Pages

Sunday, May 24, 2020

ತಲ್ಲಣಿಸದಿರು ಕಂಡ್ಯ ತಾಳು ಮನವೆ / TallaNisadiru kandya taalu manave

ತಲ್ಲಣಿಸದಿರು ಕಂಡ್ಯ ತಾಳು ಮನವೆ

ರಚನೆ :ಶ್ರೀ ಕನಕದಾಸರು

ತಲ್ಲಣಿಸದಿರು ಕಂಡ್ಯ ತಾಳು ಮನವೆ || ಪ ||
ಎಲ್ಲರನು ಸಲಹುವನು ಇದಕೆ ಸಂಶಯವಿಲ್ಲ || ಅ.ಪ ||

ಬೆಟ್ಟದಾ ತುದಿಯಲ್ಲಿ ಹುಟ್ಟಿದಾ ವೃಕ್ಷಕ್ಕೆ
ಕಟ್ಟೆಯನ್ನು ಕಟ್ಟಿ ನೀರೆರೆದವರು ಯಾರೊ
ಪುಟ್ಟಿಸಿದ ದೇವ ತಾ ಹೊಣೆಗಾರನಾಗಿರಲು
ಗಟ್ಯಾಗಿ ರಕ್ಷಿಪನು ಇದಕೆ ಸಂಶಯವಿಲ್ಲ || ೧ ||

ಅಡವಿಯೊಳಗಾಡುವ ಮೃಗಪಕ್ಷಿಗಳಿಗೆಲ್ಲ
ಅಡಿಗಡಿಗೆ ಆಹಾರ ಇತ್ತವರು ಯಾರೋ
ಹಡೆದ ಜನನಿಯ ತೆರದೆ ಸ್ವಾಮಿ ಹೊಣೆಗೀಡಾಗಿ
ಬಿಡದೆ ರಕ್ಷಿಪನಿದಕೆ ಸಂದೇಹ ಬೇಡ || ೨ ||

ಕಲ್ಲಿನಲಿ ಹುಟ್ಟಿರುವ ಕ್ರಿಮಿಕೀಟಗಳಿಗೆಲ್ಲ
ಅಲ್ಲಲ್ಲಿ ಆಹಾರವನು ತಂದೀಯುವವರ್ಯಾರೋ
ಬಲ್ಲಿದನು ಕಾಗಿನೆಲೆಯಾದಿಕೇಶವರಾಯ
ಎಲ್ಲರನು ಸಲಹುವನು ಇದಕೆ ಸಂಶಯವಿಲ್ಲ || ೩ ||


TallaNisadiru kandya taalu manave

Author : Kanaka Dasaru

tallaNisadiru kaNDya taalu manave
ellaranu salahuvanu idake samshayavilla || P ||

beTTadaa tudiyalli huTTiruva vRukShakke
kaTTeyanu kaTTi neereradavaru yaaro
huTTisida deva taa hoNegaaranaagiralu
ghaTyaagi salahuvanu idake saMshayavilla ||1
||

aDaviyoLagaaDuvaa mRugapakShigaLigella
aDigaDige aahaaravittavaru yaaro
paDeda jananiya teradi svaami hoNegeeDaagi
biDade rakShipanidake saMdeha beDaa ||2
||

kalloLage huTTiruva krimikeeTagaLigella
allalli aahaara iTTavaru yaaro
phullalocana kaagineleyaadikEshavanu
ellaranu salahuvanu idake saMshayavilla ||3
||

Listen to song by Shri Vidyabhushana




Listen to song by Shri Puttur Narasimha Nayak



Listen to song by Smt. Jayavanti Hirebet


 

Listen to song by Shri Purushottamanand Swami



No comments:

Post a Comment