Pages

Saturday, July 18, 2020

ತಟಿತ್ಕ್ಯೋಟಿ ನಿಭಕಾಯ ಜಗನ್ನಾಥ ವಿಠ್ಠಲಯ್ಯ / tatithkoti nibhakaaya jagannatha vithalayya



ರಚನೆ : ಶ್ರೀ ಜಗನ್ನಾಥ ದಾಸರು

ತಟಿತ್ಯೋಟಿ ನಿಭಕಾಯ ಜಗನ್ನಾಥ ವಿಠ್ಠಲಯ್ಯ ವಿಠ್ಠಲಯ್ಯ ||ಪ||

ಭಜಿಸುವೆ ನಿನ್ನನು ಅಜ ಭವ ಸುರನುತ
ಭಜಕರಮರತರು ಕುಜನ ಕುಠಾರಾ ||೧||

ನೀ ಕರುಣಿಸದೆ ನಿರಾಕರಿಸಲು ಎನ್ನ
ಸಾಕುವರಾರೊ ದಯಾಕರ ಮೂರುತಿ ||೨||

ಶರಣಾಗತರನು ಪೊರವೆನೆಂಬ ತವ
ಬಿರುದ ಕಾಯೊ ಕರಿವರದ ಜಗನ್ನಾಥ ವಿಠ್ಠಲಯ್ಯ ವಿಠ್ಠಲಯ್ಯ ||೩||

Author : Shri Jagannatha Dasaru

tatithkoti nibhakaaya jagannatha vithalayya vithalayya||pa|| 

bhajisuve ninnanu aja bhava suranuta 
bhaja kamaratharu kujana kuthara||1||

ni karunisade niraakarisalu enna 
sakuvaryaru dayaapara muruti||2|| 

sharanagataranu porevanemba tava 
birudu kayo karivara jagannatha vithalayya vithalayya||3||

Listen to song by Jaytirth Mevundi





Sunday, July 5, 2020

ಐದು ಕಾಲಿನ ಮಂಚ ಕುಂಟ ಮಲಗಿದ್ದಾ/ aidu kalina mancha tunta malagidda

ರಚನೆ : ಶ್ರೀ ಬನ್ನಂಜೆ ಗೋವಿಂದಾಚಾರ್ 

ಐದು ಕಾಲಿನ ಮಂಚ ತುಂಟ ಮಲಗಿದ್ದಾ,
ಮೂರು ದಂಟೆಗಳನ್ನು ಬಗಲಿಗಿಲಿಸಿತ್ತಾ.

ಇದ್ದೈದು ಕಾಲಿಗೂ ಕೈಕಾಲು ಬಂತು,
ತುಂಟ ಮಲಗಿದ್ದಂತೆ ಮನ್ಚ ಧಾವಿಸಿತು.

ಆರು ಜನ ದಾಂಡಿಗರು ಕೈಹಿಡಿದರೆಲೆದು,
ಜಾರಿ ಬಿದ್ದನೊ ಕುಂತ ಪಕ್ಕೆಲುಬು ಮುರಿದು.

ಏಳೈಯ್ಯ ಕುಂತೈಯ್ಯ ದಂಟೆಹಿಡಿದೇಳು,
ಕೋಳಿ ಹಾಡುವ ಸುಪ್ರಭಾತವನು ಕೇಳು.

ಈ ಐದು ಈ ಆರು ಈ ಮೂರು ಸಾಕು,
ಹದಿನೆಂಟು ಬೆಕೊ ಬಿಡಬೇಕು ಹದಿನಾಲ್ಕು.

Author : Shri Bannanje Govindachar

aidu kalina mancha tunta malagidda
mooru dantegalanu bagaligiLisidda

iddaidu kaligU kaikaalu bantu
tunta malagiddante mancha dhavisitu

aru jana dandigaru kaihididareLedu
jaari biddeno kunta pakkelelubu muridu

eLaiyya kuntaiyya dante hiDideLu
koLi haaduva suprabhaatavanu keLu

ee aidu ee aaru ee muru saaku
hadinentu beko bidabeku hadinaalku

Pada grahana

aidu kalina mancha : panchendriya galu
mooru dante galu - gnyaana bhakti vairagya
aru jana dandigaru - arishagvarga gaLu
hadinentu beko - hadinentu upnishattu gaLa adhyayana

