ಹೂವ ತರುವರ ಮನೆಗೆ ಹುಲ್ಲ ತರುವ
ಅವ ರಮಣ ಇವಗಿಲ್ಲಗರುವ ।।ಪ।।
ಒಂದು ದಳ ಶ್ರೀತುಳಸಿ ಬಿಂದು ಗಂಗೋದಕವು
ಇಂದಿರಾ ರಮಣಗೆ ಅರ್ಪಿತವೆನುತ
ಒಂದೇ ಮನಸಿನಲಿ ಸಿಂಧುಶಯನೆನುತ
ಎಂದೆಂದಿಗೂ ವಾಸಿಪನು ಮಂದಿರದೊಳಗೆ ।।೧।।
ಪರಿಪರಿಯ ಪುಷ್ಪಗಳ ಪರಮಾತ್ಮಗರ್ಪಿಸಿ
ಪರಿಪೂರ್ಣ ತಾನೆಂದು ಪೂಜೆಯನು ಮಾಡಿ
ಸರಸಿಜಾಕ್ಷನು ತನ್ನ ಸಕಲ ಸ್ವಾತಂತ್ರ್ಯದಲಿ
ಸರಿ ಭಾಗ್ಯ ಕೊಡುವ ತನ್ನರಮನೆಯ ಒಳಗೆ ।।೨।।
ಪಾಂಡವರ ಮನೆಯಲ್ಲಿ ಕುದುರೆಗಳ ತಾ ತೊಳೆದು
ಪುಂಡರೀಕಾಕ್ಷನು ಹುಲ್ಲನು ತಿನಿಸಿ
ಅಂಡಜ ವಾಹನ ಪುರಂದರ ವಿಠ್ಠಲ
ತೊಂಡರಿಗೆ ತೊಂಡನಾಗಿ ಸಂಚರಿಸುತಿಹನು ।।೩।।
Listen to the song here
Hoova Taruvara Manege
huva taruvara manage hulla taruvaavva lakumIramaNa ivagilla garuva ||pa||
ondu daLa shrI tuLasi bindu gangOdakava
indirA ramaNa gE arpita venuta
onde manasinali sindhu shayana nenuta
endendu vAsipa mandira doLage ||1||
pari pariya puShpa gaLa paramATmaga arpisi
pari pURNa taanendu pUje yanu mADe
sarasi jAkshanu taNna sakala swAtantrya dali
sari bhAga koDuva tanna Aramane oLage ||2||
pANDa vara maneyalli kuduregaLa tA toLadu
puNDarI kAkSa hullanu tinisi
aNDaja vaahana purandara viTTala
toNDarige toNDanAgi sancharisu tihanu||3||
No comments:
Post a Comment