Pages

Sunday, August 9, 2020

ನಾನೇಕೆ ಬಡವನು ನಾನೇಕೆ ಪರದೇಶಿ / nAnEke baDavanu nAnEke paradEshi




ರಚನೆ : ಶ್ರೀ ಪುರಂದರ ದಾಸರು 

ನಾನೇಕೆ ಬಡವನು ನಾನೇಕೆ ಪರದೇಶಿ
ಶ್ರೀನಿಧಿ ಹರಿ ಎನಗೆ ನೀನಿರುವ ತನಕ ||ಪ.||

ಹುಟ್ಟಿಸಿದ ತಾಯ್ತಂದೆ ಇಷ್ಟಮಿತ್ರರು ನೀನೆ
ಅಷ್ಟಬಂಧುವು ಸರ್ವ ಬಳಗ ನೀನೆ
ಪೆಟ್ಟಿಗೆಯೊಳಗಿನ ಅಷ್ಟಾಭರಣ ನೀನೆ
ಶ್ರೇಷ್ಠ ಮೂರುತಿ ಕೃಷ್ಣ ನೀನಿರುವ ತನಕ ||೧||

ಒದಹುಟ್ಟಿದವ ನೀನೆ ಒಡಲಿಗ್ಹಾಕುವ ನೀನೆ
ಉಡಲು ಹೊದೆಯಲು ವಸ್ತ್ರ ಕೊಡುವವನು ನೀನೆ
ಮಡಾದಿ ಮಕ್ಕಳನೆಲ್ಲ ಕಡೆಹಾಯ್ಸುವವ ನೀನೆ
ಬಿಡದೆ ಸಲಹುವ ಒಡೆಯ ನೀನಿರುವ ತನಕ ||೨||

ವಿದ್ಯೆ ಕಲಿಸುವ ನೀನೆ ಬುದ್ಧಿ ಹೇಳುವ ನೀನೆ
ಉದ್ಧಾರಕರ್ತ ಮಮ ಸ್ವಾಮಿ ನೀನೆ
ಮುದ್ದು ಶ್ರೀ ಪುರಂದರ ವಿಠಲಾ ನಿನ್ನಡಿ ಮ್ಯಾಲೆ
ಬಿದ್ದುಕೊಂಡಿರುವ ಎನಗೇತರ ಭಯವು ||೩||


Author : Shree Purandara Dasaru

nAnEke baDavanu nAnEke paradEshi
shrInidhi hari enage nIniruva tanaka ||pa.||

huTTisida tAytaMde iShTamitraru nIne
aShTabaMdhuvu sarva baLaga nIne
peTTigeyoLagina aShTAbharaNa nIne
shrEShTha mUruti kRuShNa nIniruva tanaka ||1||

odahuTTidava nIne oDalig~hAkuva nIne
uDalu hodeyalu vastra koDuvavanu nIne
maDAdi makkaLanella kaDehAysuvava nIne
biDade salahuva oDeya nIniruva tanaka ||2||

vidye kalisuva nIne buddhi hELuva nIne
uddhArakarta mama swAmi nIne
muddu shrI puraMdara viThalA ninnaDi myAle
biddukoMDiruva enagEtara bhayavu ||3||


Listen to song by Shri Pt Venkatesh Kumar


Listen to song by Shri Puttur Narasimha Nayak


Listen to song by MS Subbulakshmi

No comments:

Post a Comment