Pages

Friday, August 21, 2020

ವಂದಿಪೆ ಗಜಮುಖನೆ ನಿನ್ನನು / Vandipe gajamukhane ninnanu


ರಚನೆ : ಶ್ರೀ ಇಂದಿರೇಶ ದಾಸರು 

ವಂದಿಪೆ ಗಜಮುಖನೆ ನಿನ್ನನು ಚಂದ್ರಶೇಖರ ಸುತನೆ
ನಂದಬಾಲನ ಸ್ಮರಣೆ ಮನದೊಳು ತಂದು ನಿಲಿಸು ಇದನೆ ||pa||

ಮಂಗಳ ಮೂರುತಿಯೆ ಕೊಡುವೆನು ತೆಂಗು ಬಾಳೆಯ ಗೊನೆಯ
ರಂಗನಮಲ ಕಥೆಯ ಮಾಡುವೆ ಸಂಗ ತೋರಿಸು ದೊರೆಯೆ ||1||

ಪಾಶಾಂಕುಶಧರನೆ ಸುಂದರ ಮೂಷಕವಾಹನನೆ
ಪೋಷಿಸು ಭಕ್ತರನೆ ಹರಿಕಥೆ ಭಾಷೆಲಿ ನುಡಿಸುವನೆ ||2||

ಪಾರ್ವತಿ ಪಂಕಜನೆ ವಿಘ್ನಗಳ್ಹಾರಿಸಿ ಪಾಲಿಪನೆ|
ಮಾರಜನಕ ಭಜನೆ ಮಾಡುವೆ ತೋರಿಸು ಮಾರ್ಗವನೆ ||3||

ಇಂದಿರೇಶನ ಭಜಕ ನಿನ್ನನು ತಂದು ಮನದಿ ತೂಕ
ಆನಂದದಿ ದಿನ ವಾರಾ ಮಾಳ್ಪುದು ಸುಂದರ ಸುರಲೋಕ ||4||

Author : Shree Indiresha Dasaru

Vandipe gajamukhane | ninnanu |
Chandrashekhara sutane |
Nanda baalana smarane |
Manadolu tandu nilisu idane || pa ||

Mangala moorutiye koduvenu |
Tengu baaleya goneya |
Ranganamala kateya | maaduve |
Sanga torisu doreye || 1 ||

Paashaamkushadharane |
Sundara mooshaka vaahanane |
Poshisu bhaktarane | harikathe |
Bhaashili nudisuvane || 2 ||

Paarvati pankajane |
Vignagalhaarisi paalipane |
Maarajanaka bhajane | maaduve |
Torisu maargavane || 3 ||

Indiresha bhajaka |
Ninnanu tandu manadi tooka |
Aanandadi ena vaakaa |
Maalpudu sundara suraloka || 4 ||


No comments:

Post a Comment