ರಚನೆ : ಶ್ರೀಕನಕ ದಾಸರು
ಏಳು ನಾರಾಯಣನೆ ಏಳು ಲಕ್ಷ್ಮೀರಮಣ
ಏಳು ಕಮಲಾಕ್ಷ ಕಮಲನಾಭ ಏಳಯ್ಯ ಬೆಳಗಾಯಿತು ಏಳಯ್ಯ ಬೆಳಗಾಯಿತು ||ಪ ||
ಏಳು ನಾರಾಯಣನೆ ಏಳು ಲಕ್ಷ್ಮೀರಮಣ
ಏಳು ಶ್ರೀ ಗಿರಿಯೊಡೆಯ ವೆಂಕಟೇಶ
ಏಳು ನಾರಾಯಣನೆ ಏಳು ಲಕ್ಷ್ಮೀರಮಣ
ಏಳು ಶ್ರೀ ಗಿರಿಯೊಡೆಯ ವೆಂಕಟೇಶ || ಅ ಪ ||
ಕಾಸಿದ್ದ ಹಾಲನ್ನು ಕಾವಡಿಯೊಳ್ ಹೆಪ್ಪಿಟ್ಟು
ಲೇಸಾಗಿ ಕಡೆದು ಹೊಸಬೆಣ್ಣೆ ಕೊಡುವೆ
ಶೇಷಶಯನನೆ ಏಳು ಸಮುದ್ರ ಮಂಥನವ ಮಾಡು
ದೇಶ ಕೆಂಪಾಯಿತು ಏಳಯ್ಯ ಹರಿಯೇ ||೧||
ಏಳು ನಾರಾಯಣನೆ ಏಳು ಲಕ್ಷ್ಮೀರಮಣ
ಏಳು ಶ್ರೀ ಗಿರಿಯೊಡೆಯ ವೆಂಕಟೇಶ
ಅರಳು ಮಲ್ಲಿಗೆ ಜಾಜಿ ಪರಿಮಳದ ಪುಷ್ಪಗಳ
ಸುರರು ತಂದಿದ್ದಾರೆ ಬಲು ಭಕುತಿಯಿಂದ
ಅರವಿಂದನಾಭ ಸಿರಿವಿಧಿಭವಾದಿಗಳೊಡೆಯ
ಹಿರಿದಾಗಿ ಕೋಳಿ ಕೂಗಿತು ಏಳಯ್ಯ ಹರಿಯೇ ||೨||
ಏಳು ನಾರಾಯಣನೆ ಏಳು ಲಕ್ಷ್ಮೀರಮಣ
ಏಳು ಶ್ರೀ ಗಿರಿಯೊಡೆಯ ವೆಂಕಟೇಶ
ದಾಸರೆಲ್ಲರು ಬಂದು ಧೂಳಿನದರ್ಶನಗಗೊಂಡು
ಲೇಸಾಗಿ ತಾಳ ದಂಡಿಗೆಯ ಪಿಡಿದು
ಶ್ರೀಶನೆಲೆಯಾದಿ ಕೇಶವ ನಿಮ್ಮ ಪಾದವನು
ಲೇಸಾಗಿ ಸ್ಮರಿಸಿ ಪೊಗಳುವರು ಶ್ರೀ ಹರಿಯೇ ||೩||
ಏಳು ನಾರಾಯಣನೆ ಏಳು ಲಕ್ಷ್ಮೀರಮಣ
ಏಳು ಶ್ರೀ ಗಿರಿಯೊಡೆಯ ವೆಂಕಟೇಶ
Author : Shri Kanaka Dasaru
yelu naaraayanane yelu lakshmi ramana Yelu kamalaaksha kamalanaabha
Elayya Belagaayithu….Elayya Belagaayithu ||pa||
yelu naaraayanane yelu lakshmi ramana
yelu shri giri odeya venkatesha
yelu naaraayanane yelu lakshmi ramana
yelu shri giriyodeya venkatesha ||a pa||
Kaasidda Haalannu Kaavadiyol heppittu
Lesaagi kadedu hosa benne koduve
Sheshashayanane Yelu Samudra mathanava Maadu
Desha Kempaayithu Elayya Hariye ||1||
yelu naaraayanane yelu lakshmi ramana yelu shri giriyodeya venkatesha
Aralu Mallige Jaaji Parimalada Pushpagala
Suraru Thandiddaare balu bhakuthiyinda
Aravinda naabha Siri vidhi bhavaadigalodeya
hiridaagi koli koogithu yelo hariye ||2||
yelu naaraayanane yelu lakshmi ramana yelu shri giriyodeya venkatesha
Daasarellaru Bandu Dhooli darushanagondu
Lesaagi Thaala Dandigeya Pididu
sreesha neleyAADIKESHAVA nimma paadavanu
lesaagi smarisi pogaluvaru sri hariye ||3||
yelu naaraayanane yelu lakshmi ramana yelu shri giriyodeya venkatesha
Listen to song by Shri Vidyabhushana
Listen to song by Shri Puttur Narasimha Nayak
Listen to song
No comments:
Post a Comment