevu navu nimma

Author : Shri Purandara Dasaru


Utakke bandevu navu nimma 
ata patava bittu aduge madamma ||pa||

Kattalittavamma kannu bayi
Batti barutalide kaikalu Jumma
Hotta hogisabedavamma
Ondu tuttadaru ittu salahu nammamma ||1||

Odalolage usirilla ondu
Kshanavadare jiva nilluvudilla
Madidare dosha tattuvudu ondu
Hidi akkiyindale kirti bahodu ||2||

Honnarasiya tandu suriye koti
Kannikeyara tandu dhareyanereye
Annadanakkinnu sariye pra
Sanna purandaravithala doreye ||3||