ಅಂಜಿಕಿನ್ಯಾತಕಯ್ಯಾ ಸಜ್ಜನರಿಗೆ
ರಚನೆ : ಶ್ರೀ ಪುರಂದರ ದಾಸರು
ಅಂಜಿಕಿನ್ಯಾತಕಯ್ಯಾ ಸಜ್ಜನರಿಗೆ ಭಯವು ಇನ್ನ್ಯಾತಕಯ್ಯಾ || ಪ ||
ಸಂಜೀವರಾಯರ ಸ್ಮರಣೆ ಮಾಡಿದ ಮೇಲೆ || ಅ. ಪ. ||ಕನಸಿಲಿ ಮನಸಿಲಿ ಕಳವಳವಾದರೆ |
ಹನುಮನ ನೆನೆದರೆ ಹಾರಿ ಹೋಗೊದು ಪಾಪ || ೧ ||
ರೋಮ ರೋಮಕೆ ಕೋಟಿ ಲಿಂಗ ಉದುರಿಸಿದ |
ಭೀಮನ ನೆನೆದರೆ ಬಿಟ್ಟು ಹೊಗೊದು ಪಾಪ || ೨ ||
ಪುರಂದರವಿಠ್ಠಲನ ಪೂಜೆಯ ಮಾಡುವ |
ಗುರುಮಧ್ವರಾಯರ ಸ್ಮರಣೆ ಮಾಡಿದ ಮೇಲೆ || ೩ ||
Anjikinyatakayya Sajjanarige
Author : Shree Purandara Dasaru
anjikinyatakayya sajjanarige bhayavu inyatakayya |
sanjivarayara smarane madida mele |kanasali manasali kalavalavadare |
hanumana nenedare hari hogade bhiti ||1||
roma romake koti lingavudarisida |
bhimana nenedare bittu hogade biti ||2||
purandara vittalana pujeya maduva |
guru madvarayara smarane madida mele ||3||
Listen to song by Shree Vidyabhushana
Listen to song by Shree M Balamuralikrishna
Listen to song by Shree Pt Vinayak Torvi
No comments:
Post a Comment