Pages

Showing posts with label Dasara Pada. Show all posts
Showing posts with label Dasara Pada. Show all posts

Wednesday, August 12, 2020

ನರಜನ್ಮ ಬಂದಾಗ ನಾಲಿಗೆ ಇರುವಾಗ ಕೃಷ್ಣ ಎನಬಾರದೆ / narajanma bandAga nAlige iruvAga kriShNA ena bAraDe


ರಚನೆ : ಶ್ರೀ ಪುರಂದರ ದಾಸರು 

ಕೃಷ್ಣ ಎನಬಾರದೆ ಕೃಷ್ಣನ ನೆನೆದರೆ ಕಷ್ಟ ಒಂದಿಷ್ಟಿಲ್ಲ ||ಪ||
ನರಜನ್ಮ ಬಂದಾಗ ನಾಲಿಗೆ ಇರುವಾಗ ಕೃಷ್ಣ ಎನಬಾರದೆ ||ಅ||

ಮಲಗೆದ್ದು ಮೈಮುರಿದು ಏಳುತಲೊಮ್ಮೆ ಕೃಷ್ಣ ಎನಬಾರದೆ ||ನಿತ್ಯ ||
ಸುಳಿದಾಡುತ ಮನೆಯೊಳಗಾದರು ಒಮ್ಮೆ ಕೃಷ್ಣ ಎನಬಾರದೆ ||೧||

ಮೇರೆ ತಪ್ಪಿ ಮಾತಾಡುವಾಗಲೊಮ್ಮೆ ಕೃಷ್ಣಎನಬಾರದೆ || ದೊಡ್ಡ ||
ದಾರಿಯ ನಡೆದಾಗ ಭಾರವ ಹೊರುವಾಗ ಕೃಷ್ಣ ಎನಬಾರದೆ ||೨||

ಗಂಧವ ಪೂಸಿ ತಾಂಬೂಲವ ಮೆಲುವಾಗ ಕೃಷ್ಣ ಎನಬಾರದೆ ತನ್ನ
ಮಂದಗಮನೆ ಕೂಡ ಸರಸವಾಡುತಲೊಮ್ಮೆ ಕೃಷ್ಣಎನಬಾರದೆ ||೩||

ಪರಿಹಾಸ್ಯದ ಮಾತಾಡುತಲೊಮ್ಮೆ ಪರಿ ಕೆಲಸದೊಳೊಂದು ಕೆಲಸವೆಂದು
ಪರಿ ಪರಿ ಕೆಲಸದೊಳೊಂದು ಕೆಲಸವೆಂದು ಕೃಷ್ಣ ಎನಬಾರದೆ ||೪||

ಕಂದನ ಬಿಗಿದಪ್ಪಿ ಮುದ್ದಾಡುತಲೊಮ್ಮೆ ಕೃಷ್ಣ ಎನಬಾರದೆ || ಬಹು ||
ಚಂದುಳ್ಳ ಹಾಸಿಗೆ ಮೇಲೆ ಕುಳಿತೊಮ್ಮೆ ಕೃಷ್ಣ ಎನಬಾರದೆ ||೫||

ನೀಗದಾಲೋಚನೆ ರೋಗೋಪದ್ರವದಲೊಮ್ಮೆ ||
ಒಳ್ಳೆ ಭೋಗ ಪಡೆದು ಅನುರಾಗದಿಂದಿರುವಾಗ ||೬||

ದುರಿತರಾಶಿಗಳನು ತಂದು ಬಿಸುಡಲು ಕೃಷ್ಣ ಎನಬಾರದೆ |
ಸದಾ || ಗರುಡವಾಹನ ಸಿರಿಪುರಂದರ ವಿಠಲನ್ನೇ ಕೃಷ್ಣ ಎನಬಾರದೆ ||೭||

