Pages

Friday, August 23, 2019

ಬಂದಾನೊ ಗೋವಿಂದ / bandano gOvinda chandadi Ananda

ಬಂದಾನೊ  ಗೋವಿಂದ



ರಚನೆ : ಶ್ರೀ ವಾಸುದೇವ ವಿಠ್ಠಲ 



ಬಂದನೋ ಗೋವಿಂದ ಚಂದದಿ ಆನಂದ
ಸುಂದರಿಯ ಮಂದಿರಕ್ಕೆ ನಂದನಕಂದಾ ನಂದನಕಂದಾ


ಸುಂದರಕಾರ ನಂದ ಕಂಡ ಗಂಭೀರಾ 
ಇಂದು ವದನೆಯರ ಮುಖಗಳ ಅಂದ ನೋಡಿದ 
ತಂದ ಕುಸುಮ ಕರದಿಂದ ಮುಡಿಸಿದ
ಬಂದನೋ ಗೋವಿಂದನೋ ಅರವಿಂದ ನಯನ 


ಕಾನನದಲ್ಲಿ ಬಲುದೀನನಾಗಲಿ
ವೇಣುನಾದವೋ ತಾ ಕೂಡಿಮೋದವೋ
ಜಾಣನಿವನು ಸುಮ ಬಾಣ ಪಿತನು
ಮಾನಿನಿ ಮನ ಗಳೊಳಿವ ಗಾನ ಮಾಡುತ್ತಾ 


ಓದಿ ಬಂದರೋ ಬಲು ಬೇಡಿಕೊಂಡರೋ 
ಗಾರುಡಿಕಾರನು ಅವರ ನೋಡಿ ಮೆರೆದರೋ
ಮಾಡಿದ ಜಾಲ ವಾಸುದೇವ ವಿಠಲ
ಮಾಡಿದ ಮನ ಮಾಡಿದ ತ ಕೂಡಿದ ನಾಗ

bandano gOvinda chandadi Ananda 

Author : Shri Vasudeva Vittala


bandano gOvinda chandadi Ananda 
sundariya mandirakke nandanakandA nandanakandA || 

sundarAkAra nanda kanda ganBheera 
indu vadaneyara muKagaLinda nODida  
tanda kusumA karadinda muDisida 
bandanO gOvindanO aravinda nayana ||

kAnanAdalli baludeenanAgali 
vENunAdavO tA kUDimOdavO  
jANanivanu suma bANa pitanu 
mAnini mana gaLoliyuva gAna mADuttA||
 
ODi bandarO balu bEDikonDarO 
gAruDikAranu avara nODi meredaro 
mADida jAla vAsudEva viTtalA 
mADida mana mADida tA kUDida nAgA||

No comments:

Post a Comment