Listen to song by Shri Vidyabhushana



ಆವ ಸಿರಿಯಲಿ ನೀನು ಎನ್ನ ಮರೆತೆ / Ava Siriyali Neenu Enna Marete



ರಚನೆ :ಶ್ರೀ ಕನಕದಾಸರು

ಆವ ಸಿರಿಯಲಿ ನೀನು ಎನ್ನ ಮರೆತೆ ?
ದೇವ ಜಾನಕಿರಮಣ ಪೇಳು ರಘುಪತಿಯೆ ? ।।ಪ।।

ಸುರರ ಸೆರೆಯನು ಬಿಡಿಸಿ ಬಂದನೆಂಬಾ ಸಿರಿಯೆ
ಕರಿ ಮೊರೆಯ ಲಾಲಿಸಿದೆನೆಂಬ ಸಿರಿಯೆ ?
ಶರಧಿ ಸೇತುವೆಯ ಕಟ್ಟಿದೆನೆನ್ನುವಾ ಸಿರಿಯೆ
ಸ್ಥಿರವಾಗಿ ಹೇಳೆನಗೆ ಹೇಳು ರಘುಪತಿಯೆ ।।೧।।

ಕಡಲೊಳಗೆ ಮನೆ ಮಾಡಿ ಮಲಗಿದೆನೆಂಬಾ ಸಿರಿಯೆ
ಮೃಡ ನಿನ್ನ ಸಖನಾದನೆಂಬ ಸಿರಿಯೆ ?
ಬಿಡದೆ ದ್ರೌಪದಿ ಮಾನ ಕಾಯ್ದನೆಂಬ ಸಿರಿಯೆ
ದೃಢವಾಗಿ ಹೇಳೆನಗೆ ದೇವಕೀಸುತನೆ ।।೨।।

ಭೂಮಿಯನು ಮೂರಡಿಯ ಮಾಡಿದೆನೆಂಬ ಸಿರಿಯೆ
ಕಾಮ ನಿನ್ನ ಸುತನಾದನೆಂಬ ಸಿರಿಯೆ
ಆ ಮಹಾಲಕುಮಿ ನಿನ್ನ ಸತಿಯಾದಳೆಂಬ ಸಿರಿಯೆ
ಪ್ರೇಮದಲಿ ಹೇಳೆನಗೆ ಸ್ವಾಮಿ ಅಚ್ಯುತನೆ ।।೩।।

ಮನುಜರೆಲ್ಲರು ನಿನ್ನ ಸ್ತುತಿಸುವರೆಂಬ ಸಿರಿಯೆ
ಹನುಮ ನಿನ್ನ ಬಂಟನಾದೆನೆಂಬ ಸಿರಿಯೆ
ಬಿನುಗುದೈವಗಳು ನಿನಗೆಣೆಯಿಲ್ಲವೆಂಬ ಸಿರಿಯೆ
ಅನುಮಾನ ಮಾಡದೆ ಪೇಳೋ ನರಹರಿಯೆ ।।೪।।

ಇಂತು ಸಿರಿಯಲಿ ನೀನು ಎನ್ನ ಮರೆತರೆ ಸ್ವಾಮಿ
ಪಂಥವೇ ನಿನಗಿದು ಆವಾ ನಡತೆ
ಕಂತುಪಿತ ಕಾಗಿನೆಲೆಯಾದಿಕೇಶವ ರಂಗ
ಚಿಂತೆಯನು ಬಿಡಿಸಿ ಸಂತೋಷಪಡಿಸೊ ।।೫।।

Author : Shri Kanakadasaru

Ava siriyali neenu enna marete 
dEva jAnakIraMaNa pELu raghupatiye ।।pa।।

surara sareyanu biDisi bandanembA siriyE 
kari moreya lAlisidenemba siriyE
sharadhi sEtiveya gaTTidenennuva siriyE 
sthiravAgi hELanage hELu raghupatiyE ।।1।।

kaDaloLage mane mADi malagidenembA siriyE 
mrDha ninna sakhanAdanemba siriyE
biDaede draupadi mAna kAidanemba siriyE 
drDhavAgi hELanage dEvakI sutanE ।।2।।

bhUmiyenu mUraDiya mADidanemba siriyE 
kAma ninna sutanAdanemba siriyE
A mahA lakumi ninna stiyAdaLembe siriyE 
prEmadali hELanage svAmi achyutanE ।।3।।

manujarellaru ninna stutisuavaremba siriyE 
hanuma ninna baNTanAdanembe siriyE
binugu deivagaLu ninageNevillavemba siriye 
anumAna mADade pELO narahariyE ।।4।।
intu siriyali nIna maretare svAmi 
panthavE ninagidu Ava naDate
kantupita kAganeleyAdi kEshava ranga 
chinteyanu biDisi santOSavanu paDiso ।।5।।

