Pages

Sunday, August 16, 2020

apamRutyu pariharisO aniladEva / ಅಪಮೃತ್ಯು ಪರಿಹರಿಸೋ ಅನಿಲದೇವ


ರಚನೆ : ಶ್ರೀ ಜಗನ್ನಾಥ ದಾಸರು 

ಅಪಮೃತ್ಯು ಪರಿಹರಿಸೋ ಅನಿಲದೇವ || ಪ ||
ಕೃಪಣ ವತ್ಸಲನೆ ಕಾಯ್ವರ ಕಾಣೆ ಜಗದೊಳಗೆ || ಅ. ಪ. ||

ನಿನಗಿನ್ನು ಸಮರಾದ ಅನಿಮಿತ್ಯ ಬಾಂಧವರು |
ಎನಗಿಲ್ಲ ಆವಾವ ಜನುಮದಲ್ಲಿ |
ಅನುದಿನವು ನೀನೆಮ್ಮನುದಾಸೀನ ಮಾಡುವುದು |
ಅನುಚಿತವು ಜಗಕೆ ಸಜ್ಜನ ಶಿಖಾಮಣಿಯೇ || 1 ||

ಕರುಣಾಭಿಮಾನಿಗಳು ಕಿಂಕರರು ಮೂರ್ಲೋಕ |
ದೊರೆಯು ನಿನ್ನೊಳಗಿಪ್ಪ ಸರ್ವ ಕಾಲ |
ಪರಿಸರನೇ ಈ ಭಾಗ್ಯ ದೊರೆತನಕೆ ಸರಿಯುಂಟೆ |
ಗುರುವರನೆ ನೀ ದಯಾಕರನೆಂದು ಪ್ರಾರ್ಥಿಸುವೆ || 2 ||

ಭವ ರೋಗ ಮೋಚಕನೆ ಪವಮಾನರಾಯ |
ನಿನ್ನವರವನು ನಾನು ಮಾಧವನ ಪ್ರೀಯನೇ |
ಜವನ ಬಾಧೆಯ ಬಿಡಿಸು ಅವನಿಯೊಳು ಸುಜನರಿಗೆ |
ದಿವಿಜ ಗಣ ಮದ್ಯದೊಳು ಪ್ರವರನೀನಹುದೊ || 3 ||

ಜ್ಞಾನಾಯ ರೂಪಕನು ನೀನಹುದೋ ವಾಣಿ |
ಪಂಚಾನನಾದ್ಯಮರರಿಗೆ ಪ್ರಾಣದೇವ |
ದೀನ ವತ್ಸಲನೆಂದು ನಾ ನಿನ್ನ ಮೊರೆ ಹೊಕ್ಕೆ |
ದಾನವಾರಣ್ಯ ಕೃಶಾನು ಸರ್ವದಾ ಎಮ್ಮ || 4 ||

ಸಾಧನ ಶರೀರವಿದು ನೀ ದಯದಿ ಕೊಟ್ಟದ್ದು |
ಸಾಧಾರಣವಲ್ಲ ಸಾಧು ಪ್ರಿಯನೇ |
ವೇದವಾದೋದಿತ ಜಗನ್ನಾಥವಿಠ್ಠಲನ |
ಪಾದ ಭಕುತಿಯನಿತ್ತು ಮೋದ ಕೊಡು ಸತತ || 5 ||

Author : Shree Jagannatha Dasaru

apamRutyu pariharisO aniladEva || pa ||
kRupaNa vatsalane kaayvara kaaNe jagadoLage ||a. pa. ||

ninaginnu samaraada animitya baaMdhavaru |
enagilla aavaava janumadalli |
anudinavu neenemmanudaaseena maaDuvudu |
anucitavu jagake sajjana shikhaamaNiyE || 1 ||

karuNaabhimaanigaLu kiMkararu moorlOka |
doreyu ninnoLagippa sarva kaala |
parisaranE ee bhaagya doretanake sariyuMTe |
guruvarane nee dayaakaraneMdu praarthisuve || 2||

bhava rOga mOcakane pavamaanaraaya |
ninnavaravanu naanu maadhavana prIyanE |
javana baadheya biDisu avaniyoLu sujanarige |
divija gaNa madyadoLu pravaraneenahudo || 3 ||

jaanaaya roopakanu neenahudO vaaNi |
paMcaananaadyamararige praaNadEva |
deena vatsalaneMdu naa ninna more hokke |
daanavaaraNya kRushaanu sarvadaa emma || 4 ||

saadhana shareeravidu nee dayadi koTTaddu |
saadhaaraNavalla saadhu priyanE |
vEdavaadOdita jagannaathaviThThalana |
paada bhakutiyanittu mOda koDu satata || 5 ||

