Pages

Sunday, June 7, 2020

ವರ ವೈಕುಂಠದಿ ಬಂದವಗೆ / Vara VaikunThadi Bandavage


ರಚನೆ : ಗೋಕಾವಿ ಅನಂತಾದ್ರೀಶ ದಾಸರು 

ಮಂಗಳಮ್ ಜಯ ಮಂಗಳಮ್ || ಪ ||

ವರ ವೈಕುಂಠದಿ ಬಂದವಗೆ | ವರಗಿರಿಯಲಿ ಸಂಚರಿಸುವವಗೆ |
ವರಹ ದೇವನ ಅನುಸರಿಸಿ ಸ್ವಾಮಿ ಪುಷ್ಕರಣಿ ತೀರದಲ್ಲಿರುವವಗೆ || 1 ||

ಸರಸದಿ ಬೇಟೆಗೆ ಹೊರಟವಗೆ | ಸರಸಿಜಾಕ್ಷಿಯಳ ಕಂಡವಗೆ |
ಮರುಳಾಟದಿ ತಾ ಪರವಶನಾಗುತ | ಕೊರವಿ ವೇಷ ಧರಿಸಿರುವವಗೆ || 2 ||

ಗಗನ ರಾಜನ್ ಪುರಕ್ ಹೋದವಗೆ | ಬಗೆ ನುಡಿಗಳ ನುಡಿದವಗೆ |
ಅಗವಾಸಿಗೆ ನಿನ್ನ ಮಗಳನು ಕೊಡು ಎಂದು ಗಗನ ರಾಜನ ಸತಿಗ್ ಹೇಳ್ದವಗೆ || 3 ||

ತನ್ನ ಕಾರ್ಯ ತಾ ಮಾಡ್ದವಗೆ | ಇನ್ನೊಬ್ಬರ ಹೆಸರ್ ಹೇಳ್ದವಗೆ |
ಮುನ್ನ ಮದುವೆ ನಿಶ್ಚಯವಾಗಿರಲು ತನ್ನ ಬಳಗ ಕರೆಸಿರುವವಗೆ || 4 ||

ಎತ್ತಿ ನಿಬ್ಬಣ ಹೊರಟವಗೆ | ನಿತ್ಯ ತೃಪ್ತನಾಗಿರುವವಗೆ |
ಉತ್ತರಣೆಯ ವಾಗರನುಂಡು | ತೃಪ್ತನಾಗಿ ತೇಗಿರುವವಗೆ || 5 ||

ಒದಗಿ ಮುಹೂರ್ತಕೆ ಬಂದವಗೆ | ಸದಯ ಹೃದಯನಾಗಿರುವವಗೆ |
ಮುದದಿಂದಲಿ ಶ್ರೀ ಪದುಮಾವತಿಯಳ ಮದುವೆ ಮಾಡಿಕೊಂಡ ಮದುಮಗಗೆ || 6 ||

ಕಾಂತೆಯಿಂದ ಸಹಿತಾದವಗೆ | ಸಂತೊಷದಿ ಕುಳಿತಿರುವವಗೆ |
ಸಂತತ ಶ್ರೀಮದನಂತಾದ್ರೀಶಗೆ | ಶಾಂತ ಮೂರ್ತಿ ಸರ್ವೋತ್ತಮಗೆ || 7 ||

Author : Shree Gokavi Anantadreesha Dasaru

mangaLam jaya mangaLam || pa ||

vara vaikunThadi bandavage varagiriyali sancharisuvavage |
varaha dEvana anusarisi swaami puShkaraNi teeradalliruvavage || 1 ||

sarasadi bETege horaTavage | sarasijaakShiyaLa kanDavage |
maruLaaTadi taa paravashanaaguta | koravi vESha dharisiruvavage || 2 ||

gagana raaja purak hOdavage | bage nuDigaLa nuDidavage |
agavaasige ninna magaLanu koDu endu gagana raajana satig hELdavage || 3 ||

tanna kaarya taa maaDdavage | innobbara hesar hELdavage |
munna maduve nishchayavaagiralu tanna baLaga karesiruvavage || 4 ||

etti nibbaNa horaTavage | nitya tRuptanaagiruvavage |
uttaraNeya vaagaranunDu | tRuptanaagi tEgiruvavage || 5 ||

odagi muhoortake bandavage | sadaya hRudayanaagiruvavage |
mudadiMdali shree padumaavatiyaLa maduve maaDikonDa madumagage || 6 ||

kaanteyiMda sahitaadavage | santoShadi kuLitiruvavage
santata shreemadanantaadreeshage | shaanta moorti sarvOttamage || 7 ||



No comments:

Post a Comment