Listen to song by Late Shri Mysore Anantaswamy


Listen to song by Sthuthi Bhat MS


Listen to song by Shri Snehaja Praveen


ಆವ ಕುಲವು ತಿಳಿಯಲಾಗದು / Ava kulavu tiLiyalAgadu shrihariye


ರಚನೆ : ಶ್ರೀ ಪುರಂದರ ದಾಸರು 

ಆವ ಕುಲವು ತಿಳಿಯಲಾಗದು ಶ್ರಿಹರಿಯೆ।।ಪ ।।

ಕಡಲಮಗಳ ಕಂದನಂತೆ, ಅಡವಿಯೊಳಗೆ ಮಡದಿಯಂತೆ,
ಕೊಡವಿಗೆ ತಾನು ಒಡೆಯನಂತೆ, ಕೊಡೆಯ ಪಿಡಿದು ಬೇಡಿದನಂತೆ।।೧ ।।

ರಕ್ಕಸರಲ್ಲಿ ಕಾಳಗವಂತೆ, ಮರ್ಕಟರೆಲ್ಲ ಬಂಟರಂತೆ,
ಪಕ್ಷಿಯನೇರಿ ಮೆರೆದನಂತೆ, ಮುಕ್ಕಣ್ಣೆಶ್ವರ ಮೊಮ್ಮಗನಂತೆ. ।।೨।।

ವಿದ್ಯೆಯಲ್ಲಿ ಪ್ರೌಢನಂತೆ, ಯುದ್ಧದಲ್ಲಿ ಶೂರನಂತೆ,
ಮುದ್ದು ಪುರಂದರವಿಠ್ಠಲ ನಂತೆ, ಬೇಲೂರ ಚೆನ್ನಿಗನಂತೆ।।೩ ।।

Author : Shree Purandara Dasaru

Ava kulavu tiLiyalAgadu shrihariye ||pa||

kaDala magaLa kaNDanante aDaviyoLage maDadiyante
koDavige tAnoDeyanante koDeya piDidu bEDidanante ||1||

rakkasaralli kALagavante markaTarella baNTarante
pakSiyanEri meredanante mukkaNNEshvara mommaganante ||2||

vidyeyalli prauDhanante yuddhadalli shUranante
muddu purandara viTTalanente bElUra chenniganante ||3||

ಆರು ವಂದಿಸಲೇನು / Aru Vandisalenu Aru Nindisalenu




ರಚನೆ : ಶ್ರೀ ಜಗನ್ನಾಥ ದಾಸರು 


ಆರು ವಂದಿಸಲೇನು, ಆರು ನಿಂದಿಸಲೇನು, ಆರು ಶಾಪಿಸಲೇನು, ಕೋಪಿಸಲೇನು
ಆರು ಮುನಿದು ಮಾತನಾಡದಿದ್ದರೆ ಏನು
ಮಾರುತಾಂತರ್ಯಾಮಿ ಜಗನ್ನಾಥವಿಠ್ಠಲನ ಕಾರುಣ್ಯಪಾತ್ರರ 
ಕರುಣ ಯೆನ್ನೊಳಗಿರೆ! ಆರು ವಂದಿಸಲೇನು, ಆರು ನಿಂದಿಸಲೇನು.