Listen to song by Shri Jagannatha Dasaru



Listen to song by Anant Kulkarni



Listen to song by NaadaNinaada



Thursday, August 13, 2020

ಕೋರಿ ಕರೆವೆ ಗುರು ರಾಘವೇಂದ್ರನೆ / kOri kareve guru raaghavEndrane




ರಚನೆ : ಶ್ರೀ ವಿಠಲೇಶ ದಾಸರು 

ಕೋರಿ ಕರೆವೆ ಗುರು ರಾಘವೇಂದ್ರನೆ |
ಬಾರೋ ಮಹಾ ಪ್ರಭುವೇ || ಪ ||

ಚಾರು ಚರಣ ಯುಗ ಸಾರಿ ನಮಿಪೆ ಬೇಗ |
ಬಾರೋ ಹೃದಯ ಸುಖ ಸಾರ ರೂಪವ ತೊರೋ || ಅ. ಪ. ||

ಎಲ್ಲಿ ನೋಡಲು ಹರಿ ಅಲ್ಲೇ ಕಾಣುವನೆಂದು |
ಕ್ಷುಲ್ಲ ಕಂಭವನೊಡೆದೂ |
ನಿಲ್ಲದೆ ನರಹರಿ ಚೆಲ್ವಿಕೆ ತೋರಲು |
ಫುಲ್ಲ ಲೋಚನ ಶಿಶು ಪ್ರಲ್ಹಾದನಾಗಿ ಬಾರೋ || 1 ||

ದೋಶ ಕಳೆದು ಸಿಂಹಾಸನವೇರಿದೆ |
ದಾಸ ಕುಲವ ಪೊರೆದೆ | ಶ್ರೀಶನರ್ಚಕನಾಗಿ |
ಪೋಶಿಸಿ ಹರಿಮತ ವ್ಯಾಸತ್ರಯವ ಗೈದ |
ವೇಶ ತಳೆದು ಬಾರೋ || 2 ||

ಮೂರ್ಜಗ ಮಾನಿತ ತೇಜೋ ವಿರಾಜಿತ |
ಮೂರ್ಜಗ ಮಹಾ ಮಹಿಮಾ |
ಓಜೆಗೊಳಿಸಿ ನಿಜ ರಾಜೀವನಂದದಿ |
ಪೂಜೆಗೊಳ್ಳುವ ಗುರುರಾಜ ರೂಪದಿ ಬಾರೋ || 3 ||

ಮಂತ್ರ ಸದನದೊಳು ಸಂತ ಸುಜನರಿಗೆ |
ಸಂತೋಷ ಸಿರಿಗರೆವೆ ಕಂತು ಪಿತನ ಪಾದ |
ಸಂತತ ಸೇವಿಪ ಶಾಂತ ಮೂರುತಿ |
ಎನ್ನಂತರಂಗದಿ ಬಾರೋ || 4 ||

ಈ ಸಮಯದಿ ಎನ್ನಾಸೆ ನಿನ್ನೊಳು ಬಲು |
ಸೂಸಿ ಹರಿಯುತಿಹುದು | ಕೂಸಿಗೆ ಜನನಿ |
ನಿರಾಸೆಗೊಳಿಸುವಳೆ | ದೋಷ ಕಳೆದು |
ವಿಠಲೇಶ ಹೃದಯಿ ಬಾರೋ || 5 ||


