ಅಂಬಿಕಾತನಯ ಭೂತಾಂಬರಾಧಿಪ
ಗಣಪತಿ ಸ್ತೋತ್ರ
ರಾಗ - ಆನಂದ ಭೈರವಿ ಏಕತಾಳ
ರಚನೆ : ಶ್ರೀ ಜಗನ್ನಾಥ ದಾಸರು
ಅಂಬಿಕಾತನಯ ಭೂತಾಂಬರಾಧಿಪ ಸುರಕ-ದಂಬಸಂಪೂಜ್ಯ ನಿರವದ್ಯ । ನಿರವದ್ಯ ನಿನ್ನ ಪಾ
ದಾಂಬುಜಗಳೆಮ್ಮ ಸಲಹಲಿ ॥ಪ॥
ಗಜವಕ್ತ್ರ ಷಣ್ಮುಖಾನುಜ ಶಬ್ದ ಗುಣಗ್ರಹಕ
ಭುಜಗಕಟಿಸೂತ್ರ ಸುಚರಿತ್ರ । ಸುಚರಿತ್ರ ತ್ವತ್ವದಾಂ-
ಬುಜಗಳಿಗೆ ಎರಗಿ ಬನ್ಗೈಪೆ ॥ ೧॥
ವಿತ್ತಪತಿಮಿತ್ರಸುತ ಭೃತ್ಯಾನುಭೃತ್ಯನ ವಿ
ಪತ್ತುಪಡಿಸುವ ಅಜ್ಞಾನ । ಅಜ್ಞಾನ ಬಿಡಿಸಿ ಮಮ
ಚಿತ್ತಮಂದಿರದಿ ನೆಲೆಗೊಳ್ಳೋ ॥ ೨ ॥
ಕಕುಭೀಶ ನಿನ್ನ ಸೇವಕನ ಬಿನ್ನಪವ ಚಿ-
ತ್ತಕೆ ತಂದು ಹರಿಯ ನೆನೆವಂತೆ । ನೆನೆವಂತೆ ಕರುಣಿಸೋ
ಅಕುಟಿಲಾತ್ಮಕನೆ ಅನುಗಾಲ ॥ ೩ ॥
ಮಾತಂಗವರದ ಜಗನ್ನಾಥ ವಿಠ್ಠಲನ ಸಂ-
ಪ್ರೀತಿಂದ ಭಜಿಸಿ ಸಾರೂಪ್ಯ । ಸಾರೂಪ್ಯವೈದಿ ವಿ-
ಖ್ಯಾತಿಯುತನಾದೆ ಜಗದೊಳು ॥ ೪ ॥
Ambikatanaya bhootambaradhipa
Ganapati Stotra
Raga : Ananda Bhairavi , EkataLa
Author : Shri Jagannatha Dasaru
Ambikatanaya bhootambaradhipa sura-kadamba sampoojya niravadya। niravadya ninna paa-
daambujagaLemma salahali ॥pa॥
gajavaktra shanmukhanuja shabda guNagrahaka
bhujagakaTisootra sucharitra । sucharitra tavtpaada
ambujagaLige eragi bannipe ॥1॥
vittapatimitrasuta bhrutyaanubhrutyana vi
pattupaDisuva agnynaana । agnynaana biDisi mama
chittamandiradi nelegoLLo ॥2॥
kakubheesha ninna sevakana binnapava chi
ttakke tandu hariya nenevante । nenevante karuNiso
akuTilaatmakane anugaala ॥3॥
maatangavarada jagannatha vittalana sam
preetiyinda bhajisi saaroopya । saaroopya vaidi vi
khyaatiyutanaade jagadoLu ॥4॥
Note : Please let readers know if there are any links to listen to this song. Comment below
ಸೂಚನೆ : ಈ ಹಾಡನ್ನು ಕೇಳಲು ಏನಾದರೂ ಸೂಚನೆ ನಿಮಗೆ ಗೊತ್ತಿದ್ದರೆ ದಯವಿಟ್ಟುಓದುಗರಿಗೆ ತಿಳಿಸಿರಿ
No comments:
Post a Comment