ಒಂದು ಬಾರಿ ಸ್ಮರಣೆ ಸಾಲದೆ
ಒಂದು ಬಾರಿ ಸ್ಮರಣೆ ಸಾಲದೆ ||ಪ.||
ಆನಂದತೀರ್ಥರ ಪೂರ್ಣಪ್ರಜ್ಞರ ಸರ್ವಜ್ಞರಾಯರ ಮಧ್ವರಾಯರ ||ಅ.ಪ.||
ಹಿಂದನೇಕ ಜನ್ಮಗಳಲಿ ನೊಂದು ಯೋನಿಗಳಲಿ ಬಂದು
ಇಂದಿರೇಶ ಹರಿಯ ಪಾದವ ಹೊಂದಬೇಕೆಂಬುವರಿಗೆ ||೧||
ಪ್ರಕೃತಿ ಬಂಧದಲ್ಲಿ ಸಿಲುಕಿ ಸಕಲ ವಿಷಯಗಳಲಿ ನೊಂದು
ಅಕಳಂಕಚರಿತ ಹರಿಯ ಪಾದಭಾಕುತಿ ಬೇಕೆಂಬುವರಿಗೆ ||೨||
ಆರುಮಂದಿ ವೈರಿಗಳನು ಸೇರಲಿಸದಂತೆ ಜರಿದು
ಧೀರನಾಗಿ ಹರಿಯ ಪಾದವ ಸೇರಬೇಕೆ೦ಬುವರಿಗೆ ||೩||
ಘೋರ ಸಂಸಾರಾಂಬುಧಿಗೆ ಪರಮಜ್ಞಾನವೆಂಬ ಪಾದೆ
ಏರಿ ಮೆಲ್ಲನೆ ಹರಿಯ ಪಾದ ಸೇರಬೇಕೆಂಬುವರಿಗೆ ||೪||
ಹೀನಬುದ್ಧಿಯಿಂದ ಶ್ರೀ ಹಯವದನನ್ನ ಜರಿದು
ತಾನು ಬದುಕರಿಯದಿರಲು ತೋರಿ ಕೊಟ್ಟ ಮಧ್ವಮುನಿಯ ||೫||
oNdu bAri smaraNe sAlade
oNdu bAri smaraNe sAlade ||pa.||
AnaMdatIrthara pUrNapraj~jara sarvaj~jarAyara madhvarAyara ||a.pa.||
hiMdanEka janmagaLali noMdu yOnigaLali baMdu
iMdirESa hariya pAdava hoMdabEkeMbuvarige ||1||
prakRuti baMdhadalli siluki sakala viShayagaLali noMdu
akaLaMkacarita hariya pAdaBAkuti bEkeMbuvarige ||2||
ArumaMdi vairigaLanu sEralisadaMte jaridu
dhIranAgi hariya pAdava sErabEke0buvarige ||3||
GOra saMsArAMbudhige paramaj~jAnaveMba pAde
Eri mellane hariya pAda sErabEkeMbuvarige ||4||
hInabuddhiyiMda SrI hayavadananna jaridu
tAnu badukariyadiralu tOri koTTa madhvamuniya ||5||
Listen to an awsome rendition by Pt Shri Venkatesh Kumar
No comments:
Post a Comment