Rachane : Shree Vittalesha Dasaru

kOri kareve guru raaghavEndrane |
baarO mahaa prabhuvE || pa ||
chaaru charaNa yuga saari namipe bEga |
baarO hRudaya sukha saara roopava torO || a. pa. ||

elli nODalu hari allE kaaNuvanendu |
kShulla kambhavanoDedoo |
nillade narahari chelvike tOralu |
phulla lOchana shishu pralhaadanaagi baarO || 1 ||

dOsha kaLedu siMhaasanavEride |
daasa kulava porede |shreeshanarcakanaagi |
pOshisi harimata vyaasatrayava gaida |
vEsha taLedu baarO || 2 ||

moorjaga maanita tEjO viraajita |
moorjaga mahaa mahimaa |
OjegoLisi nija raajeevanandadi |
poojegoLLuva gururaaja roopadi baarO || 3 ||

mantra sadanadoLu santa sujanarige |
santOsha sirigareve kantu pitana paada |
santata sEvipa shaanta mooruti |
ennantarangadi baarO || 4 ||

ee samayadi ennaase ninnoLu balu |
soosi hariyutihudu |koosige janani |
niraasegoLisuvaLe |  dOSha kaLedu |
viThalEsha hRudayi baarO || 5 ||

Listen to song by Shri Puttur Narasimha Nayak



Wednesday, August 12, 2020

ನರಜನ್ಮ ಬಂದಾಗ ನಾಲಿಗೆ ಇರುವಾಗ ಕೃಷ್ಣ ಎನಬಾರದೆ / narajanma bandAga nAlige iruvAga kriShNA ena bAraDe


ರಚನೆ : ಶ್ರೀ ಪುರಂದರ ದಾಸರು 

ಕೃಷ್ಣ ಎನಬಾರದೆ ಕೃಷ್ಣನ ನೆನೆದರೆ ಕಷ್ಟ ಒಂದಿಷ್ಟಿಲ್ಲ ||ಪ||
ನರಜನ್ಮ ಬಂದಾಗ ನಾಲಿಗೆ ಇರುವಾಗ ಕೃಷ್ಣ ಎನಬಾರದೆ ||ಅ||

ಮಲಗೆದ್ದು ಮೈಮುರಿದು ಏಳುತಲೊಮ್ಮೆ ಕೃಷ್ಣ ಎನಬಾರದೆ ||ನಿತ್ಯ ||
ಸುಳಿದಾಡುತ ಮನೆಯೊಳಗಾದರು ಒಮ್ಮೆ ಕೃಷ್ಣ ಎನಬಾರದೆ ||೧||

ಮೇರೆ ತಪ್ಪಿ ಮಾತಾಡುವಾಗಲೊಮ್ಮೆ ಕೃಷ್ಣಎನಬಾರದೆ || ದೊಡ್ಡ ||
ದಾರಿಯ ನಡೆದಾಗ ಭಾರವ ಹೊರುವಾಗ ಕೃಷ್ಣ ಎನಬಾರದೆ ||೨||

ಗಂಧವ ಪೂಸಿ ತಾಂಬೂಲವ ಮೆಲುವಾಗ ಕೃಷ್ಣ ಎನಬಾರದೆ ತನ್ನ
ಮಂದಗಮನೆ ಕೂಡ ಸರಸವಾಡುತಲೊಮ್ಮೆ ಕೃಷ್ಣಎನಬಾರದೆ ||೩||

ಪರಿಹಾಸ್ಯದ ಮಾತಾಡುತಲೊಮ್ಮೆ ಪರಿ ಕೆಲಸದೊಳೊಂದು ಕೆಲಸವೆಂದು
ಪರಿ ಪರಿ ಕೆಲಸದೊಳೊಂದು ಕೆಲಸವೆಂದು ಕೃಷ್ಣ ಎನಬಾರದೆ ||೪||

ಕಂದನ ಬಿಗಿದಪ್ಪಿ ಮುದ್ದಾಡುತಲೊಮ್ಮೆ ಕೃಷ್ಣ ಎನಬಾರದೆ || ಬಹು ||
ಚಂದುಳ್ಳ ಹಾಸಿಗೆ ಮೇಲೆ ಕುಳಿತೊಮ್ಮೆ ಕೃಷ್ಣ ಎನಬಾರದೆ ||೫||

