ಪುರಂದರ ದಾಸರು ಕನಸಿನಲ್ಲಿ ಬಂದು ದಾಸಪ್ಪರವರಿಗೆ ವಿಜಯ ದಾಸ ಎಂದು ಬಿರುದಾಂಕಿತ ಕೊಟ್ಟರು. ವಿಜಯ ದಾಸರಿಗೆ ದಾಸರಾದ ಮೇಲೆ ಬರೆದ ಮೊದಲ ಹಾಡು ಆನಂದ ಆನಂದ ಮತ್ತೆ ಪರಮಾನಂದ ಎಂದು ಪ್ರತೀತಿ ಇದೆ. ವಿಜಯ ದಾಸರು ತಮ್ಮ ಹಿಂದಿನ ಜನ್ಮದಲ್ಲಿ ಮಧ್ವಪತಿ ಎಂಬ ಹೆಸರಿಂದ ಪುರಂದರ ದಾಸರ ನಾಲ್ಕನೇ ಮಗನಾಗಿದ್ದರು ಎಂದು ಕಥೆಗಳು ಹೇಳುತ್ತವೆ.
ರಚನೆ : ಶ್ರೀ ವಿಜಯ ದಾಸರು
ಆನಂದ ಆನಂದ ಮತ್ತೆ ಪರಮಾನಂದ || ಪ ||
ಆ ನಂದನ ಕಂದ ಒಲಿಯಲು ಏನಂದದ್ದೇ ವೇದವೃಂದಾ ||ಅ.ಪ||
ಆ ಮೊದಲು ಕ್ಷ ಕಾರಾಂತ ಈ ಮಹಾ ವರ್ಣಗಳೆಲ್ಲ |
ಸ್ವಾಮಿಯಾದ ವಿಷ್ಣುವೀನ ನಾಮವೆಂದು ತಿಳಿದವರಿಗೆ||೧||
ಬಾರೋ ತಾರೋ ಬೀರೋ ಸಾರೋ ಮಾರೋ ತೋರೋ ಹಾರೋ ಹೋರೋ |
ಸೇರೋ ತೋರೆಂಬುದೆಲ್ಲ ಈಶ ಪ್ರೇರಣೆ ಎಂದರಿತವರಿಗೆ || ೨ ||
ಜಲಕಾಷ್ಠ ಶೈಲ ಗಗನ ಜಲ ಪಾವಕ ವಾಯು ತರು |
ಫಲ ಪುಷ್ಪ ಬಳ್ಳಿಗಳಲ್ಲಿ ಹರಿ ವ್ಯಾಪ್ತನೆಂದರಿತವರೀಗೆ || ೩ ||
ಪೋಪುದು ಬಪ್ಪುದು ಕೋಪ ಶಾಂತ ಮಾಡುವುದು |
ರೂಪ ಲಾವಣ್ಯವು ಹರಿ ವ್ಯಾಪಾರ ಎಂದರಿತವರೀಗೆ || ೪ ||
ಮಧ್ವ ಶಾಸ್ತ್ರ ಪ್ರವಚನ ಮುದ್ದು ಕೃಷ್ಣ ದರುಶನ |
ಸಿದ್ಧ ವಿಜಯ ವಿಠ್ಠಲನ ಮನದಿ ಕೊಂಡಾಡುವವರಿಗೆ || ೫ ||
Author : Shri Vijaya Dasaru
ananda ananda matte paramaananda ||pa||
aa nandana kanda oliyalu enandadde vedavrundaa ||a pa||
aa modalu kshakaaraanta ee maha varNagaLella
swamiyaada vishnuVina naamavendu tiLidavarige ||1||