Author: Shri Purandara Dasaru

kriShNA ena bArade kriShNA nenedare kaShTa ondiSTilla ||pa||
narajanma bandAga nAlige iruvAga kriShNA ena bAraDe ||a pa||

malagedduu mai muridu eLuttalomme kriShNA ena bArade nitya 
sULitADuta maneyoLagAdaru omme kriShNA ena bArade ||1||

mEre tappi mAtanADuvAgalomme kriShNA ena bArade ||doDDa||
dAriya naDevAga bhArava horuvAga kriShNA ena bArade ||2||

gandhava pUsi tAmbUlava meluvAga kriShNA ena bArade tanna
mandagamane kooDi sarasavADutalomme kriShNA ena bArade ||3||

parihAsyada mAtanADutalomme kriShNA ena bArade
paripari kelasadoLondu kelasavendu kriShNA ena bArade ||4||

kandana bigidappi muddATutalomme kriShNA ena bArade bahu ||5||
chenduLLa hAsige mEle kuLitomme kriShNA ena bArade

neegadAlOchane rOgOpadradalomme kriShNA ena bArade oLLE
bhOga paDEdu anurAgadindiruvAga kriShNA ena bArade ||6||

durita rAshigaLanu taridu bisuDalu kriShNA ena bArade sadA
garuDa vAhana siri purandara viTTalanne kriShNA ene bArade ||7||


Listen to song by Shri Vidyabhushana

Listen to song by Ustad Rais Bale Khan and Ustad HAfiz Bale Khan


Listen to song by Bellur Sisters [ Kasaravalli Sisters]


Tuesday, August 11, 2020

ಕಂಡೆನಾ ಗೋವಿಂದನ / kaNDenA gOvindana



ರಚನೆ : ಶ್ರೀ ಪುರಂದರ ದಾಸರು 

ಕಂಡೆನಾ ಗೋವಿಂದನ
ಪುಂಡರೀಕಾಕ್ಷಪಾಂಡವ ಪಕ್ಷ ಕೃಷ್ಣನ ||ಪ||

ಕೇಶವ ನಾರಾಯಣ ಶ್ರೀ ಕೃಷ್ಣನ
ವಾಸುದೇವ ಅಚ್ಯುತಾನಂತನ
ಸಾಸಿರ ನಾಮದ ಶ್ರೀ ಹೃಷಿಕೇಶನ
ಶೇಷ ಶಯನ ನಮ್ಮ ವಸುದೇವ ಸುತನ ||೧||

ಮಾಧವ ಮಧುಸೂದನ ತ್ರಿವಿಕ್ರಮನ
ಯಾದವ ಕುಲ ವ೦ದ್ಯನ
ವೇದಾಂತ ವೇದ್ಯನ ಇಂದಿರಾ ರಮಣನ
ಆದಿ ಮೂರುತಿ ಪ್ರಹ್ಲಾದವರದನ ||೨||

ಪುರುಷೋತ್ತಮ ನರಹರಿ ಶ್ರೀ ಕೃಷ್ಣನ
ಶರಣಾಗತ ಜನ ರಕ್ಷಕನ
ಕರುಣಾಕರ ನಮ್ಮ ಪುರಂದರವಿಠಲನ
ನೆರೆ ನ೦ಬಿದೆನು ಬೇಲೂರ ಚೆನ್ನಿಗನ ||೩||

Author : Shree Purandara Dasaru

kaNDenA gOvindana
puNDarIkAkSa pANDava pakSa krSNana ||pa||

kEshava nArAyaNa shrI krishnana
vAsudEva achyutAnandana
sAsira nAmada shrI hrSIkEshana
shESashayana namma vasudEva sutana ||1||

mAdhava madhusUdana trivikramana
yAdava kula vandyana
vEdAnta vEdyana indirA ramaNana
Adi mUruti prahlAda varadana ||2||

puruSOttama narahari shrI krishnana
sharaNAgata rakSakana
karuNAkara namma purandara viTTalana
nere nambidenu bElUra chennigana ||3||