ನೀಗದಾಲೋಚನೆ ರೋಗೋಪದ್ರವದಲೊಮ್ಮೆ ||
ಒಳ್ಳೆ ಭೋಗ ಪಡೆದು ಅನುರಾಗದಿಂದಿರುವಾಗ ||೬||

ದುರಿತರಾಶಿಗಳನು ತಂದು ಬಿಸುಡಲು ಕೃಷ್ಣ ಎನಬಾರದೆ |
ಸದಾ || ಗರುಡವಾಹನ ಸಿರಿಪುರಂದರ ವಿಠಲನ್ನೇ ಕೃಷ್ಣ ಎನಬಾರದೆ ||೭||

Author: Shri Purandara Dasaru

kriShNA ena bArade kriShNA nenedare kaShTa ondiSTilla ||pa||
narajanma bandAga nAlige iruvAga kriShNA ena bAraDe ||a pa||

malagedduu mai muridu eLuttalomme kriShNA ena bArade nitya 
sULitADuta maneyoLagAdaru omme kriShNA ena bArade ||1||

mEre tappi mAtanADuvAgalomme kriShNA ena bArade ||doDDa||
dAriya naDevAga bhArava horuvAga kriShNA ena bArade ||2||

gandhava pUsi tAmbUlava meluvAga kriShNA ena bArade tanna
mandagamane kooDi sarasavADutalomme kriShNA ena bArade ||3||

parihAsyada mAtanADutalomme kriShNA ena bArade
paripari kelasadoLondu kelasavendu kriShNA ena bArade ||4||

kandana bigidappi muddATutalomme kriShNA ena bArade bahu ||5||
chenduLLa hAsige mEle kuLitomme kriShNA ena bArade

neegadAlOchane rOgOpadradalomme kriShNA ena bArade oLLE
bhOga paDEdu anurAgadindiruvAga kriShNA ena bArade ||6||

durita rAshigaLanu taridu bisuDalu kriShNA ena bArade sadA
garuDa vAhana siri purandara viTTalanne kriShNA ene bArade ||7||


Listen to song by Shri Vidyabhushana

Listen to song by Ustad Rais Bale Khan and Ustad HAfiz Bale Khan


Listen to song by Bellur Sisters [ Kasaravalli Sisters]


Tuesday, August 11, 2020

ಕಂಡೆನಾ ಗೋವಿಂದನ / kaNDenA gOvindana



ರಚನೆ : ಶ್ರೀ ಪುರಂದರ ದಾಸರು 

ಕಂಡೆನಾ ಗೋವಿಂದನ
ಪುಂಡರೀಕಾಕ್ಷಪಾಂಡವ ಪಕ್ಷ ಕೃಷ್ಣನ ||ಪ||

ಕೇಶವ ನಾರಾಯಣ ಶ್ರೀ ಕೃಷ್ಣನ
ವಾಸುದೇವ ಅಚ್ಯುತಾನಂತನ
ಸಾಸಿರ ನಾಮದ ಶ್ರೀ ಹೃಷಿಕೇಶನ
ಶೇಷ ಶಯನ ನಮ್ಮ ವಸುದೇವ ಸುತನ ||೧||

ಮಾಧವ ಮಧುಸೂದನ ತ್ರಿವಿಕ್ರಮನ
ಯಾದವ ಕುಲ ವ೦ದ್ಯನ
ವೇದಾಂತ ವೇದ್ಯನ ಇಂದಿರಾ ರಮಣನ
ಆದಿ ಮೂರುತಿ ಪ್ರಹ್ಲಾದವರದನ ||೨||

ಪುರುಷೋತ್ತಮ ನರಹರಿ ಶ್ರೀ ಕೃಷ್ಣನ
ಶರಣಾಗತ ಜನ ರಕ್ಷಕನ
ಕರುಣಾಕರ ನಮ್ಮ ಪುರಂದರವಿಠಲನ
ನೆರೆ ನ೦ಬಿದೆನು ಬೇಲೂರ ಚೆನ್ನಿಗನ ||೩||

