Pages

Saturday, June 6, 2020

ಆನೆ ಬಂದಿತಮ್ಮ ಮರಿ ಆನೆ ಬಂದಿತಮ್ಮ/ Aae Banditamma Mmari Aane Banditamma


ರಚನೆ : ಶ್ರೀ ಪುರಂದರ ದಾಸರು 

ಆನೆ ಬಂದಿತಮ್ಮ ಮರಿ ಆನೆ ಬಂದಿತಮ್ಮ | ಪ |
ತೊಲಗಿರೆ ತೊಲಗಿರೆ ಪರಬ್ರಹ್ಮ |
ಬಲು ಸರಪಳಿ ಕಡಿಕೊಂಡು ಬಂತಮ್ಮ | ಅ.ಪ. |

ಕಪಟ ನಾಟಕದ ಹಿರಿಯಾನೆ |
ನಿಕಟ ಸಭೆಯೊಳು ನಿಂತಾನೆ |
ಶಕಟನ ಬಂಡಿಯ ಮುರಿದಾನ್ |
ಕಪಟನಾಟಕದಿಂದ ಸೋದರಮಾವನ |
ಅಕಟಕಟೆನ್ನದೆ ಕೊಂದಾನೆ | ೧ |

ಏಳು ಭುವನವನುಂಡಾನೆ|
ಸ್ವಾಮಿ ಬಾಲಕನೆಂಬ ಚೆಲ್ವಾನೆ |
ಬಲ್ಲ ಗೊವುಗಳ ಕೂಡ ನಲಿದಾನೆ |
ಚೆಲುವ ಕಾಳಿಂಗನ ಹೆಡೆಯಲ್ಲಾಡುತ |
ಸೊಬಗ್ಹೆಚ್ಚಿ ಬರುವಾನೆ | ೨ |

ಭೀಮಾರ್ಜುನರನು ಗೆಲಿದಾನೆ |
ಪರಮ ಭಾಗವತರ ಪ್ರಿಯದಾನೆ |
ಮುದದಿಂದ ಮಥುರೆಲಿ ನಿಂತಾನೆ |
ಮದನನಯ್ಯ ಮುದದಿಂದ ಶ್ರೀಕೃಷ್ಣ |
ಪುರಂದರವಿಠ್ಠಲನೆಂಬಾನೆ | ೩ |

Author : Shri Purandara Dasaru

ane banditamma mari ane banditamma | pa |
tolagire tolagire parabrahma |
balu sarapaLi kadikondu bantamma | a.pa. |

kapata natakada mariyane |
nikata sabheyolu nintane |
sakatana bandiya muridane |
kapatanatakadinda sodaramavana |
akatakatennade kondane | 1 |

elu bhuvanavanundane|
svami balaengenba chelvane |
balla govugalakuda nalidane |
petta kalingana hedeyalladuta |
sobag~hechchi barutane | 2 |

bheemarjunaranu gelidane |
parama bhagavatara priyadane |
mudadinda mathureli nintane |
madananayya mudadinda sreekrishna |
purandaraviththalanenbane | 3 |

Listen to song by Shri Vidyabhushana


Listen to Shri Puttur Narasimha Nayak




No comments:

Post a Comment