Author : Shri Jagannatha Dasaru

aru vandisalenu aru nindisalenu aru shapisalenu kOpisalenu 
aru munidu maataanaaDadiddare enu
maarutaantaryaami jagannathavittalana karunya paatrara 
karuNa yennoLagire aaru vandisalenu aru nindisalenu



Listen to song by Vidwan M V Sreenivasa



Friday, July 3, 2020

ಆರು ಬದುಕಿದರಯ್ಯ ಹರಿ ನಿನ್ನ ನಂಬಿ / Aru badukidarayya hari ninna nambi



ರಚನೆ : ಶ್ರೀ ಪುರಂದರ ದಾಸರು 

ಆರು ಬದುಕಿದರಯ್ಯ ಹರಿ ನಿನ್ನ ನಂಬಿ
ತೋರು ಈ ಜಗದೊಳಗೆ ಒಬ್ಬರನು ಕಾಣೆ||pa||

ಕರಪತ್ರದಿಂದ ತಾಮ್ರಧ್ವಜನ ತಂದೆಯ
ಕೊರಳ ಕೊಯಿಸಿದೆ ನೀನು ಕುಂದಿಲ್ಲದೆ
ಮರುಳನಂದದಿ ಪೋಗಿ ಭೃಗುಮುನಿಯ ಕಣ್ಣೊಡೆದೆ
ಅರಿತು ತ್ರಿಪುರಾಸುರನ ಹೆಂಡಿರನು ಬೆರೆದೆ||೧||

ಕಲಹ ಬಾರದ ಮುನ್ನ ಕರ್ಣನನು ನೀ ಕೊಂದೆ
ಸುಲಭದಲಿ ಕೌರವರ ಮನೆಯ ಮುರಿದೆ
ನೆಲವ ಬೇಡುತ ಹೋಗಿ ಬಲಿಯ ತನುವನು ತುಳಿದೆ
ಮೊಲೆಯನುಣಿಸಲು ಬಂದ ಪೂತನಿಯ ಕೊಂದೆ||೨||

ತಿರಿದುಂಬ ದಾಸರ ಕೈಲಿ ಕಪ್ಪವ ಕೊಂಬೆ
ಗರುಡವಾಹನ ನಿನ್ನ ಚರಿಯವರಿಯೆ
ದೊರೆ ಪುರಂದರವಿಠಲ ನಿನ್ನನ್ನು ನಂಬಿದರೆ
ತಿರುಪೆಯೂ ಹುಟ್ಟಲೊಲ್ಲದು ಕೇಳೊ ಹರಿಯೆ||೩||

Author : Shri Purandaradasaru

Aru badukidarayya hari ninna nambi
Toru I jagadolage obbaranu kane||pa||

Karapatradinda tamradhvajana tandeya
Korala koyiside ninu kumdillade
Marulanamdadi pogi brugumuniya kannodede
Aritu tripurasurana hendiranu berede||1||

Kalaha barada munna karnananu ni konde
Sulabadali kauravara maneya muride
Nelava beduta hogi baliya tanuvanu tulide
Moleyanunisalu banda putaniya konde||2||

Tiridumba dasara kaili kappava kombe
Garudavahana ninna cariyavariye
Dore purandaravithala ninnannu nambidare
Tirupeyu huttalolladu kelo hariye||3||

Listen to song by Shridhar Hegde


Listen to song by Shri M Balamuralikrishna

ಆರಿಗಾರೋ ಕ್ರಿಷ್ಣ / Aarigaaro Krishna


ರಚನೆ : ಶ್ರೀ ವಾದಿರಾಜರು 

ಆರಿಗಾರೋ ಕ್ರಿಷ್ಣ, ಶೂರಕುಮಾರನೆ ।।ಪ।।

ಆರಿಗಾರೋ ನಿನ್ನ ಪೊರತು ಪೊರೆವರೆನ್ನ
ಮಾನ ಜನಕ, ಅಕ್ರೂರವರದಾ ಪೊರೆ ।।೧।।

ಸತಿಸುತರ್ ಹಿತರೆನೋ ಮತಿ ಭ್ರಾಂತಿ ಪಡಿಸುವರೂ
ಗತಿಯಾವು ಎನಗಿಂದು ಗರುಡಗಮನನೆ ಬಾ ।।೨।।

ಆಶಾ-ಪಾಶಗೆ ಸಿಲುಕಿ ಗಾಸೀ ಪಟ್ಟೆನು ಬಹಳ
ವಾಸುದೇವನೆ ನಿನ್ನಾ ದಾಸನೆಂದೆನಿಸಿದಾ ।।೩।।

ಮಾಯ ಮಡುವಿನೊಳ್ ಮುಳುಗಿ ಗಾಯವಾಂತೆನು ಕಾಯ
ಉಪಾಯ ಯಾವುದು ಮುಂದೆ ರಾಯಶ್ರಿಹಯವದನ ।।೪।।

Author : Shri Vadirajaru

arigaaro krishna shoora kumarane  ।।pa।।

arigaaro ninna poretu porevanenna 
maana janaka akrooravarada pore ।।1।।

satisutar hitareno mati bhranti padisuvarU 
gatiyaavu yenagindu garudagamanane baa ।।2।।

