ರಚನೆ : ಶ್ರೀ ಪುರಂದರ ದಾಸರು
ತಾರಕ್ಕ ಬಿಂದಿಗೆ ನಾ ನೀರಿಗ್ಹೋಗುವೆ |
ತಾರೇ ಬಿಂದಿಗೆಯ || ಪ ||
ಬಿಂದಿಗೆ ಒಡೆದರೆ ಒಂದೇ ಕಾಸು |
ತಾರೇ ಬಿಂದಿಗೆಯ || ಅ. ಪ. ||
ರಾಮ ನಾಮವೆಂಬೋ ರಸವುಳ್ಳ ನೀರಿಗೆ |
ತಾರೇ ಬಿಂದಿಗೆಯ ||
ಕಾಮಿನಿಯರ ಕೂಡೆ ಏಕಾಂತವಾಡೆನು |
ತಾರೇ ಬಿಂದಿಗೆಯ || 1 ||
ಗೊವಿಂದ ಎಂಬೋ ಗುಣವುಳ್ಳ ನೀರಿಗೆ |
ತಾರೇ ಬಿಂದಿಗೆಯ ||
ಆವಾವ ಪರಿಯಲ್ಲಿ ಅಮೃತದ ಪಾನಕ್ಕೆ |
ತಾರೇ ಬಿಂದಿಗೆಯ || 2 ||
ಬಿಂದು ಮಾಧವನ ಘಟ್ಟಕ್ಕೆ ಹೋಗುವೆ |
ತಾರೇ ಬಿಂದಿಗೆಯ ||
ಪುರಂದರವಿಠ್ಠಲಗೆ ಅಭಿಷೇಕ ಮಾಡುವೆ |
ತಾರೇ ಬಿಂದಿಗೆಯ || 3 ||
Author : Shri Purandara Dasaru
taarakka bindige naa neerig~hOguve |
taarE bindigeya || pa ||
bindige oDedare ondE kaasu |
taarE bindigeya || a. pa. ||
raama naamavembO rasavuLLa neerige |
taarE bindigeya ||
kaaminiyara kooDe EkaantavaaDenu |
taarE bindigeya || 1 ||
govinda embO guNavuLLa neerige |
taarE bindigeya ||
aavaava pariyalli amrutada paanakke |
taarE bindigeya || 2 ||
bindu maadhavana ghaTTakke hOguve |
taarE bindigeya ||
purandaraviThThalage abhiShEka maaDuve |
taarE bindigeya || 3 ||
Listen to song by Smt Kasturi Shankar
Listen to song by Dr Sarvamangala Shankar, Dr Rashmi S Manjunath
No comments:
Post a Comment