ಈ ಪರಿಯ ಸೊಬಗಾವ ದೇವರಲಿ ಕಾಣೆ
ರಚನೆ : ಶ್ರೀ ಪುರಂದರ ದಾಸರು
ಈ ಪರಿಯ ಸೊಬಗಾವ ದೇವರಲಿ ಕಾಣೆ ।।ಪ।।ಗೋಪೀಜನಪ್ರಿಯ ಗೋಪಾಲಗಲ್ಲದೆ ।।ಅ.ಪ।।
ದೊರೆಯತನದಲ್ಲಿ ನೋಡೆ ಧರಣಿದೇವಿಗೆ ರಮಣ
ಸಿರಿಯತನದಲಿ ನೋಡೆ ಶ್ರೀಕಾಂತನು
ಹಿರಿಯತನದಲಿ ನೋಡೆ ಸರಸಿಜೋದ್ಭವನಯ್ಯ
ಗುರುವುತನದಲಿ ನೋಡೆ ಜಗದಾದಿಗುರುವು ।।೧।।
ಪಾವನತ್ವದಿ ನೋಡೆ ಅಮರಗಂಗಾಜನಕ
ದೇವತ್ವದಲಿ ನೋಡೆ ದಿವಿಜರೊಡೆಯ
ಲಾವಣ್ಯದಲಿ ನೋಡೆ ಲೋಕಮೋಹಕನಯ್ಯ
ಆವಾ ಧೈರ್ಯದಿ ನೋಡೆ ಲೋಕಮೋಹಕನಯ್ಯ ।।೨।।
ಗಗನದಲಿ ಸಂಚರಿಪ ಗರುಡದೇವನೆ ತುರುಗ
ಜಗತೀಧರ ಶೇಷ ಪರಿಯಂಕ ಶಯನ
ನಿಗಮಗೋಚರ ಪುರಂದರವಿಠಲಗಲ್ಲದೆ
ಮಿಗಿಲಾದ ದೈವಗಳಿಗೀ ಭಾಗ್ಯವುಂಟೆ ।।೩।।
Ee pariya sobagava devarali kane
Author : Shri Purandara Dasaru
Gopijanapriya gopalagallade ||a.pa||
Doreyatanadalli node dharanidevige ramana
Siriyatanadali node srikantanu
Hiriyatanadali node sarasijodbavanayya
Guruvutanadali node jagaadadiguruvu ||1||
Pavanatvadi node amaragangajanaka
Devatvadali node divijarodeya
Lavanyadali node lokamohakanayya
Ava dhairyadi node lokamohakanayya ||2||
Gaganadali sancharipa garudadevane turuga
Jagatidhara sesha pariyanka Sayana
Nigamagochara purandaravithalagallade
Migilada daivagaligi bhagyavunte ||3||