Pages

Sunday, June 7, 2020

ನೀನೆ ದಯಾಳು ನಿರ್ಮಲ ಚಿತ್ತ ಗೋವಿಂದ / Neene DayaaLu Nirmala Chitta Govinda



ರಚನೆ : ಪುರಂದರ ದಾಸರು

ನೀನೆ ದಯಾಳು ನಿರ್ಮಲ ಚಿತ್ತ ಗೋವಿಂದ |
ನಿಗಮ ಗೋಚರ ಮುಕುಂದ || ಪ ||
ಜ್ಞಾನಿಗಳರಸ ನೀನಲ್ಲದೆ ಜಗಕಿನ್ನು |
ಮಾನದಿಂದಲಿ ಕಾಯ್ವ ದೊರೆಗಳ ನಾ ಕಾಣೆ || ಅ.ಪ. ||

ದಾನವಾಂತಕ ದೀನ ಜನ ಮಂದಾರನೆ |
ಧ್ಯಾನಿಪರ ಮನ ಸಂಚಾರನೆ ||
ಮೌನನಾದೆನು ನಿನ್ನ ಧ್ಯಾನಾನಂದದಿ ಈಗ |
ಸಾನುರಾಗದಿ ಕಾಯೊ ಸನಕಾದಿ ವಂದ್ಯನೆ || 1 ||

ಬಗೆ ಬಗೆಯಲಿ ನಿನ್ನ ಸ್ತುತಿಪೆನೊ ನಗಧರ |
ಖಗಪತಿ ವಾಹನನೇ |
ಮಗುವಿನ ಮಾತೆಂದು ನಗುತ ಕೇಳಿ ನೀನು |
ಬೇಗದಿಂದಲಿ ಕಾಯೊ ಸಾಗರ ಶಯನನೇ || 2 ||

ಮಂದರಧರ ಅರವಿಂದಲೋಚನ ನಿನ್ನ |
ಕಂದನೆಂದೆನಿಸೊ ಎನ್ನ |
ಸಂದೇಹವೇಕಿನ್ನು ಸ್ವಾಮಿ ಮುಕುಂದನೇ |
ಬಂದೆನ್ನ ಕಾಯೊ ಶ್ರೀ ಪುರುಂದವಿಠ್ಠಲ || 3 ||

Author : Shree Purandara Dasaru

neene dayaaLu nirmala chitta gOvinda |
nigama gOchara mukunda || pa ||

gnyaanigaLarasa neenallade jagakinnu |
maanadindali kaayva doregaLa naa kaaNe || a.pa||

daanavaantaka deena jana mandaarane |
dhyaanipara mana sanchaarane ||
mounanaadenu ninna dhyaanaanandadi eega |
saanuraagadi kaayo sanakaadi vandyane || 1 ||

bage bageyali ninna stutipeno nagadhara |
khagapati vaahananE |
maguvina maatendu naguta kELuta bandu|
bEgadindali kaayo saagara shayananE || 2 ||

mandaradhara aravindalOchana ninna |
kandanendeniso enna |
sandEhavEkinnu swaami mukundanE |
bandenna kaayo shree purundaviThThala || 3 ||

Listen to song by Shri Vidyabhushana


Listen to song by Shri Shankar Shanbhogue


Listen to song by Shri Upendra Bhat



Listen to song by Ustaad Fayaz Khan



No comments:

Post a Comment