aashapaashage siluki gasE pattenu bahaLa 
vasudevane ninna daasanendenisidaa ।।3।।

maaya maDuninoL muLugi gayavaantenu kaaya
upaya yaavudu munde rayashrihayavadana ।।4।।


ಆರಂಭದಲಿ ನಮಿಪೆ ಬಾಗಿಶಿರವ / Arambhadali namipe baagishirava



ಅಂಕಿತ : ಶ್ರೀ ಶ್ಯಾಮಸುಂದರ ಸ್ವಾಮಿ 

ಆರಂಭದಲಿ ನಮಿಪೆ ಬಾಗಿಶಿರವ
ಹೆರಮ್ಬ ನೀನೊಲಿದು ನೀಡೆಮಗೆ ವರವ || ಪ ||

ದ್ವಿರದವದನನೆ ನಿರುತ ದ್ವಿರದವಂದ್ಯನ ಮಹಿಮೆ
ಹರುಶದಿಂದಲಿ ಜಿಹ್ವೆ ಕರ ಎರಡರಿಂದ
ಬರೆದು ಪಾಡುವುದಕ್ಕೆ ಬರುವ ವಿಗ್ಘ್ನವ ತರಿದು
ಕರುಣದಿಂದಲಿ ಯೆನ್ನ ಕರ ಪಿಡಿದು ಸಲಹೆಂದು || ೧ ||

ಕುಂಭಿಣಿಗೆ ಪತಿರಾಮ ಜಂಭಾರಿ ಧರ್ಮಜರು
ಅಂಬರಾಧಿಪರಕುತ ಅಂಬರನೆ ನಿನ್ನ
ಸಂಭ್ರಮದಿ ಪೂಜಿಸಿದರೆಂಬ ವಾರುತಿ ಕೇಳಿ
ಹಂಬಲವ ಸಲಿಸೆಂದು ನಂಬಿ ನಿನ್ನಡಿಗಳಿಗೆ || ೨ ||

ಸೋಮ ಶಾಪದ ವಿಚಿತ ಕಾಮಕಾಮಿತದಾತ
ವಾಮದೇವತನಯಾ ನೇಮದಿಂದಾ
ಶ್ರಿ ಮನೋಹರನಾದ ಶ್ಯಾಮಸುಂದರ ಸ್ವಾಮಿ
ನಾಮ ನೆನೆಯುವ ಭಾಗ್ಯ ಪ್ರೇಮದಲಿ ಕೊಡು ಎಂದು || ೩ ||

Signature : Shyamasundara Swamy

Arambhadali namipe baagishirava
hEramba neenoLidu neeDenage varava ||PA||

dvirada vadanane dvirada vandyana mahime
harushadali kara jihve eraDarinda
baredu pADuvudakke baruva vighnava taridu
karuNadindali enna karapiDidu salahendu ||1||
kumbiNijipatirAma jambAri dharmajaru
ambarAdiparakut Ambarane ninna
sambhramadi pUjisidaremba vAruti kELi
hambalava salisendu nambi ninnaDigaLige ||2||

sOmashApada vichita kAmakAmitadAta
vAmadEvatanaya nEmadindA
shri manOharanAda shyAmasundaraswAmi
nAmaneneyuva bhAgya premadali koDu endu ||3||

Listen to song by Shri Vidyabhushana


Thursday, July 2, 2020

ಆಂಜನೇಯನೆ ಅಮರ ವಂದಿತ / AanjanEyanE amaravandita


ರಚನೆ : ಶ್ರೀ ವಾದಿರಾಜರು 

ಆಂಜನೇಯನೆ ಅಮರ ವಂದಿತ ಕಂಜನಾಭನ ದೂತನೆ || ಪ ||
ಮಂಜಿನೋಲಗದಂತೆ ಶರಧಿಯ ದಾಟಿದ ಮಹಾ ಧೀರನೆ || ಅ.ಪ ||

