Pages

Saturday, June 6, 2020

ಇಟ್ಟಿಗೆ ಮೇಲೆ ನಿಂತಾನಮ್ಮ ವಿಠಲ ತಾನು / Ittige Mele Ninta Namma Vittala Taanu


ರಚನೆ : ಶ್ರೀ ಪುರಂದರ ದಾಸರು 

ಇಟ್ಟಿಗೆ ಮೇಲೆ ನಿಂತಾನಮ್ಮ ವಿಠಲ ತಾನು
ಪುಟ್ಟ ಪಾದ ಊರಿ ದಾನು ದಿಟ್ಟ ತಾನು || ಪ ||

ಪುಟ್ಟ ಪಾದ ಊರಿ ದಾನು ಗಟ್ಟಿ ಯಾಗಿ ನಿಂತಾನಮ್ಮಾ
ಟೊಂಕದಮೆಲೆ ಕೈಯ್ಯ ಇಟ್ಟು ಭಕ್ತರ ಬರುವುದು ನೋಡುವನಮ್ಮಾ || ಅ. ಪ ||

ಪಂಢರ ಪುರದಲ್ಲಿ ಇರುವನಮ್ಮಾ ಪಾಂಡುರಂಗ ನೆಂಬುವರಮ್ಮಾ
ಚಂದ್ರಭಾಗ ಪಿತನಿವನಮ್ಮಾ ಅಂಗನೆ ರುಕ್ಮಿಣಿ ಅರಸನಮ್ಮಾ || ೧ ||

ಕನಕದಾಸೆ ಇವಗಿಲ್ಲ್ವಮ್ಮ ಹಣವೂ ಇವಗೆ ಬೇಕಿಲ್ಲ ವಮ್ಮಾ
ನಾದಬ್ರಹ್ಮ ಎಂಬುವರಮ್ಮಾ ಭಕ್ತರ ಭಜನೆ ಸಾಕಿವಗಮ್ಮಾ || ೨ ||

ಕರಿಯ ಕಂಬಳಿ ಹೊದ್ದಿವನಮ್ಮ ಹಣೆಗೆ ನಾಮವ ಹಚ್ಚಿಹನಮ್ಮಾ
ತುಳಸೀ ಮಾಲೆ ಹಾಕಿಹನಮ್ಮಾ ಪುರಂದರ ವಿಠಲನಿಗೊಲಿದಿಹನಮ್ಮಾ || ೩ ||

Author : Shri Purandara Dasaru

Ittige mele ninta namma vittala taanu
putta pada ooridanu ditta taanu ||pa||

putta pada ooridanu gattiyagi ninta namma
Tonkada mele kaiyanittu bhaktaru baruvadu noduvaramma ||a pa||

pandarapuradalli iruvanamma panduranga nembuvaramma
Chandrabhaga pitanivanamma aangane rukmini arasanamma ||1||

Kanakadaase Ivagillamma haNavu ivage bekillamma
Nada brahma nembuvaramma  bhaktara bhajane sakivagamma ||2||

Kariya kambali hodihanamma hanege nama hachihanamma
Tulasi maale hakihanamma purandara vitallage Olidihanamma ||3||

Listen to song by Raichur Seshagiridas


Listen to song by Sri Ramakrishna Katukukke


Listen to song by Mettur Brothers

No comments:

Post a Comment