Pages

Saturday, June 6, 2020

ರಾಮ ಮಂತ್ರವ ಜಪಿಸೋ / Rama Mantrava JapisO



ರಚನೆ : ಶ್ರೀ ಪುರಂದರದಾಸರು

ರಾಮ ಮಂತ್ರವ ಜಪಿಸೋ ಹೇ ಮನುಜ
ರಾಮ ಮಂತ್ರವ ಜಪಿಸೋ || ಪ ||
ಆ ಮಂತ್ರ ಈ ಮಂತ್ರ ಜಪಿಸಿ ಕೆಡಲು ಬೇಡ
ಸೋಮಶೇಖರ ತನ್ನ ಭಾಮೆಗ್ಹೆಳಿದ ಮಂತ್ರ || ಅ ಪ ||

ಕುಲಹೀನನಾದರು ಕೂಗಿ ಜಪಿಸೋ ಮಂತ್ರ
ಸಲೆಬೀದಿಯೊಳು ಉಚ್ಚರಿಸುವ ಮಂತ್ರ
ಹಲವು ಪಾಪಂಗಳ ಹದಗೆಡಿಸುವ ಮಂತ್ರ
ಸುಲಭದಿಂದಲಿ ಮೋಕ್ಷ ಸೂರೆಗೊoಬುವ ಮಂತ್ರ || ೧ ||

ಮರುತಾತ್ಮಜ ನಿತ್ಯ ಸ್ಮರಣೆ ಮಾಡುವ ಮಂತ್ರ
ಸರ್ವ ರಿಶಿಗಳಲಿ ಸೇರಿದ ಮಂತ್ರ
ದುರಿತ ಕಾನನಕಿದು ದಾವಾನಲ ಮಂತ್ರ
ಪೊರೆದು ವಿಭೀಷಣಗೆ ಪಟ್ಟಗಟ್ಟಿದ ಮಂತ್ರ || ೨ ||

ಸ್ನಾನ ಮೌನಂಗಳಿಗೆ ಸಾಧನದ ಮಂತ್ರ
ಜ್ಞಾನಿಗಳು ಮನದಿ ಧ್ಯಾನಿಪ ಮಂತ್ರ
ಹೀನ ಗುಣಂಗಳ ಹಿಂಗಿಸುವ ಮಂತ್ರ
ಏನೆಂಬೆ ವಿಭೀಷಣಗೆ ಪಟ್ಟಗಟ್ಟಿದ ಮಂತ್ರ || ೩ ||

ಸಕಲ ವೇದಂಗಳಿಗೆ ಸಾರವೆನಿಪ ಮಂತ್ರ
ಮುಕುತಿ ಮಾರ್ಗಕೆ ಇದೆ ಮೂಲ ಮಂತ್ರ
ಭಕುತಿ ರಸಕೆ ಬಟ್ಟೆ ಒಮ್ಮೆ ತೋರುವ ಮಂತ್ರ
ಸುಖ ನಿಧಿ ಪುರಂದರ ವಿಠಲನ ಮಂತ್ರ || ೪ ||

ಜ್ಞಾನನಿಧಿ ನಮ್ಮ ಆನ೦ದ ತೀರ್ಥರು
ಸಾನುರಾಗದಿ ನಿತ್ಯ ಸೇವಿಪ ಮಂತ್ರ
ಭಾನು ಕುಲಾ೦ಬುಧಿ ಸೋಮನೆನಿಪ ನಮ್ಮ
ದೀನ ರಕ್ಷಕ ಪುರಂದರವಿಠಲನ ಮಂತ್ರ || ೫ ||

Author : Shri Purandara Dasaru

rAma mantrava japiso hE manujA
rAma mantrava japiso || pa ||
aa mantra ee mantra japisi keDabEDa
sOmashEkhara tanna bhAmini gorediha || a pa ||

kula hInanAdarau kUgi japisuva mantra
sale bIdiyoLu uchcharipa mantra
halavu pApangaLa hadageDisuva mantra
sulabhadindali svarga sUre kombuva mantra || 1 ||

marutAtmaja nitya smaraNe mADuva mantra
sarva ruSigaLalli sErida mantra
durita kAnanakidu dAvAnala mantra
poredu vibhISaNage paTTa kaTTida mantra || 2 ||

snAna maunangaLige sAdhanada mantra
mAnvaru manadi dhyAnipa mantra
hIna guNangaLa hisukutiha mantra
Enembe vibhISaNage sAravinibha mantra || 3 ||

sakala vEdagaLige sAravenipa mantra
mukuti mArgake idE mUla mantra
bhakuti rasake ommebaTTe tOruva mantra
sukhanidhi purandara viTTalana mahA mantra || 4 ||

jnAnanidhi namma Ananda tIrttaru
sAnurAgadi nitya sEvipa mantra
bhAnu kulAmbudhi sOmanenipa namma
dInarakSaka purandara viTTalana mantra || 5 ||

Listen to song by Shri Vidyabhushana


Listen to song by Shri Puttur Narasimha Nayak


Listen to song by Dr Raj Kumar


Listen to song by TN Seshagopalan


Listen to song by Nandini Rao Gujar


No comments:

Post a Comment