ಆಂಜನೇಯನೆ ನಿನ್ನ ಗುಣಗಳ ಪೊಗಳಲಳವೆ ಪ್ರಖ್ಯಾತನೆ
ಸಂಜೀವನವ ತಂದು ಕಪಿಗಳ ನಂಜು ಕಳೆದ ಪ್ರಖ್ಯಾತನೆ || ೧ ||

ಕಾಮನಿಗ್ರಹನೆನಿಸಿ ಸುರರಭಿಮಾನಿ ದೇವತೆ ಎನಿಸಿದೆ
ರಾಮಪಾದಕ್ಕೆರಗಿ ನಡೆದು ನಿಸ್ಸೀಮ ನೀನೆಂದೆನಿಸಿದೆ || ೨ ||

ಸಿಂಧು ಹಾರಿದೆ ಶ್ರೀಘ್ರದಿಂದಲಿ ಬಂದು ಸೀತೆಗೆ ನಮಿಸಿದೆ
ತಂದು ಮುದ್ರೆಯನಿತ್ತು ಮಾತೆಯ ಮನವ ಸಂತೋಷ ಪಡಿಸಿದೆ || ೩ ||

ಜನಕ ತನುಜೆಯ ಮನವ ಹರುಷಿಸಿ ವನವ ತಿದ್ತೀಡಾಡಿದೆ
ದನುಜರನ್ನು ಸದೆದು ಲಂಕೆಯ ಅನಲಾಗುಹುತಿ ಮಾಡಿದೆ || ೪ ||

ರಾಮಕಾರ್ಯವ ವಹಿಸಿ ಅಕ್ಷಕುಮಾರನನು ಸಂಹರಿಸಿದೆ
ಘೋರ ರಕ್ಕಸರೆಂಬುವರನು ಮಾರಿವಶವನು ಗೈಸಿದೆ || ೫ ||

ಭರದಿ ಬಂದು ರಾಮಪಾದಕ್ಕೆರಗಿ ಬಿನ್ನಹ ಮಾಡಿದೆ
ಉರಗಗಿರಿ ಹಯವದನನ ಪರಮ ಭಕ್ತನೆಂದೆನಿಸಿದೆ || ೬ ||

Author : Shree Vadirajaru

AanjanEyanE amaravandita kamjanaAbhAna DhutanE ||PA||
SaMjiviniyanu tamdu kapigala namju kalEda prakyAtanE ||A PA||

anjanEyane ninna guNagaLa pogaLalaLave prakhyaatane
sanjeevanava tandu kapigaLa nanju kaLeda prakhyaatane ||1||

KaamanigrahanEnisi surarabhimaAnya dEvatE eniside|
RamapaadakKeragi nadEdu nisseema ninEndaniside ||2||

sindhu haaride sheeghradindali bamdu seetegE namisidE |
tamdu mudrikeyittu maatEgE amdu santhoshabadisidE ||3||

janakatanujeya manava harushisi vanava kittidaadidE |
dhanujarannu sadEdu lamkayananalagaahuti maadide ||4||

sriramakaAryava vahisi akshakumarananu samhariside
gHora rakkasrEmbuvaranu maArivashavanu ghaiside ||5||

bHaradi bamdu sriramapaAdakKeragi binnaha maadide |
uragagiri hayavadanana paramabhakta nee nEndEnisidE ||6||