Listen to song by Shri Vidyabhushana



Listen to song by Shri Shankar Shanbhogue


Listen to song by Naada Ninaada


Wednesday, August 21, 2019

ಸಕಲ ಗ್ರಹ ಬಲ ನೀನೇ ಸರಸಿಜಾಕ್ಷ / Sakala Graha Bala Neene Sarasijaksha

ಸಕಲ ಗ್ರಹ ಬಲ ನೀನೇ ಸರಸಿಜಾಕ್ಷ



ರಚನೆ : ಶ್ರೀ ಪುರಂದರ  ದಾಸರು


ಸಕಲ ಗ್ರಹ ಬಲ ನೀನೇ ಸರಸಿಜಾಕ್ಷ
ನಿಖಿಲ ರಕ್ಷಕ ನೀನೆ ವಿಶ್ವವ್ಯಾಪಕನೇ ||ಪ||

ರವಿಚಂದ್ರ ಬುಧ ನೀನೇ ರಾಹು ಕೇತುವು ನೀನೇ
ಕವಿ ಗುರುವು ಶನಿಯು ಮಂಗಳನು ನೀನೇ
ದಿವ ರಾತ್ರಿಯು ನೀನೇ ನವ ವಿಧಾನವು ನೀನೇ
ಭವರೋಗ ಹರ ನೀನೇ ಭೇಷಜನು ನೀನೇ ||೧||

ಪಕ್ಷಮಾಸವು ನೀನೇ ಪರ್ವ ಕಾಲವು ನೀನೇ
ನಕ್ಷತ್ರ ಯೋಗ ತಿಥಿ ಕರಣಗಳು ನೀನೇ
ಅಕ್ಷಯವೆಂದು ದ್ರೌಪದಿಯ ಮಾನವ ಕಾಯ್ದ
ಪಕ್ಷಿವಾಹನ ದೀನರಕ್ಷಕನು ನೀನೆ ||೨||

ಋತುವತ್ಸರವು ನೀನೆ ವ್ರತ ಯುಗಾದಿಯು ನೀನೇ
ಕ್ರತುವು ಹೋಮ ಯಜ್ಞ ಸದ್ಗತಿಯು ನೀನೇ
ಜಿತವಾಗಿ ಎನ್ನೊಡೆಯ ಪುರಂದರ ವಿಠಲನೆ
ಸ್ತುತಿಗೇ ಸಿಲುಕದ ಮಹಾಮಹಿಮನು ನೀನೇ ||೩||

sakala graha bala neenE sarasijAkSha

Composer: Sri Purandara Dasaru


sakala graha bala neenE sarasijAkSha ||
nikhila rakShaka neenE vishwavyApakanE |p|

ravi chaMdra budha neenE rAhu kEtuvu neenE
kavi guru shaniyu maMgaLanu neenE
divarAtriyu neenE nava vidhAnavu neenE
bhavarOgahara neenE bhEShajanu neenE ||1||

pakshamAsavu neenE parva kAlavu neenE
nakshatra yOga tithi karaNagaLu neenE
akshayaveMdu draupadiya mAnava kAyda
pakShivAhana deena rakShakanu neenE ||2||

Rutu vatsaravu neenE vrata yugAdiyu neenE
kratu hOma yaj~jna sadgatiyu neenE
jitavAgi yennoDeya puraMdara viThalane
stutige silukada mahAmahimanu neenE ||3||


Watch/Listen to song sung by Shree MS Subbalakshmi









ಜಗದೋದ್ಧಾರನ / Jagadodharana

ಜಗದೋದ್ಧಾರನ



ಜಗದೋದ್ಧಾರನ ಆಡಿಸಿದಳೆಶೋದಾ


ರಚನೆ : ಶ್ರೀ ಪುರಂದರ ದಾಸರು

ಜಗದೋದ್ಧಾರನ ಆಡಿಸಿದಳೆಶೋದಾ
ಜಗದೋದ್ಧಾರನ ಆಡಿಸಿದಳೆಶೋದಾ ಜಗದೋದ್ಧಾರನ (ಪ)

ಜಗದೋದ್ಧಾರನ ಮಗನೆಂದು ತಿಳಿಯುತ
ಸುಗುಣಾಂತ ರಂಗನ ಆಡಿಸಿದಳೆಶೋದೆ (ಅ ಪ)