Author : Shree Purandara Dasaru

kaNDenA gOvindana
puNDarIkAkSa pANDava pakSa krSNana ||pa||

kEshava nArAyaNa shrI krishnana
vAsudEva achyutAnandana
sAsira nAmada shrI hrSIkEshana
shESashayana namma vasudEva sutana ||1||

mAdhava madhusUdana trivikramana
yAdava kula vandyana
vEdAnta vEdyana indirA ramaNana
Adi mUruti prahlAda varadana ||2||

puruSOttama narahari shrI krishnana
sharaNAgata rakSakana
karuNAkara namma purandara viTTalana
nere nambidenu bElUra chennigana ||3||



Listen to song by Shri Vidyabhushana



Listen to song by Shri Shankar Shanbhogue


Listen to song by Naada Ninaada


Monday, August 10, 2020

ಬಾರೆ ನಮ್ಮನಿತನಕ ಭಾಗ್ಯದಾ ದೇವಿ / baare nammanitanaka bhaagyadaa dEvi





ರಚನೆ : ಶ್ರೀ ಇಂದಿರೇಶ ದಾಸರು

ಬಾರೆ ನಮ್ಮನಿತನಕ ಭಾಗ್ಯದಾ ದೇವಿ || ಪ ||

ಬಾರೆ ನಮ್ಮನಿತನಕ ಬಹಳ ಕರುಣದಿಂದ |
ಜೋಡಿಸಿ ಕರಗಳ ಎರಗುವೆ ಚರಣಕ್ಕೆ || ಅ. ಪ. ||


ಜರದ ಪೀತಾಂಬರ ನಿರಿಗೆಗಳಲೆಯುತ |
ತರಳನ ಮ್ಯಾಲೆ ತಾಯಿ ಕರುಣಿಸಿ ಬೇಗನೆ || 1 ||

ಹರಡಿ ಕಂಕಣ ದುಂಡು ಕರದಲ್ಲಿ ಹೊಳೆಯುತ |
ಸರಗಿ ಸರವು ಚಂದ್ರ ಹಾರಗಳಲೆಯುತ || 2 ||

ಮಂಗಳಾಂಗಿಯೆ ನಿನಗೊಂದಿಸಿ ಎರಗುವೆ |
ಇಂದಿರೇಶನ ಕೂಡಿ ಇಂದು ನಮ್ಮನಿ ತನಕ || 3 ||

Author : Shree Indiresha Dasaru

baare nammanitanaka bhaagyadaa dEvi || pa || 

baare nammanitanaka bahaLa karuNadinda |
jODisi karagaLa eraguve charaNakke || a. pa. ||

jarada peetaaMbara nirigegaLaleyuta |
taraLana myaale taayi karuNisi bEgane || 1 ||

haraDi kankaNa dunDu karadalli hoLeyuta |
saragi saravu chandra haaragaLaleyuta || 2 ||

mangaLaangiye ninagondisi eraguve |
indirEshana kooDi indu nammani tanaka || 3 ||


