Pages

Sunday, June 7, 2020

ಟೀಕಾಚಾರ್ಯರ ಪಾದ ಸೋಕಿದ ಕೊನೆ ಧೂಳಿ / Teekaacaaryara paada sOkida kone dhooLi


ರಚನೆ : ಶ್ರೀ ವಿಜಯದಾಸರು 

ಟೀಕಾಚಾರ್ಯರ ಪಾದ ಸೋಕಿದ ಕೊನೆ ಧೂಳಿ |
ತಾಕಿದ ಮನುಜರಿಗೆ || ಪ ||
ಕಾಕುಗೊಳಿಸುವ ಅನೇಕ ಪಾಪಂಗಳ |
ಬೀಕಿ ಬೀಸಾಟೋದು ತಾಕುವ ಮನುಜಗೆ || ಅ. ಪ.||

ಮಧ್ವಮತವೆಂಬೋ ದುಗ್ಧಾಬ್ಧಿಯೊಳು |
ಉದ್ಭವಿದ ಚಂದ್ರಮನೋ |
ಅದ್ವೈತ ಮತ ವಿಪಿನ ಭೇದನ ಕುಠಾರಾ |
ವಿದ್ಯಾರಣ್ಯನ ಗರ್ವಕ್ಕೆ ಪರಿಹಾರಾ || 1 ||

ತತ್ತ್ವವ ನುಡಿಸಲು ತತ್ವ ಸುಧಾಭಾಷ್ಯ |
ವಿಸ್ತರಿಸಿದ ಚಂದ್ರನೋ
ಚಿತ್ತವಿಟ್ಟು ಮಾಡಿ ಟೀಕಾವನ್ನೇ ಬರೆದು |
ಬರೆದು ಸುತ್ತೇಳು ಜಗಕೆಲ್ಲ ಪ್ರಕಟಿಸಿ ಮೆರೆದಂಥ || 2 ||

ಎಂದಿಗಾದರೂ ಒಮ್ಮೆ ಕೊನೆ ನಾಲಿಗೆಯಿಂದ |
ಬಿಂದುಮಾತ್ರದಿ ನೆನೆಯೆ | ಮಂದ ಮತಿಗಾದರೂ |
ಅಜ್ಞಾನ ನಾಶನ |
ಸಂದೇಹವಿಲ್ಲವಯ್ಯಾ ಸ್ಮರಣೆ ಮಾಡಿದ ಮೇಲೆ || 3 ||

"ಜ" ಎಂದು ನುಡಿಯಲು ಜಯಶೀಲನಾಗುವ |
"ಯ" ಎಂದು ನುಡಿಯಲು ಯಮನಂಜುವ |
"ತೀ" ಎಂದು ನುಡಿಯಲು ತಿಮಿರ ಪಾತಕ ಹಾನಿ |
"ರ್ಥ" ಎಂದು ನುಡಿಯಲು ತಾಪತ್ರಯ ಪರಿಹಾರ || 4 ||

ಯೋಗಿ ಅಕ್ಷೋಭ್ಯರ ಕರಕಮಲ ಸಂಜಾತಾ |
ಭಾಗವತರ ಪ್ರೀಯನೆ ಯೋಗಿಗಳರಸನೆ |
ಮಳಖೇಡ ನಿವಾಸಾ ಕಾಗಿಣಿ ತಟವಾಸ |
ವಿಜಯವಿಠ್ಠಲದಾಸಾ || 5 ||

Author : Shree Vijaya Dasaru

Teekaacaaryara paada sOkida kone dhooLi |
taakida manujarige || pa ||
kaakugoLisuva anEka paapangaLa |
beeki beesaaTOdu taakuva manujage || a. pa.||

madhvamatavembO dugdhaabdhiyoLu |
udbhavida chandramanO |
advaita mata vipina bhEdana kuThaaraa |
vidyaaraNyana garvakke parihaaraa || 1 ||

tattwava nuDisalu tatwa sudhaabhaaShya |
vistarisida chandranO chittaviTTu maaDi
TeekaavannE baredu |
baredu suttELu jagakella prakaTisi meredantha ||2 ||

endigaadaroo omme kone naaligeyinda |
bindumaatradi neneye | manda matigaadaroo |
aj~jaana naashana |
sandEhavillavayyaa smaraNe maaDida mEle || 3||

"ja" endu nuDiyalu jayasheelanaaguva |
"ya" endu nuDiyalu yamananjuva |
"tee" endu nuDiyalu timira paataka haani |
"rtha" endu nuDiyalu taapatraya parihaara || 4 ||

yOgi akShObhyara karakamala saMjaataa |
bhaagavatara preeyane yOgigaLarasane |
maLakhEDa nivaasaa kaagiNi taTavaasa |
vijayaviThThaladaasaa || 5 ||

Listen to song here by Shri Anant Kulkarni



No comments:

Post a Comment