ನಿಗಮಕೆ ಸಿಲುಕದ ಅಗಣಿತ ಮಹಿಮನ
ಮಗುಗಳ ಮಾಣಿಕ್ಯನ ಆಡಿಸಿದಳೆ ಯಶೋದೆ ।।೧।।

ಅಣೋರಣೀಯನ ಮಹತೋ ಮಹಿಮನ
ಅಪ್ರಮೇಯನ ಆಡಿಸಿದಳೆಶೋದಾ ।।೨।।

ಪರಮ ಪುರುಷನ ಪರವಾಸುದೇವನ
ಪುರಂದರ ವಿಠಲನ ಆಡಿಸಿದಳೆಶೋದಾ ।।೩।।

jagadOdhdhAraNa ADisidaLe yashOde


Author : Shree Purandara Dasaru


jagadOddAraNa ADisidaLe yashOde ।।pa||

jagadOddhAraNa maganendu tiLiyuta
suguNAnta ranganA AdisidaLe yashOde ||a pa||

nigamakE silukada agaNita mahimana
magugaLe mANikyana ADisidaLe yashOde ||1||

aNOraNIyana mahatO mahImana
apramEyana na ADisidaLe yashOde ||2||

parama puruSana paravAsudEvana
purandara viThalana ADisidaLe yashOde ||3||



There are so many beautiful musical renditions of this song. Some of below are my favourites that I am listing below




Singer : Shree Vidyabhushana



Singer : Bombay Jayashree


Singer : Shri MS Subbalakshmi




ತೊರೆದು ಜೀವಸಬಹುದೇ / Toredu Jeevisabahude

ತೊರೆದು ಜೀವಸಬಹುದೇ





ತೊರೆದು ಜೀವಸಬಹುದೇ ಹರಿ ನಿನ್ನ ಚರಣಗಳ

ಸಾಹಿತ್ಯ : ಶ್ರೀ ಕನಕದಾಸರು

ತೊರೆದು ಜೀವಸಬಹುದೇ ಹರಿ ನಿನ್ನ ಚರಣಗಳ
ಬರಿದೆ ಮಾತೇಕಿನ್ನು ಆರಿತು ಪೆಲುವೆನಯ್ಯ

ತಾಯಿ ತಂದೆಯ ಬಿಟ್ಟು ತಪವ ಮಾದಲುಬಹುದು
ದಾಯಾದಿ ಬಂಧುಗಳ ಬಿಡಲುಬಹುದು
ರಾಯ ತಾ ಮುನಿದರೆ ರಾಜ್ಯವನೆ ಬಿಡಬಹುದು
ಕಾಯಜಾಪಿತ ನಿನ್ನಡಿಯ ಬಿಡಾಲಗದು ।।೧।।

ಒಡಲು ಹಸಿಯಲು ಅನ್ನವಿಲ್ಲದಲೆ ಇರಬಹುದು
ಪಡೆದ ಕ್ಷೇತ್ರವ ಬಿಟ್ಟು ಹೊರಡಬಹುದು
ಮಡದಿ ಮಕ್ಕಳ ಕೆಡೆಗೆ ತೊಲಗಿಸಿಯೆ ಬಿಡಬಹುದು
ಕಡಲೋಡೆಯ ನಿನ್ನಡಿಯ ಘಳಿಗೆ ಬಿಡಲಾಗದು ।।೨।।

ಪ್ರಣವಾನು ಪರುರು ಬೇಡಿದರೆತ್ತಿ ಕೊಡಬಹುದು
ಮಾನದಲಿ ಮನವ ತಗ್ಗಿಸಲುಬುಹುದು
ಪ್ರಾಣನಾಯಕನದ ಆದಿಕೇಶವರಾಯ
ಜಾಣ ಶ್ರೀಕೃಷ್ಣ ನಿನ್ನಡಿಯ ಬಿಡಲಾಗದು ।।೩।।


Toredu Jeevisabahude

Author: Shri Kanakadaasaru

Toredu Jeevisabahude Hari Ninna Charanagala
Baride Maatekinnu Aritu Peluvenayya

Taayi Tandeya Bittu Tapava Maadalubahudu
Daayaadi Bandhugala Bidalubahudu
Raaya Taa Munidare Raajyavane Bidabahudu
Kaaya Japita Ninnadiya Bidalaagadu II 1 II

Odalu Hasiyalu Annavilladale Irabahudu
Padeda Kshetrava Bittu Horadabahudu
Madadi Makkala Kadege Tolagisiye Bidabahudu
Kadalodeya Ninnadiya Ghalige Bidalaagadu II 2 II

Praanavanu Pararu Bedidaretti Kodabahudu
Maanabhimaanava Taggisalubahudu
Praanadaayaakanaada Aadikeshavaraaya
Jaana Shrikrushna Ninnadiya Bidalaagadu II 3 II


