ರಚನೆ : ಶ್ರೀ ಪುರಂದರ ದಾಸರು
ಸತತ ಗಣನಾಥ ಸಿಧ್ಧಿಯನೀವ ಕಾರ್ಯದಲಿ ॥ಪ॥
ಮತಿ ಪ್ರೇರಿಸುವಳು ಪಾರ್ವತಿ ದೇವಿ
ಮುಕುತಿ ಪಥಕೆ ಮನವೀವ ಮಹರುದ್ರಃ ದೇವರು ॥೧॥
ಭಕುತಿದಾಯಕಳು ಸಿರಿ ಭಾರತಿದೇವಿ
ಯುಕುತಿ ಶಾಸ್ತ್ರಗಳಲಿ ವನಜಸಂಭವನರಸಿ
ಸತ್ಕರ್ಮಗಳ ನಡೆಸಿ ಸುಜ್ಞಾನ ಮತಿಯಿತ್ತು
ಗತಿ ಪಾಲಿಸುವ ನಮ್ಮ ಪವಮಾನನು ॥೨॥
ಚಿತ್ತದಲಿ ಅನಂದ ಸುಖವನೀವಳು ರಮಾ ಭ
ಕುತ ಜನರೊಡೆಯ ನಮ್ಮ ಪುರಂದರವಿಟ್ಕಲನು
ಸತತ ಇವರಲಿ ನಿಂತು ಈ ಕೃತಿಯ ಸಡೆಸುವನು ॥೩॥
Author : Shri Purandara Dasaru
satata gaNanaatha sidhdhiyaneeva kaaryadali ॥pa॥
mati prErisuvaLu paarvati dEvi
mukuti pathake manaveeva maharudra dEvaru ॥1॥
bhakuti daayakaLu siri bhaarati dEvi
yukuti shaastradali vanajasambhavanarasi
satkarmagaLa nadEsi sujnyaana matiyittu
gati palisuva namma pavamaananu ॥2॥
chittadali aananda sukhavaneevaLu rama bha
kuta janaroDeya namma purandara vittalanu
satata ivarali nintu ee krutiya nadesuvanu ॥3॥
Listen to song by Smt VN Padmini
Listen to song by Bombay Sisters
No comments:
Post a Comment