Pages

Saturday, June 6, 2020

ರಾಮನಾಮ ಭಜಿಸಿದವಗೆ ಉಂಟೆ ಭವದ ಬಂಧನ / Ramanama Bhajisidavage Unte Bhavada Bandhana


ರಚನೆ : ಗೋಪಾಲ ದಾಸರು 

ರಾಮನಾಮ ಭಜಿಸಿದವಗೆ ಉಂಟೆ ಭವದ ಬಂಧನ | ಪ |
ಕಾಮ ಹರನ ಸತಿಯು ಸದಾ ನೇಮ ದಿಂದ ಭಜಿಸುವ | ಅ.ಪ |

ಶಿವನು ಧನ್ಯವಾದ ಮೌನಿ ಯುವತಿ ಪಾವನೆಯಾದಳು
ರವಿಯ ಸುತನು ಪದವಿ ಪಡೆದ ಧೃವನು ದಿವಿಜನೆನಿಸಿದ | ೧ |

ಕರಿವರ ಪ್ರಹ್ಲಾದ ದ್ರೌಪದಿ ವರ ವಿಭೀಷಣರೆಲ್ಲರು
ಹರಿಯ ಸ್ಮರಣೆ ಮಾಡಿ ಸುಖರಾಗಲಿಲ್ಲವೇ | ೨ |

ಗಿರಿಜೆ ರಾಮ ಮಂತ್ರದಿಂದ ಪರಮ ಮಂಗಳೆ ಯಾದಳು
ವರದ ಗೋಪಾಲ ವಿಠ್ಠಲ ನಾಮ ದುರಿತಕಾನನ ಪಾವಕ | ೩ |


Author : Gopala Dasaru

ramanama bhajisidavage unte bhavada bandhana | pa |
kama harana satiyu sada nema dinda bhajisuva | a.pa |

sivanu dhanyavada mauni yuvati pavaneyadalu
raviya sutanu padavi padeda dhruvanu divijanenisida | 1 |

karivara prahlada draupadi vara vibhishanarellaru
hariya smarane madi sukaragalillave | 2 |

girije rama mantradinda parama mangale yadalu
varada gopala viththala nama duritakanana pavaka | 3 |


Listen to song by Smt ML Vasanthakumari


Listen to song by Sudha Raghunathan


Listen to song

No comments:

Post a Comment