Listen to song by Shri Vidyabhushana


Listen to song by Shri  Raichur Sheshagiridas Achar



Listen to song 




Sunday, August 9, 2020

ಮೂರುತಿಯನು ನಿಲ್ಲಿಸೋ ಮಾಧವ ನಿನ್ನ/ Murutiyanu Nilliso Madhava Ninna


ರಚನೆ : ಪುರಂದರ ದಾಸರು 

ಮೂರುತಿಯನು ನಿಲ್ಲಿಸೋ ಮಾಧವ ನಿನ್ನ
ಮೂರುತಿಯನು ನಿಲ್ಲಿಸೋ ||ಪ.||

ಎಳೆತುಳಸಿಯ ವನಮಾಲೆಯು ಕೊರಳೊಳು
ಹೊಳೆವ ಪೀತಾಂಬರದಿಂದಲೊಪ್ಪುವ ನಿನ್ನ ||೧||

ಮುತ್ತಿನ ಸರ ನವರತ್ನದುಂಗುರವಿಟ್ಟು
ಮತ್ತೆ ಶ್ರೀ ಲಕುಮಿಯು ಉರದಲೊಪ್ಪುವ ನಿನ್ನ ||೨||

ಭಕ್ತ ಕಲ್ಪತರು ಭಕ್ತರ ಸುರಧೇನು
ಮುಕ್ತಿದಾಯಕ ನಮ್ಮ ಪುರಂದರವಿಠಲ ನಿನ್ನ ||೩||


Author : Shir Purandara Dasaru

mUrutiyanu nillisO mAdhava ninna
mUrutiyanu nillisO ||pa.||

eLetuLasiya vanamAleyu koraLoLu
hoLeva pItAMbaradiMdaloppuva ninna ||1||

muttina sara navaratnaduMguraviTTu
matte shrI lakumiyu uradaloppuva ninna ||2||

bhakta kalpataru bhaktara suradhEnu
muktidAyaka namma puraMdaraviThala ninna ||3||


Listen to song by Shri Pt Venkatesh Kumar





Listen to song by Shri Bhimsen Joshi





ನಾನೇಕೆ ಬಡವನು ನಾನೇಕೆ ಪರದೇಶಿ / nAnEke baDavanu nAnEke paradEshi




ರಚನೆ : ಶ್ರೀ ಪುರಂದರ ದಾಸರು 

ನಾನೇಕೆ ಬಡವನು ನಾನೇಕೆ ಪರದೇಶಿ
ಶ್ರೀನಿಧಿ ಹರಿ ಎನಗೆ ನೀನಿರುವ ತನಕ ||ಪ.||

ಹುಟ್ಟಿಸಿದ ತಾಯ್ತಂದೆ ಇಷ್ಟಮಿತ್ರರು ನೀನೆ
ಅಷ್ಟಬಂಧುವು ಸರ್ವ ಬಳಗ ನೀನೆ
ಪೆಟ್ಟಿಗೆಯೊಳಗಿನ ಅಷ್ಟಾಭರಣ ನೀನೆ
ಶ್ರೇಷ್ಠ ಮೂರುತಿ ಕೃಷ್ಣ ನೀನಿರುವ ತನಕ ||೧||

ಒದಹುಟ್ಟಿದವ ನೀನೆ ಒಡಲಿಗ್ಹಾಕುವ ನೀನೆ
ಉಡಲು ಹೊದೆಯಲು ವಸ್ತ್ರ ಕೊಡುವವನು ನೀನೆ
ಮಡಾದಿ ಮಕ್ಕಳನೆಲ್ಲ ಕಡೆಹಾಯ್ಸುವವ ನೀನೆ
ಬಿಡದೆ ಸಲಹುವ ಒಡೆಯ ನೀನಿರುವ ತನಕ ||೨||

ವಿದ್ಯೆ ಕಲಿಸುವ ನೀನೆ ಬುದ್ಧಿ ಹೇಳುವ ನೀನೆ
ಉದ್ಧಾರಕರ್ತ ಮಮ ಸ್ವಾಮಿ ನೀನೆ
ಮುದ್ದು ಶ್ರೀ ಪುರಂದರ ವಿಠಲಾ ನಿನ್ನಡಿ ಮ್ಯಾಲೆ
ಬಿದ್ದುಕೊಂಡಿರುವ ಎನಗೇತರ ಭಯವು ||೩||


Author : Shree Purandara Dasaru

nAnEke baDavanu nAnEke paradEshi
shrInidhi hari enage nIniruva tanaka ||pa.||

huTTisida tAytaMde iShTamitraru nIne
aShTabaMdhuvu sarva baLaga nIne
peTTigeyoLagina aShTAbharaNa nIne
shrEShTha mUruti kRuShNa nIniruva tanaka ||1||

odahuTTidava nIne oDalig~hAkuva nIne
uDalu hodeyalu vastra koDuvavanu nIne
maDAdi makkaLanella kaDehAysuvava nIne
biDade salahuva oDeya nIniruva tanaka ||2||

vidye kalisuva nIne buddhi hELuva nIne
uddhArakarta mama swAmi nIne
muddu shrI puraMdara viThalA ninnaDi myAle
biddukoMDiruva enagEtara bhayavu ||3||


Listen to song by Shri Pt Venkatesh Kumar


Listen to song by Shri Puttur Narasimha Nayak


Listen to song by MS Subbulakshmi