Listen to the song sung by Shri Pt Venkatesh Kumar in link below



ಒಂದು ಬಾರಿ ಸ್ಮರಣೆ ಸಾಲದೆ / oNdu bAri smaraNe sAlade

ಒಂದು ಬಾರಿ ಸ್ಮರಣೆ ಸಾಲದೆ


ಸಾಹಿತ್ಯ : ಶ್ರೀವಾದಿರಾಜರು


ಒಂದು ಬಾರಿ ಸ್ಮರಣೆ ಸಾಲದೆ ||ಪ.||
ಆನಂದತೀರ್ಥರ ಪೂರ್ಣಪ್ರಜ್ಞರ ಸರ್ವಜ್ಞರಾಯರ ಮಧ್ವರಾಯರ ||ಅ.ಪ.||

ಹಿಂದನೇಕ ಜನ್ಮಗಳಲಿ ನೊಂದು ಯೋನಿಗಳಲಿ ಬಂದು
ಇಂದಿರೇಶ ಹರಿಯ ಪಾದವ ಹೊಂದಬೇಕೆಂಬುವರಿಗೆ ||೧||

ಪ್ರಕೃತಿ ಬಂಧದಲ್ಲಿ ಸಿಲುಕಿ ಸಕಲ ವಿಷಯಗಳಲಿ ನೊಂದು
ಅಕಳಂಕಚರಿತ ಹರಿಯ ಪಾದಭಾಕುತಿ ಬೇಕೆಂಬುವರಿಗೆ ||೨||

ಆರುಮಂದಿ ವೈರಿಗಳನು ಸೇರಲಿಸದಂತೆ ಜರಿದು
ಧೀರನಾಗಿ ಹರಿಯ ಪಾದವ ಸೇರಬೇಕೆ೦ಬುವರಿಗೆ ||೩||

ಘೋರ ಸಂಸಾರಾಂಬುಧಿಗೆ ಪರಮಜ್ಞಾನವೆಂಬ ಪಾದೆ
ಏರಿ ಮೆಲ್ಲನೆ ಹರಿಯ ಪಾದ ಸೇರಬೇಕೆಂಬುವರಿಗೆ ||೪||

ಹೀನಬುದ್ಧಿಯಿಂದ ಶ್ರೀ ಹಯವದನನ್ನ ಜರಿದು
ತಾನು ಬದುಕರಿಯದಿರಲು ತೋರಿ ಕೊಟ್ಟ ಮಧ್ವಮುನಿಯ ||೫||

oNdu bAri smaraNe sAlade 


oNdu bAri smaraNe sAlade ||pa.||
AnaMdatIrthara pUrNapraj~jara sarvaj~jarAyara madhvarAyara ||a.pa.||

hiMdanEka janmagaLali noMdu yOnigaLali baMdu
iMdirESa hariya pAdava hoMdabEkeMbuvarige ||1||

prakRuti baMdhadalli siluki sakala viShayagaLali noMdu
akaLaMkacarita hariya pAdaBAkuti bEkeMbuvarige ||2||

ArumaMdi vairigaLanu sEralisadaMte jaridu
dhIranAgi hariya pAdava sErabEke0buvarige ||3||

GOra saMsArAMbudhige paramaj~jAnaveMba pAde
Eri mellane hariya pAda sErabEkeMbuvarige ||4||

hInabuddhiyiMda SrI hayavadananna jaridu
tAnu badukariyadiralu tOri koTTa madhvamuniya ||5||



