Pages

Saturday, June 6, 2020

ಗುಮ್ಮನ ಕರೆಯದಿರೆ / Gummana Kareyadire


ರಚನೆ : ಶ್ರೀ ಪುರಂದರ ದಾಸರು 

ಗುಮ್ಮನ ಕರೆಯದಿರೆ ಅಮ್ಮ ನೀನು ಗುಮ್ಮನ ಕರೆಯದಿರೆ || ಪ ||

ಸುಮ್ಮನೆ ಇದ್ದೇನು ಅಮ್ಮಿಯ ಬೇಡೆನು
ಮಮ್ಮು ಉಣ್ಣುತೇನೆ ಅಮ್ಮ ಅಳುವುದಿಲ್ಲ ||ಅ ಪ ||

ಹೆಣ್ಣುಗಳಿರುವಲ್ಲಿಗೆ ಹೋಗಿ ಅವರ ಕಣ್ಣು ಮುಚ್ಚುವುದಿಲ್ಲವೆ
ಚಿಣ್ಣರ ಬಡಿಯೆನು ಅಣ್ಣನ ಬೈಯೆನು ಬೆಣ್ಣೆಯ ಬೇಡೆನು ಮಣ್ಣು ತಿನ್ನುವುದಿಲ್ಲ || ೧ ||

ಬಾವಿಗೆ ಹೋಗೆ ಕಾಣೆ ಅಮ್ಮ ನಾನು ಹಾವಿನೊಳಡೆ ಕಾಣೆ
ಆವಿನ ಮೊಲೆಯೂಡೆ ಕರುಗಳ ಬಿಡೆ ನೋಡೆ ದೇವರಂತೆ ಒಂದು ಠಾವಿಗೆ ಕೂರುವೆ || ೨ ||

ಮಗನ ಮಾತನು ಕೇಳುತ ಗೋಪಿದೇವಿ ಮುಗುಳು ನಗುವು ನಗುತಾ
ಜಗದೊಡೆಯ ಶ್ರಿ ಪುರಂದರವಿಠಲನ ಬಿಗಿದಪ್ಪಿಕೊಂಡಳು ಮೋಹದಿದಾಗ || ೩ ||

Author : Shri Purandara Dasaru

gummana kareyadire amma nInu gummana kareyadire || pa ||
summane iddEnu ammiya bEDanu mammu uNNutene amma aLuvudilla || a pa ||

heNNUgaLiruvallige hOgi avara kaNNU muccuvudillave
ciNNara baDiyenu aNNana baiyenu beNNeya bEDanu maNNU tinnuvadilla || 1 ||

bAvige hOge kANe amma nAnu hAvinoLADe kANe
Avina moleyUDe karugaLa biDe nODe dEvarante ondu dhAvige kUDuve || 2 ||

magana mAtanu kELuta gOpI dEvi muguLu nageya naguta
jagadoDeya shrI purandara viTTalana bigidappi koNDaLu mOhadindAga || 3 ||

Listen to song by Shri Vidyabhushana


Listen to song by Puttur Narasimha Nayak


Listen to song by PB Srinivas & S Janaki


No comments:

Post a Comment