Listen to song by Shri Vidyabhushana




ಆನಂದಮುಕುಂದ ಅರವಿಂದ ನಯನಾ / Ananda mukunda aravinda nayana


ರಚನೆ : ಶ್ರೀ ಮಧ್ವಾಚಾರ್ಯರು 

ಆನಂದ ಮುಕುಂದ ಅರವಿಂದ ನಯನ |
ಆನಂದತೀರ್ಥ ಪರಾನಂದ ವರದ || ೧ ||

ಸುಂದರಿ ಮಂದಿರ ಗೋವಿಂದ ವಂದೇ |
ಆನಂದತೀರ್ಥ ಪರಾನಂದ ವರದ || ೨ ||

ಚಂದ್ರಕ ಮಂದಿರ ನಂದಕ ವಂದೇ |
ಆನಂದತೀರ್ಥ ಪರಾನಂದ ವರದ || ೩ ||

ಚಂದ್ರ ಸುರೇಂದ್ರ ಸುವಂದಿತ ವಂದೇ |
ಆನಂದತೀರ್ಥ ಪರಾನಂದ ವರದ || ೪ ||

ಮಂದಾರ ಸ್ಯಂದಕ ಸ್ಯಂದನ ವಂದೇ |
ಆನಂದತೀರ್ಥ ಪರಾನಂದ ವರದ || ೫ ||

ವೃಂದಾರಕ ವೃಂದ ಸುವಂದಿತ ವಂದೇ |
ಆನಂದತೀರ್ಥ ಪರಾನಂದ ವರದ || ೬ ||

ಮಂದಾರ ಸ್ಯಂದಿತ ಮಂದಿರ ವಂದೇ |
ಆನಂದತೀರ್ಥ ಪರಾನಂದ ವರದ || ೭ ||

ಮಂದಿರ ಸ್ಯಂದನ ಸ್ಯಂದಕ ವಂದೇ |
ಆನಂದತೀರ್ಥ ಪರಾನಂದ ವರದ || ೮ ||

ಇಂದಿರಾ ನಂದಕ ಸುಂದರ ವಂದೇ |
ಆನಂದತೀರ್ಥ ಪರಾನಂದ ವರದ || ೯ ||

ಆನಂದ ಚಂದ್ರಿಕಾ ಸ್ಪಂದನ ವಂದೇ |
ಆನಂದತೀರ್ಥ ಪರಾನಂದ ವರದ || ೧೦ ||

Author : Shree Madhwacharya

Ananda mukunda aravinda nayana |
AnandatIrtha parAnanda varada || 1 ||

sundari mandira gOvinda vande |
AnandatIrtha parAnanda varada || 2 ||

chandraka mandira nandaka vande |
AnandatIrtha parAnanda varada || 3 ||

chandra surEndra suvandita vande |
AnandatIrtha parAnanda varada || 4 ||

mandAra syandaka syandana vande |
AnandatIrtha parAnanda varada || 5 ||

vRundAraka vRunda suvandita vande |
AnandatIrtha parAnanda varada || 6 ||

mandAra syandita mandira vande |
AnandatIrtha parAnanda varada || 7 ||

mandira syandana syandaka vande |
AnandatIrtha parAnanda varada || 8 ||

indirA nandaka sundara vande |
AnandatIrtha parAnanda varada || 9 ||

Ananda chandrikA spandana vande |
AnandatIrtha parAnanda varada || 10 ||

Listen to song by Naada-Ninaada



Listen to song by Vageesh Bhat


Listen to song by Shri Vishweswara Bhat


ಆದದ್ದೆಲ್ಲ ವೊಳಿತೆ ಆಯಿತು / aadaddella oLithE aayithu




ರಚನೆ : ಶ್ರೀ ಪುರಂದರ ದಾಸರು

ಆದದ್ದೆಲ್ಲ ವೊಳಿತೆ ಆಯಿತು
ಆದದ್ದೆಲ್ಲ ವೊಳಿತೆ ಆಯಿತು ||ಪ||
ನಮ್ಮ ಶ್ರಿಧರನ ಸೆವೆಗೆ
ಸಾಧನ ಸಂಪತ್ತಾಯಿತು ||ಅ ಪ ||

ದಂಡಿಗೆ ಬೆತ್ತ ಹಿಡಿಯುವುದಕ್ಕೆ
ಮಂಡೆಬಾಗಿಂ ಆಚುತಲಿದ್ದೆ
ಹೆಂಡತಿ ಸಂತತಿ ಸಾವಿರವಾಗಲಿ
ದಂಡಿಗೆ ಬೆತ್ತ ಹಿಡಿಸಿದಳೈಯ್ಯ ||೧||

ಗೋಪಾಲ ಬುಟ್ಟಿ ಹಿಡಿಯುವುದಕ್ಕೆ
ಭೂಪತಿಯೆಂದು ಗರುವಿಸುತಿದ್ದೆ
ಆ ಪತ್ನೀಕುಲ ಸಾವಿರವಾಗಲಿ
ಗೋಪಾಲ ಬುಟ್ಟಿ ಹಿಡಿಸಿದಲೈಯ್ಯ ||೨||

