Pages

Wednesday, August 21, 2019

ತೊರೆದು ಜೀವಸಬಹುದೇ / Toredu Jeevisabahude

ತೊರೆದು ಜೀವಸಬಹುದೇ





ತೊರೆದು ಜೀವಸಬಹುದೇ ಹರಿ ನಿನ್ನ ಚರಣಗಳ

ಸಾಹಿತ್ಯ : ಶ್ರೀ ಕನಕದಾಸರು

ತೊರೆದು ಜೀವಸಬಹುದೇ ಹರಿ ನಿನ್ನ ಚರಣಗಳ
ಬರಿದೆ ಮಾತೇಕಿನ್ನು ಆರಿತು ಪೆಲುವೆನಯ್ಯ

ತಾಯಿ ತಂದೆಯ ಬಿಟ್ಟು ತಪವ ಮಾದಲುಬಹುದು
ದಾಯಾದಿ ಬಂಧುಗಳ ಬಿಡಲುಬಹುದು
ರಾಯ ತಾ ಮುನಿದರೆ ರಾಜ್ಯವನೆ ಬಿಡಬಹುದು
ಕಾಯಜಾಪಿತ ನಿನ್ನಡಿಯ ಬಿಡಾಲಗದು ।।೧।।

ಒಡಲು ಹಸಿಯಲು ಅನ್ನವಿಲ್ಲದಲೆ ಇರಬಹುದು
ಪಡೆದ ಕ್ಷೇತ್ರವ ಬಿಟ್ಟು ಹೊರಡಬಹುದು
ಮಡದಿ ಮಕ್ಕಳ ಕೆಡೆಗೆ ತೊಲಗಿಸಿಯೆ ಬಿಡಬಹುದು
ಕಡಲೋಡೆಯ ನಿನ್ನಡಿಯ ಘಳಿಗೆ ಬಿಡಲಾಗದು ।।೨।।

ಪ್ರಣವಾನು ಪರುರು ಬೇಡಿದರೆತ್ತಿ ಕೊಡಬಹುದು
ಮಾನದಲಿ ಮನವ ತಗ್ಗಿಸಲುಬುಹುದು
ಪ್ರಾಣನಾಯಕನದ ಆದಿಕೇಶವರಾಯ
ಜಾಣ ಶ್ರೀಕೃಷ್ಣ ನಿನ್ನಡಿಯ ಬಿಡಲಾಗದು ।।೩।।


Toredu Jeevisabahude

Author: Shri Kanakadaasaru

Toredu Jeevisabahude Hari Ninna Charanagala
Baride Maatekinnu Aritu Peluvenayya

Taayi Tandeya Bittu Tapava Maadalubahudu
Daayaadi Bandhugala Bidalubahudu
Raaya Taa Munidare Raajyavane Bidabahudu
Kaaya Japita Ninnadiya Bidalaagadu II 1 II

Odalu Hasiyalu Annavilladale Irabahudu
Padeda Kshetrava Bittu Horadabahudu
Madadi Makkala Kadege Tolagisiye Bidabahudu
Kadalodeya Ninnadiya Ghalige Bidalaagadu II 2 II

Praanavanu Pararu Bedidaretti Kodabahudu
Maanabhimaanava Taggisalubahudu
Praanadaayaakanaada Aadikeshavaraaya
Jaana Shrikrushna Ninnadiya Bidalaagadu II 3 II


Listen to the song sung by Shri Pt Venkatesh Kumar in link below



No comments:

Post a Comment