Pages

Monday, June 1, 2020

ಆದಿಯಲಿ ಗಜಮುಖನ ಅರ್ಚಿಸಿ ಆರಂಭಿಸಲು / ādiyali gajamukhana archisi ārambhisalu



ರಚನೆ : ಶ್ರೀ ಪುರಂದರ ದಾಸರು 

ಆದಿಯಲಿ ಗಜಮುಖನ ಅರ್ಚಿಸಿ ಆರಂಭಿಸಲು
ಆವ ಬಗೆ ಕಾರ್ಯತತಿ ಸಿದ್ಧಿಗೊಳಿಸಿ
ಮೋದದಿಂ ಸಲಿಸುವ ಮನದಿಷ್ಟವ ||

ಸಾಧು ಜನರೆಲ್ಲ ಕೇಳಿ ಸಕಲ ಸುರರಿಂಗೆ
ಮಾಧವನೇ ನೇಮಿಸಿಪ್ಪ ಈಯಧಿಕಾರವ ||
ಆದರದಿಂದ ಅವರವರೊಳು ನಿಂದು ಕಾರ್ಯಗಳ
ಭೇದಗೊಳಿಸದೆ ಮಾಳ್ಪ ಪುರಂದರವಿಠಲ ||

Author : Shri Purandara Dasaru

ādiyali gajamukhana archisi ārambhisalu
āva bage kāryatati sid’dhigoḷisi
mōdadiṁ salisuva manadiṣṭava

sādhu janarella kēḷi sakala surariṅge
mādhavanē nēmisippa īyadhikārava
ādaradinda avaravaroḷu nindu kāryagaḷa
bhēdagoḷisade māḷpa purandaraviṭhala ||




Listen to song by Shri Vidyabhushana




No comments:

Post a Comment