ತುಳಸೀಮಾಲೇ ಹಾಕುವುದಕ್ಕೆ
ಅರಸನೆಂದು ತಿರುಗುತಲಿದ್ದೆ
ಸರಸಿಜಾಕ್ಷ ಪುರಂದರವಿಠ್ಠಲನು
ತುಳಸಿಮಾಲೆ ಹಾಕಿಸಿದನಯ್ಯ ||೩||


Author : Shree Purandara Dasaru

aadaddella oLithE aayithu
aadaddella oLithE aayithu ||pa||
namma Sreedharana sEvege
saadhana sampaththaayithu||a pa||

danDige beththa hiDiyuvudakke
manDe maachi naachuthalidde
henDathhi santhathi saaviravaagali
danDige beththa hiDisidaLayya ||1||

gopaLa butti hiDiyuvudakke
bhoopathiyanthe garvisuthidde
aa patni kula saviravaagali
gopala butti hidisidalayya ||2||

thuLasee maleya haakuvudakke
arasannendu tirugutalidde
sarasijaaksha Sree purandara viThalanu
thuLasee maleya haakidanayya ||3||

Listen to song by Shri Vidyabhushana


Listen to song by Balachandra Udupa


Listen to song adapted in Kannada cinema Navakoti Narayana - sung by M Balamurali Krishna

 

ಆಚಾರವಿಲ್ಲದ ನಾಲಿಗೆ / AchAravillada naalige


ರಚನೆ : ಶ್ರೀ ಪುರಂದರ ದಾಸರು 

ಆಚಾರವಿಲ್ಲದ ನಾಲಿಗೆ
ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ ||ಪ||

ವಿಚಾರವಿಲ್ಲದೆ ಪರರ ದೂಶಿಪುದಕ್ಕೆ
ಚಾಚಿಕೊಂಡಿರುವಂಥ ನಾಲಿಗೆ ||ಅ ಪ ||

ಫ್ರಾತಃ ಕಾಲದೊಳ್ ಯೆದ್ದು ನಾಲಿಗೆ
ಸಿರಿಪತಿಯೆನ್ನ ಬಾರದೆ ನಾಲಿಗೆ
ಪತಿತಪಾವನ ನಮ್ಮ ರತಿಪತಿ ಜನಕನ
ಸತತವು ನುಡಿಕಂಡ್ಯ ನಾಲಿಗೆ || ೧||

ಛಾಡೀ ಹೇಳಲಿ ಬೆಡ ನಾಲಿಗೆ
ನಿನ್ನ ಬೆಡಿ ಕೊಂಬುವೆನು ನಾಲಿಗೆ
ರೂಡೀಗೊಡಯ ಶ್ರಿರಾಮನ ನಾಮವ
ಪಾಡುತ್ತಾ ಇರುಕಂಡ್ಯ ನಾಲಿಗೆ ||೨||

ಹರಿಯ ಸ್ಮರಣೆ ಮಾಡು ನಾಲಿಗೆ
ನರಹರಿಯ ಭಜಿಸುಕಂಡ್ಯ ನಾಲಿಗೆ
ವರದಪುರಂದರ ವಿಠ್ಠಲ ರಾಯನ
ಚರಣ ಕಮಲ ನೆನೆ ನಾಲಿಗೆ||೩||

Author : Shree Purandara Dasaru

AchAravillada naalige
ninna nicha buddhiya biDu naalige ||pa||

vicharavillade parara dUshiipudakke
chaci koNdiruvantha naalige ||a pa||

prAtakkAladoLeddu naalige
siri patiyenna bArade naalige .
patita pAvana namma rajapati janakana
satatavu nuDi kaNDya naalige ||1||

chADi helalu beDa naalige ninna
bEDikombuvenu naalige
RudhigoDeya shrI rAmana nAmava
pADutaliru kaNDya naalige ||2||

hari smaraNe mADu naalige
narahariya bhajisu kaNDya naalige
varada purandara viTTala rAyana
charaNa kamala nene naalige ||3||

Listen to song by Shri Vidyabhushana

Listen to song by Shri Puttur Narasimha Nayak


Listen to song by Dr RajKumar


Listen to song by Mrs Snehaja