Pages

Sunday, May 17, 2020

ತಿರುಪತಿ ವೆಂಕಟರಮಣ ನಿನಗೇತಕೆ ಬಾರದು ಕರುಣ / Tirupati Venkata Ramana Ninagetake Baaradu Karuna

ತಿರುಪತಿ ವೆಂಕಟರಮಣ ನಿನಗೇತಕೆ ಬಾರದು ಕರುಣ

ಗೀತ ರಚನೆ :ಶ್ರೀ ಪುರಂದರ ದಾಸರು 


ತಿರುಪತಿ ವೆಂಕಟರಮಣ ನಿನಗೇತಕೆ ಬಾರದು ಕರುಣ ನಿನಗೇತಕೆ ಬಾರದು ಕರುಣ ||ಪ||
ನಂಬಿದೆ ನಿನ್ನಯ ಚರಣ ಪರಿಪಾಲಿಸಬೇಕೊ ಕರುಣ ಕರುಣ ||ಅ.ಪ||

ಅಳಗಿರಿಯಿಂದಲಿ ಬಂದಾ ಸ್ವಾಮಿ ಅಂಜನಗಿರಿಯಲಿ ನಿಂದ
ಕೊಳಲೂದೊ ಧ್ವನಿ ಚಂದಾ ನಮ್ಮ ಕುಂಡಲರಾಯ ಮುಕುಂದ ||೧||

ಬೇಟೆಯಾಡುತ ಬಂದಾ ಸ್ವಾಮಿ ಬೆಟ್ಟದ ಮೇಲೆ ನಿಂದಾ
ನೀಟುಗಾರ ಗೋವಿಂದಾ ಅಲ್ಲಿ ಜೇನು ಸಕ್ಕರೆಯನು ತಿಂದಾ ||೨||

ಮೂಡಲಗಿರಿಯಲಿ ನಿಂತ ಮುದ್ದು ವೆಂಕಟಪತಿ ಬಲವಂತ
ಈಡಿಲ್ಲ ನಿನಗೆ ಶ್ರೀಕಾಂತಾ ಈರೇಳು ಲೋಕದನಂತ ||೩||

ಆಡಿದರೆ ಸ್ಥಿರವಪ್ಪ ಅಬದ್ಧಗಳಾಡಲು ಒಪ್ಪ
ಬೇಡಿದ ವರಗಳನಿಪ್ಪ ನಮ್ಮ ಮೂಡಲಗಿರಿ ತಿಮ್ಮಪ್ಪ ||೪||

ಅಪ್ಪವ ಅತಿರಸ ಮೆದ್ದ ಸ್ವಾಮಿ ಅಸುರರ ಕಾಲಲಿ ಒದ್ದ
ಸತಿಯರ ಕೂಡಾಡುತಲಿದ್ದ ಸ್ವಾಮಿ ಸಕಲ ದುರ್ಜನರನು ಗೆದ್ದ ||೫||

ಬಗೆಬಗೆ ಭಕ್ಷ್ಯ ಪರಮಾನ್ನ ನಾನಾ ಬಗೆಯ ಸಕಲ ಶಾಲ್ಯಾನ್ನ
ಬಗೆಬಗೆ ಸೊಬಗು ಮೋಹನ್ನ ನಮ್ಮ ನಗೆಮುಖದ ಪ್ರಸನ್ನ ||೬||

ಕಾಶೀ ರಾಮೇಶ್ವರದಿಂದ ಅಲ್ಲಿ ಕಾಣಿಕೆ ಬರುವುದೆ ಚಂದ
ದಾಸರ ಕೂಡೆ ಗೋವಿಂದ ಅಲ್ಲಿ ದಾರಿ ನಡೆವುದೇ ಚೆಂದ ||೭||

ಎಲ್ಲ ದೇವರ ಗಂಡ ಅವ ಚಿಲ್ಲರೆ ದೈವದ ಮಿಂಡ
ಬಲ್ಲಿದರಿಗೆ ಉದ್ದಂಡ ಶಿವನ ಬಿಲ್ಲ ಮುರಿದ ಪ್ರಚಂಡ ||೮||

ಕಾಸು ತಪ್ಪಿದರೆ ಪಟ್ಟಿ ಬಡ್ಡಿ ಕಾಸು ಬಿಡದ ಗಂಟು ಕಟ್ಟಿ
ದಾಸನೆಂದರೆ ಬಿಡ ಗಟ್ಟಿ ನಮ್ಮ ಕೇಸಕ್ಕಿ ತಿಮ್ಮಪ್ಪಸೆಟ್ಟಿ ||೯||