Listen to an awsome rendition by Pt Shri Venkatesh Kumar


Listen to an awsome rendition by Shri Bombay Jayashri in link below




Tuesday, August 20, 2019

ಜಯ ಕೊಲ್ಹಾಪುರ ನಿಲಯೇ / jaya kolhApura nilaye


ಜಯ ಕೊಲ್ಹಾಪುರ ನಿಲಯೇ 




ಜಯ ಕೊಲ್ಹಾಪುರ ನಿಲಯೇ ಭಜದಿಷ್ಟೇತರವಿಲಯೇ
ತವಪಾದೌ ಹೃದಿಕಲಯೇ ರತ್ನ ರಚಿತ ವಲಯೇ ।।ಪ ।।

ಜಯ ಜಯ ಸಾಗರಜಾತೇ ಕುರು ಕರುಣಾಮಯಿಭೀತೆ
ಜಗದಂಬಾಭಿದಯಾತೆ ಜೀವತಿ ತವ ಪೋತೆ ।।೧।।

ಜಯ ಜಯ ಸಾಗರ ಸದನ ಜಯ ಕಾಂತ್ಯಾಜಿತ ಮದನಾ
ಜಯ ದುಷ್ಟಾಂತಕ ಕದನ ಕುಂದಮುಕುಲರದನ ।।೨।।

ಸುರರಮಣಿ ನುತಚರಣೇ ಸುಮನಃ ಸಂಕಟ ಹರಣೇ
ಸುಸ್ವರ ರಂಜಿತವೀಣೇ ಸುಂದರ ನಿಜ ಕಿರಣೇ।।೩।।

ಭಜದಿಂದೀವರ ಸೋಮಾ ಭವ ಮುಖ್ಯಾಮರಕಾಮಾ
ಭಯ ಮೂಲಾಳಿವಿರಾಮಾ ಭಂಜಿಕ ಮುನಿಭೀಮಾ ।।೪।।

ಕುಂಕುಮ ರಂಜಿತಘಾಲೇ ಕುಂಜರ ಬಾಂಧವಲೋಲೆ
ಕಲಧೌತೌಮಲಚೈಲೇ ಕೃನ್ತಕುಜನಜಾಲೆ ।।೫।।

ಧ್ರಿತ ಕರುಣಾರಸಪೂರೇ ಧನದಾನೋತ್ಸವ ಧೀರೇ
ಧ್ವನಿಲವನಿಂದಿತಕೀರೆ ಧೀರೆದನುಜಧಾರೇ।।೬।।

ಸುರ ಹೃತ್ಪಂಜರಕೀರಾ ಸುಮಗೇ ಹಾರ್ಪಿತ ಹಾರ
ಸುಂದರ ಕುಂಜ ವಿಹಾರ ಸುರವರ ಪರಿವಾರ ।।೭।।

ವರ ಕಬರಿ ಧ್ರಿತ ಕುಸುಮೆ ವಾರಕನಕಾಧಿಕಸುಶುಮೇ
ವನನಿಲಯಾ ದಯಭೀಮೇ ವದನ ವಿಜಿತ ಸೋಮೇ।।೮।।

ಮದಲಕ ಭಾಲಸಗಮನೆ ಮಧು ಮಥನಾಲಸ ನಯನೇ
ಮೃದುಲೋಲಾಲಕ ರಚನೇ ಮಧುರ ಸರಸ ಗಾನೇ।।೯।।

ವ್ಯಾಘ್ರ ಪುರೀ ವರ ನಿಲಯೇ ವ್ಯಾಸಪದಾರ್ಪಿತ ಹೃದಯೇ
ಕುರು ಕರುಣಾಮಹಿಸದಯೇ ವಿವಿಧ ನಿಗಮ ಗೆಯೇ।।೧೦।।

Jaya KolhApura Nilaye


jaya kolhApura nilaye bajadhiShTetaravilaye

tavapAdau hridikalaye ratna rachita valeye || pa||



jaya jaya sAgarajAte kuru karuNAmayibhIte
jagadambAbhidhyAte jIvati tavapote || 1||

jaya jaya sAgarasadanA jaya kAntyAjita madanA
jaya duShTAntaka kadanA kundamukularadanA ||2||

suraramaNI nutacharaNe sumanaH sankaTaharaNe
suswara ranjitaveeNe sundara nijakiraNe || 3||

bhajadindIvara somA bhava mukhyAmarakAmA
bhaya mUlAlivirAmA bhanjika munibhImA ||4||

kumkuma ranjitafAle kunjara bAndavalole
kaladhautAumalachaile krintakujanajAle ||5||

dhrita karuNArasapUre dhanadAnotsava dhIre
dhvanilavaninditakIre dhIredanujadAre ||6||

sura hrutpanjarakIrA sumagehArpita hArA
sundara kunjavihAra sura parivArA ||7||

vara kabarI dhrita kusume varakanakAdhikasuShume
vana nilayA dayabhIme vadana vijita some ||8||

madalaka bhAlasagamane madhu mathanAlasa nayane
mrudulolAlaka rachaNe madhura sarasagAne ||9||

vyAgrapurivaranilaye vyAsapadArpitahrudaye
kurukaruNAmahisadaye vividanigamageye ||10||


