Pages

Sunday, August 25, 2019

ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೆ / Bagilanu teredu seveyanu kodo hariye

ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೆ



ರಚನೆ : ಶ್ರೀ  ಕನಕ ದಾಸರು


ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೆ
ಕೂಗಿದರು ಧ್ವನಿ ಕೇಳಲಿಲ್ಲವೇ ನರಹರಿಯೇ ||ಪ||

ಪರಮಪದದೊಳಗೆ ವಿಷಧರನ ತಲ್ಪದಲಿ ನೀ
ಸಿರಿಸಹಿತ ಕ್ಷೀರವಾರುಧಿಯೊಳಿರಲು
ಕರಿರಾಜ ಕಷ್ಟದಲಿ ಆದಿಮೂಲಾ ಎಂದು
ಕರೆಯಲಾಕ್ಷಣ ಬಂದು ಒದಗಿದೆಯೋ ನರಹರಿಯೇ ||೧||

ಕಡು ಕೋಪದಲಿ ಖಳನು ಖಡುಗವನು ಹಿಡಿದು
ನಿನ್ನೊಡೆಯನೆಲ್ಲಿಹನು ಎಂದು ನುಡಿಯೇ
ದೃಢ ಭಕಿಯಲಿ ಶಿಶುವು ಬಿಡದೆ ನಿನ್ನನು ಭಜಿಸೆ
ಸಡಗರದಿ ಕಂಭದಿಂದೊಡೆದೆಯೋ ನರಹರಿಯೇ ||೨||

ಯಮಸುತನ ರಾಣಿಗೆ ಅಕ್ಷಯವಸನವಿತ್ತೆ
ಸಮಯದಲಿ ಅಜಮಿಳನ ಪೊರೆದೆ
ಸಮಯಾಸಮಯವುಂಟೆ ಭಕ್ತವತ್ಸಲ ನಿನಗೆ
ಕಮಲಾಕ್ಷ ಕಾಗಿನೆಲೆಯಾದಿ ಕೇಶವನೆ ||೩||


Bagilanu teredu seveyanu kodo hariye

Author : Shri Kanaka Dasaru


Bagilanu teredu seveyanu kodo hariye
Koogidaru dhvani kelalillave narahariye ||pa||

Paramapadadolage vishadharana talpadali ni
Sirisahita ksheeravarudhiyoliralu
Kariraja kashtadali adimula endu
Kareyalakshana bandu odagideyo narahariye ||1||

Kadukopadim khalanu khadugavanu hididu
Ninnodeya ellihanu endu nudiye
Dhrudhabhakytiyali shishuvu bidade ninnanu Bhajise
Sadagaradi khambadindodede narahariye ||2||

Yamasutana raanige akshayavasanavitte
Samayadali ajamilana porede
Samayasamayavunte Baktavatsala ninage
Kamalaksha kagineleyadi keshavane ||3||


Video Links Below

Song : Baagilanu Theredhu
Artist : P. B. Sreenivos
Album  : Bhaktha Kanakadaasa


No comments:

Post a Comment