ದಾಸರ ಕಂಡರೆ ಪ್ರಾಣ ತಾ ಧರೆಯೊಳಗಧಿಕ ಪ್ರವೀಣ
ದ್ವೇಷಿಯ ಗಂಟಲ ಗಾಣ ನಮ್ಮ ದೇವಗೆ ನಿತ್ಯಕಲ್ಯಾಣ ||೧೦||

ಮೋಸ ಹೋಗುವನಲ್ಲಯ್ಯ ಒಂದು ಕಾಸಿಗೆ ಒಡ್ಡುವ ಕೈಯ
ಏಸು ಮಹಿಮಗಾರನಯ್ಯ ನಮ್ಮ ವಾಸುದೇವ ತಿಮ್ಮಯ್ಯ ||೧೧||

ಚಿತ್ತವಧಾನ ಪರಾಕು ನಿನ್ನ ಚಿತ್ತದ ದಯವೊಂದೆ ಸಾಕು
ಸತ್ವವಾಹಿನಿ ನಿನ್ನ ವಾಕು ನೀನು ಸಕಲ ಜನರಿಗೆ ಬೇಕು ||೧೨||

ಅಲ್ಲಲ್ಲಿ ಪರಿಷೆಯ ಗುಂಪು ಮತ್ತಲ್ಲಲ್ಲಿ ತೋಪಿನ ತಂಪು
ಅಲ್ಲಲ್ಲಿ ಸೊಗಸಿನ ಸೊಂಪು ಮತ್ತಲ್ಲಲ್ಲಿ ಪರಿಮಳದಿಂಪು ||೧೩||

ಅಲ್ಲಲ್ಲಿ ಜನಗಳ ಕೂಟ ಮತ್ತಲ್ಲಲ್ಲಿ ಬ್ರಾಹ್ಮಣರೂಟ
ಅಲ್ಲಲ್ಲಿ ಪಿಡಿದ ಕೋಲಾಟ ಮತ್ತಲ್ಲಿಂದ ಊರಿಗೆ ಓಟ ||೧೪||

ಪಾಪ ವಿನಾಶಿನಿ ಸ್ನಾನ ಹರಿ ಪಾದೋದಕವೇ ಪಾನ
ಕೋಪತಾಪಗಳ ನಿಧಾನ ನಮ್ಮ ಪುರಂದರವಿಠಲನ ಧ್ಯಾನ ||೧೫||


Tirupati Venkata Ramana  Ninagetake Baaradu Karuna 

Author : Shree Purandara Dasaru

tirupati vEnkaTaramaNa ninagyAtake bAradu karuNa ||p||
nambide ninnaya caraNa paripAlisa bEkO karuNa ||a pa||

aLagiriyindalli banda svAmi anjanagiriyali ninda
koLalu dhvaniyudO canda namma kuNDalarAya mukunda ||1||

bEDeyADuta banda svAmi beTTada mEle ninda
vITugAra gOvinda alli jEnu sakkareyanu tinda ||2||

mUDala giriyali ninda muddu vEnkaTapati balavanta
Idilla ninage shrIkAnta IrELu lOkakananta ||3||

Adidare sthiravappa abhaddagaLADalu oppa
bEDida varagaLinippa namma mUDalagiri timmappa ||4||

appavu atirasa metta svAmi asurara kAlali odda
satiya kUDADutalidda svAmi sakala durjanaranu gedda ||5||

bage bage bhakSya paramAnna nAnA bageya sakala shAlyanna
bage bage sobagu mOhanna namma nagumukhada suprasanna ||6||

kAshi rAmEshvaradinda alli kANike baruvudu canda
dAsara kUDe gOvinda alli dAri naDevude canda ||7||

ellA dEvara gaNDa ava cillare daivada miNDa
ballidavarige uddaNDa shiva billa murida pracaNDa ||8||

kAsu tappidare paTTi baTTi kAsu biDade kaNDu kaTTi
dAsanendare biDa gaTTi namma kEsakki timmappasetti ||9||

dAsara kaNDare prANa tA dhareyoLadhika pravINa
dvESiya gaNDala kANa namma dEvage nitya kalyANa ||10||

mOsa hOguvanallayya ondu kAsige oDDuva kayya
Esu mahimegAranayya namma vAsudEva timmayya ||11||

cittAvadhAna parAku ninna cittada daya ondE sAku
satyavAhini ninna vAku nInu sakala janarige bEku ||12||

allalli pariSeya gumbu mattallalli tOpina tampu
allalli sogasina sompu mattallalli parimaLadimpu ||13||

allalli janagaLa kUDa mattallalli brAhmaNarUTa
allalli piDida kOlATa mattallalli uRige Ota ||14||

pApa vinAshini snAna hari pAdOdakave pAna
kOpa tApagaLa nidhAna namma purandara viTTalana dhyAna ||15||



Listen to song below



No comments:

Post a Comment