ರಚನೆ : ಶ್ರೀ ವಿಠಲೇಶ ದಾಸರು
ಕೋರಿ ಕರೆವೆ ಗುರು ರಾಘವೇಂದ್ರನೆ |
ಬಾರೋ ಮಹಾ ಪ್ರಭುವೇ || ಪ ||
ಚಾರು ಚರಣ ಯುಗ ಸಾರಿ ನಮಿಪೆ ಬೇಗ |
ಬಾರೋ ಹೃದಯ ಸುಖ ಸಾರ ರೂಪವ ತೊರೋ || ಅ. ಪ. ||
ಎಲ್ಲಿ ನೋಡಲು ಹರಿ ಅಲ್ಲೇ ಕಾಣುವನೆಂದು |
ಕ್ಷುಲ್ಲ ಕಂಭವನೊಡೆದೂ |
ನಿಲ್ಲದೆ ನರಹರಿ ಚೆಲ್ವಿಕೆ ತೋರಲು |
ಫುಲ್ಲ ಲೋಚನ ಶಿಶು ಪ್ರಲ್ಹಾದನಾಗಿ ಬಾರೋ || 1 ||
ದೋಶ ಕಳೆದು ಸಿಂಹಾಸನವೇರಿದೆ |
ದಾಸ ಕುಲವ ಪೊರೆದೆ | ಶ್ರೀಶನರ್ಚಕನಾಗಿ |
ಪೋಶಿಸಿ ಹರಿಮತ ವ್ಯಾಸತ್ರಯವ ಗೈದ |
ವೇಶ ತಳೆದು ಬಾರೋ || 2 ||
ಮೂರ್ಜಗ ಮಾನಿತ ತೇಜೋ ವಿರಾಜಿತ |
ಮೂರ್ಜಗ ಮಹಾ ಮಹಿಮಾ |
ಓಜೆಗೊಳಿಸಿ ನಿಜ ರಾಜೀವನಂದದಿ |
ಪೂಜೆಗೊಳ್ಳುವ ಗುರುರಾಜ ರೂಪದಿ ಬಾರೋ || 3 ||
ಮಂತ್ರ ಸದನದೊಳು ಸಂತ ಸುಜನರಿಗೆ |
ಸಂತೋಷ ಸಿರಿಗರೆವೆ ಕಂತು ಪಿತನ ಪಾದ |
ಸಂತತ ಸೇವಿಪ ಶಾಂತ ಮೂರುತಿ |
ಎನ್ನಂತರಂಗದಿ ಬಾರೋ || 4 ||
ಈ ಸಮಯದಿ ಎನ್ನಾಸೆ ನಿನ್ನೊಳು ಬಲು |
ಸೂಸಿ ಹರಿಯುತಿಹುದು | ಕೂಸಿಗೆ ಜನನಿ |
ನಿರಾಸೆಗೊಳಿಸುವಳೆ | ದೋಷ ಕಳೆದು |
ವಿಠಲೇಶ ಹೃದಯಿ ಬಾರೋ || 5 ||
Rachane : Shree Vittalesha Dasaru
kOri kareve guru raaghavEndrane |
baarO mahaa prabhuvE || pa ||
chaaru charaNa yuga saari namipe bEga |
baarO hRudaya sukha saara roopava torO || a. pa. ||
elli nODalu hari allE kaaNuvanendu |
kShulla kambhavanoDedoo |
nillade narahari chelvike tOralu |
phulla lOchana shishu pralhaadanaagi baarO || 1 ||
dOsha kaLedu siMhaasanavEride |
daasa kulava porede |shreeshanarcakanaagi |
pOshisi harimata vyaasatrayava gaida |
vEsha taLedu baarO || 2 ||
moorjaga maanita tEjO viraajita |
moorjaga mahaa mahimaa |
OjegoLisi nija raajeevanandadi |
poojegoLLuva gururaaja roopadi baarO || 3 ||
mantra sadanadoLu santa sujanarige |
santOsha sirigareve kantu pitana paada |
santata sEvipa shaanta mooruti |
ennantarangadi baarO || 4 ||
ee samayadi ennaase ninnoLu balu |
soosi hariyutihudu |koosige janani |
niraasegoLisuvaLe | dOSha kaLedu |
viThalEsha hRudayi baarO || 5 ||
Listen to song by Shri Puttur Narasimha Nayak
No comments:
Post a Comment