Pages

Monday, August 19, 2019

ನಮ್ಮಮ್ಮ ಶಾರದೆ ಉಮಾ ಮಹೇಶ್ವರಿ / Nammamma Sharade Uma Maheshwari

ನಮ್ಮಮ್ಮ ಶಾರದೆ ಉಮಾ ಮಹೇಶ್ವರಿ 



ರಚನೆ : ಕನಕ ದಾಸರು 

ನಮ್ಮಮ್ಮ ಶಾರದೆ ಉಮಾ ಮಹೇಶ್ವರಿ
ನಿಮ್ಮೊಳಗಿಹನಾರಮ್ಮ ।।ಪ।।

ಕಮ್ಮಗೋಲನ ವೈರಿ ಸುತನಾದ ಸೊಂಡಿಲ
ಹೆಮ್ಮೆಯ ಗಣನಾಥನೇ ।।ಅನು ಪ ।।

ಮೋರೆ ಕಪ್ಪಿನ ಭಾವ ಮೊರದಗಲದ ಕಿವಿ
ಕೋರೆದಾಡೆಯನಾರಮ್ಮ
ಮೂರು ಕಣ್ಣನ ಸುತ ಮುರಿದಿಟ್ಟ ಚಂದ್ರನ
ಧೀರ ತಾ ಗಣನಾಥನೇ ಅಮ್ಮಯ್ಯ ।।೧।।

ಉಟ್ಟ ಪಚ್ಛೆಯ ಬಿಗಿದುಟ್ಟ ಚೆಲ್ಲಣದ
ದಿಟ್ಟ ತಾನಿವನಾರಮ್ಮ
ಪಟ್ಟದ ರಾಣಿ ಪಾರ್ವತಿಯ ಕುಮಾರನು
ಹೊಟ್ಟೆಯ ಗಣನಾಥನೇ ಅಮ್ಮಯ್ಯ ।।೨।।

ರಾಶಿ ವಿದ್ಯೆಯ ಬಲ್ಲ ರಮಣಿ ಹಂಬಲನೊಲ್ಲ
ಭಾಷಿಗನಿವನ್ಯಾರಮ್ಮ
ಲೇಸಾಗಿ ಜನರ ಸಲಹುವ
ಕಾಗಿನೆಲೆ ಆದಿಕೇಶವ ದಾಸ ಕಣೆ ಅಮ್ಮಯ್ಯ ।।೩।।


Listen to song here 





Nammamma Sharade Uma Maheshwari



Composed by : Kanaka Dasaru

nammammA shArade umA mahEshwarI
nimmoLagihanArammA ||pa||

kammagOlana vairi sutanAda so0Dila hemmeya gaNanAthanE ||apa||

mOre kappina bhAva moradagalada kivi kOredADeyanArammA
mUrukaNNana suta muridiTTa cha0drana dhIra tA gaNanAthanE ammayya ||1||

uTTa pachcheya bigiduTTa chellaNada diTTa tAnivanArammA
paTTada rANi pArvatiya kumAranu hoTTeya gaNanAthanE ammayya ||2||

raashi vidyeya balla ramaNi haMbalanolla bhaaShiganivanyaaramma
lEsAgi janara salahuva kAginele AdikEshava dAsa kaNE ammayya ||3||

Link Below Sung By : Shri Vidyabhushana
    

Listen to song by Mahalakshmi Shenoy





No comments:

Post a Comment