Pages

Saturday, June 6, 2020

ಇಂದು ನಿನ್ನ ಮೊರೆಯ ಹೊಕ್ಕೆನು ವೆಂಕಟೇಶನೇ / Indu Ninna Moreya Hokke VenkatEshane


ರಚನೆ : ಶ್ರೀ ಪುರಂದರ ದಾಸರು 

ಇಂದು ನಿನ್ನ ಮೊರೆಯ ಹೊಕ್ಕೆನು ವೆಂಕಟೇಶನೇ
ಎಂದಿಗಾದರೆನ್ನ ಕಾಯೋ ಶ್ರೀನಿವಾಸನೇ || ಪ ||

ಶೇಷಗಿರಿಯ ವಾಸ ಶ್ರೀಶ ದೋಷರಹಿತನೇ
ಏಸು ದಿನಕೂ ನಿನ್ನ ಪಾದ ದಾಸನು ನಾನೇ
ಕ್ಲೇಶ ಗೈಸದಿರು ಎನ್ನ ಸ್ವಾಮಿಯು ನೀನೇ || ೧ ||

ಕಮಲ ನಯನ ಕಾಮ ಜನಕ ಕರುಣ ವಾರಿಧೇ
ರಮೆಯನಾಳ್ವ ಕಮಲನಾಭ ಹೇ ದಯಾನಿಧೇ
ಯಮನ ಪುರದೀ ಶಿಕ್ಷಿಸದಿರು ಪಾರ್ಥ ಸಾರಥೇ || ೨ ||

ಉರಗ ಶಯನ ಸುರರಿಗೊಡೆಯ ಸಿರಿಯ ರಮಣನೇ
ಶರಣಪಾಲ ಬಿರುದು ತೋರಿ ಪೊರೆವ ದೇವನೇ
ಕರುಣಿಸೆಮಗೆ ಮುಕುತಿಯನು ಪುರಂದರ ವಿಠಲನೇ || ೩ ||

Author : Shri Purandara Dasaru

indu ninna moreya hokke venkaTEshane
endigAdar enna kAyO shrInivAsane || pa ||

shESagiriya vAsA shrIsha dOSa rahitane
Eshu dinaku ninna pAda dAsanu nAnE
klEsha kEyisa tiru enna svAmiyu nInE || 1 ||

kamala nayana kAma janaka karuna vAridhe
Rameya natha kamala natha he dayanidhe
yamana puradi shik shisa tiru pArtha sArathiyE || 2 ||

uraga shayana surari koDeya siriya ramaNane
sharaNa bAla birudu tOri poreyo dEvanE
karuNi senage mukuthiya purandara viTTalanE || 3 ||


Listen to song by Shri Vidyabhushana


Listen to song by Shri Puttur Narasimha Nayak

Listen to song by M Balamuralikrishna



No comments:

Post a Comment