Album :Divine Melodies Song :Jaya Kolhapura Nilaye Download / Listen on iTunes: https://apple.co/2moiWdE Artist :Vidyabhushana Lyric :Sri Hulagi Dasaru [ see notes below] Lable Sagar Music Language :Kannada




Notes : I am still figuring out who is the author of this song. Some searches , I found out it was Shri HuLugi ShriyaptyAchar and some other articles pointed out the author to be Shri Kanaka dasaru (which i doubt as the song does not end with ankita adikeshava). The ankita of this song says "vyasa padarpita" - based on this I intend to find the correct author. If anybody know the correct author of this song please let me know

Monday, August 19, 2019

ಮೊದಲೊಂದಿಪೆ ನಿನಗೆ ಗಣನಾಥ / Modalondipe Ninage Gananaatha

                                                             


ಗಣೇಶ - ನಮ್ಮೆಲ್ಲರ ಅಚ್ಚುಮೆಚ್ಚಿನ ಹಾಗು ಜನಪ್ರಿಯ ದೇವ. ವಿಘನ ವಿನಾಶಕನಾದ ಇವನ ಪೂಜೆ ಇಂದಲೇ ನಮ್ಮ ಕಾರ್ಯ ಹಾಗು ಸಮಾರಂಭಗಳನ್ನು ಆರಂಭಿಸುತ್ತೇವೆ. ಈ ಹಾಡು ಗಣೇಶನ ಅತ್ಯಂತ ಜನಪ್ರಿಯ ಭಕ್ತಿ ಗೀತೆ , ರಚನೆ ಶ್ರೀ ಲಕ್ಷ್ಮೀನಾರಾಯಣ ತೀರ್ಥರು [ ಶ್ರೀ ಶ್ರೀಪಾದರಾಜರು ]

[ಅಂಕಿತ:ರಂಗವಿಠಲ]

ರಚನೆ : ಶ್ರೀ ಶ್ರೀಪಾದರಾಜರು 

ಮೊದಲೊಂದಿಪೆ ನಿನಗೆ ಗಣನಾಥ
ಬಂದ ವಿಘ್ನ ಕಳೆಯೋ ಗಣನಾಥ
ಮೊದಲೊಂದಿಪೆ ನಿನಗೆ ಗಣನಾಥ ।।ಪ।।

ಹಿಂದೆ ರಾವಣನು ಮದದಿಂದ ನಿನ್ನ ಪೂಜಿಸದೇ
ಸಂದ ರಣದಲ್ಲಿ ಗಣನಾಥ ।।೧।।

ಮಾಧವನ ಆಜ್ಞೆಯಿಂದ ಧರ್ಮರಾಯ ಪೂಜಿಸಲು
ಸಾಧಿಸಿದ ರಾಜ್ಜ ಗಣನಾಥ ।।೨।।

ಮಂಗಳ ಮೂರುತಿ ಗುರು ರಂಗ ವಿಠಲನ ಪಾದ
ಹಿಂಗದೆ ಪಾಲಿಸೊ ಗಣನಾಥ ।।೩।।

Listen to the song here.

Modalondipe Ninage Gananatha – Lyrics

All of our festival and function start with performing pooje to Lord Ganesha.Ganesha is widely revered as the remover of obstacles, the patron of arts and sciences and the deva of intellect and wisdom. This song is one of the popular devotional songs dedicated to Lord Ganesha – Author : Lakshminarayana Teertha

Pen Name/Signature : Ranga Vittala

Author : Shree Shreepadarajaru

modaondipe ninage gananatha
banda vigna kaleyo gananatha
modal vandipe ninage gananatha ||pa||

hinde ravananu madadinda ninna pujisade
sanda ranadalli gananatha ||1||

madhavana agneyinda dharmaraya poojisalu
sadhisida raajya gananatha ||2||

mangala muruti guru ranga vithalana pada
hingade paliso gananatha ||3||

Click on links below to play the songs

Credits:
Source : Mangaluru Ramakrishna Mission
Singer: : Ustaad Fayaz Khan